ಟೈರ್ ಬೆಲೆ ಹೆಚ್ಚಳ=ವಾಹನ ಬೆಲೆ ಏರಿಕೆ

ನೈಸರ್ಗಿಕ ರಬ್ಬರ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅನಿವಾರ್ಯವಾಗಿ ಟೈರ್ ಬೆಲೆಯನ್ನು ಏರಿಸಬೇಕಾಗಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ ಮೂರು ಬಾರಿ ಟೈರ್ ಬೆಲೆ ಏರಿಸಲಾಗಿದ್ದು, ಶೇ.8 ರಿಂದ 10ರಷ್ಟು ಏರಿಕೆ ಕಂಡಿದೆ. ಕಂಪೆನಿಯ ಕಾರು ಟೈರ್ ಗಳ ಬೆಲೆ ರು. 1,200 ರಿಂದ 10,000ರವರೆಗೂ ಇದೆ. ವಾಣಿಜ್ಯ ವಾಹನಗಳ ಟೈರ್ ಬೆಲೆ 8,000 ರಿಂದ ರು.15,000 ಆಗಿದೆ.
ಕಳೆದ ಒಂದೂವರೆ ವರ್ಷಗಳಲ್ಲಿ ನೈಸರ್ಗಿಕ ರಬ್ಬರ್ ನ ಬೆಲೆ ಶೇ.150 ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ 2008ರಲ್ಲಿ ಪ್ರತಿ ಕೆಜಿಗೆ 65 ಇದ್ದ ಬೆಲೆ ಈಗ ಪ್ರತಿ ಕೆಜಿಗೆ 170 ರು ಆಗಿದೆ. ಟೈರ್ ಗಳ ಬೆಲೆ ಹೆಚ್ಚಳವಾದಲ್ಲಿ ಸಹಜವಾಗಿ ವಾಹನ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ವಾಹನಗಳ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ಕಟ್ಟಿಟ್ಟ ಬುತ್ತಿ.


Click it and Unblock the Notifications








