Just In
- 26 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೈರ್ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್
ದೇಶದ ಮುಂಚೂಣಿ ಟೈರ್ ಉತ್ಪಾದನಾ ಕಂಪನಿಯಾಗಿರುವ ಅಪೊಲೊ ಟೈರ್ಸ್ ತನ್ನ ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಮೊದಲ ಬಾರಿಗೆ ಪ್ರತ್ಯೇಕ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ್ದು, ಟೈರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಒದಗಿಸುವ ಗುರಿಹೊಂದಿದೆ.

ಟೈರ್ ಮಾರಾಟ ನಂತರ ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಮತ್ತು ಗುಣಮಟ್ಟದ ಸೇವೆಗಳನ್ನು ನೀಡುವ ಉದ್ದೇಶದೊಂದಿಗೆ ವಿಶೇಷ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಅಪೊಲೊ ಟೈರ್ಸ್ ಕಂಪನಿಯು ದೇಶದ ವಿವಿಧ ಹತ್ತು ನಗರಗಳಲ್ಲಿ ಹೊಸ ಸೇವಾ ಕೇಂದ್ರಗಳಿಗೆ ಚಾಲನೆ ನೀಡುತ್ತಿದ್ದು, ಮೊದಲ ಟೈರ್ ಸೇವಾ ಕೇಂದ್ರವನ್ನು ಗುರುಗ್ರಾಮ್‌ನಲ್ಲಿ ತೆರೆದಿದೆ.

ಹೊಸ ಸೇವಾ ಕೇಂದ್ರಗಳನ್ನು ನೇರವಾಗಿ ಕಂಪನಿಯೇ ನಿರ್ವಹಣೆ ಮಾಡಲಿದ್ದು, ಎಲ್ಲಾ ಮಾದರಿಯ ಟೈರ್‌ಗಳಿಗೂ ಇಲ್ಲಿ ಒಂದೇ ಸೂರಿನಡಿ ಸೇವೆಗಳು ಲಭ್ಯವಿರವಿವೆ ಎಂದು ಕಂಪನಿಯು ಮಾಧ್ಯಮ ಪ್ರಕಟನೆ ಹೊರಡಿಸಿದೆ.

ಟೈರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿವಿಧ ಟಚ್ ಪಾಯಿಂಟ್‌ಗಳಿಗೆ ಗ್ರಾಹಕರು ಅಲೆಯುವುದನ್ನು ತಪ್ಪಿಸಲು ಹೊಸ ಯೋಜನೆಗೆ ಚಾಲನೆ ನೀಡಿರುವ ಅಪೊಲೊ ಕಂಪನಿಯು ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸಲಿದ್ದು, ಸರ್ಟಿಫೈಡ್ ಸಿಬ್ಬಂದಿಯಿಂದಲೇ ಉತ್ತಮ ಸೇವೆಗಳನ್ನು ಒದಗಿಸಲಿದೆ.

ಅಪೊಲೊ ಟೈರ್ಸ್ ಕಂಪನಿಯು ವಿಶೇಷ ಸೇವಾ ಕೇಂದ್ರಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸೇವಾ ಕೇಂದ್ರಗಳಲ್ಲಿ ಕಂಪ್ಯೂಟರೈಸ್ಡ್ ವೀಲ್ಹ್ ಅಲೈನ್ಮೆಂಟೇ , ಆಟೋಮ್ಯಾಟಿಕ್ ಟೈರ್ ಚೇಂಜರ್, ವೀಲ್ಹ್ ಬ್ಯಾಲೆನ್ಸಿಂಗ್ ಮಷಿನ್ ಮತ್ತು ನೈಟ್ರೊಜೆನ್ ಗ್ಯಾಸ್ ಇನ್ಫ್ಲೇಟರ್ ಸೇರಿದಂತೆ ವಿವಿಧ ಸೇವೆಗಳನ್ನು ಹೊಂದಿದೆ. ಹಾಗೆಯೇ ದ್ವಿಚಕ್ರ ವಾಹನಗಳಿಗೆ ಟೈರ್ ಬದಲಾಯಿಸಲು ಮತ್ತು ಸಮತೋಲನಗೊಳಿಸಲು ವಿಶೇಷ ಉಪಕರಣವನ್ನು ಸಹ ಈ ಸೇವಾ ಕೇಂದ್ರಗಳು ಒಳಗೊಂಡಿರಲಿದೆ.

ಇದಲ್ಲದೆ ಹೊಸ ಸೇವಾ ಕೇಂದ್ರಗಳ ಮೂಲಕ ತುರ್ತು ಸಂದರ್ಭಗಳಲ್ಲಿ ಔಟ್ ಡೋರ್ ಸೇವೆಗಳನ್ನು ಸಹ ಆರಂಭಿಸಿದ್ದು, ಒಂದೇ ನಿಲುಗಡೆಯಲ್ಲಿ ಟೈರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಇನ್ನು ಅಪೊಲೊ ಟೈರ್ಸ್ ಕಂಪನಿಯು ಇ-ಕಾಮರ್ಸ್ ಮಾರಾಟ ಮಳಿಗೆಯ ಮೂಲಕ ದ್ವಿಚಕ್ರ ವಾಹನಗಳಿಗೆ ಮತ್ತು ಕಾರುಗಳ ಟಯರ್ ಮಾರಾಟವನ್ನು ಆರಂಭಿಸಿದ್ದು, ಇ-ಕಾಮರ್ಸ್ ಪೋರ್ಟಲ್ ಆರಂಭದೊಂದಿಗೆ‘ಬೈ ಆನ್‌ಲೈನ್, ಫಿಟ್ ಆಫ್‌ಲೈನ್' ಅಭಿಯಾನ ಕೈಗೊಂಡಿದೆ.

‘ಬೈ ಆನ್‌ಲೈನ್, ಫಿಟ್ ಆಫ್‌ಲೈನ್' ಅಭಿಯಾನ ಕೈಗೊಂಡಿರುವ ಅಪೊಲೊ ಟೈರ್ಸ್ ಕಂಪನಿಯು ಟಯರ್ಸ್ ಖರೀದಿ ಮಾಡಿದ ನಂತರ ಹತ್ತಿರದಲ್ಲಿರುವ ಡೀಲರ್ಸ್ ಮೂಲಕ ಉಚಿತವಾಗಿ ಜೋಡಣೆ ಮಾಡಿಕೊಡುವ ಸೌಲಭ್ಯ ಆರಂಭಿಸಿದ್ದು, ಆನ್‌ಲೈನ್ ಟಯರ್ ಮಾರಾಟ ಸೇವೆಗಳಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆನ್‌ಲೈನ್ ಮಳಿಗೆಯ ಮೂಲಕ ಗ್ರಾಹಕರಿಗೆ ಹೊಸ ಮಾದರಿಯ ಟೈರ್‌ಗಳನ್ನು ಖರೀದಿಸಲು ಸುಲಭವಾಗುವಂತೆ ಪೋರ್ಟಲ್ ವಿನ್ಯಾಸಗೊಳಿಸಲಾಗಿದ್ದು, ಯಾವ ವಾಹನಕ್ಕೆ ಯಾವ ಮಾದರಿಯ ಟಯರ್ ಸೂಕ್ತ? ಎನ್ನುವ ಮಾಹಿತಿಯೊಂದಿಗೆ ಟಯರ್ ಗುಣಮಟ್ಟದ ಮಾಹಿತಿಗಳನ್ನು ಸರಳವಾಗಿ ತಿಳಿಸಲಿದೆ.

ಜೊತೆಗೆ ಆನ್‌ಲೈನ್ ಮೂಲಕ ಟಯರ್ ಖರೀದಿಸುವ ಗ್ರಾಹಕರಿಗೆ ರಿಟೇಲ್ ಮಾರಾಟಗಾರರಲ್ಲಿ ಖರೀದಿ ಮಾಡುವುದಕ್ಕಿಂತಲೂ ಹಲವಾರು ಆಫರ್‌ಗಳೊಂದಿಗೆ ಖರೀದಿಗೆ ಅವಕಾಶ ನೀಡಿದ್ದು, ಟೈರ್ ಖರೀದಿ ಮಾಡಿದ ನಂತರ ಅದನ್ನು ವಾಹನಗಳಿಗೆ ಜೋಡಣೆ ಮಾಡಲು ಹತ್ತಿರದ ಡೀಲರ್ಸ್‌ಗಳಿಗೆ ಸೂಚಿಸುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ನಿಮಗೆ ಅನುಕೂಲಕ್ಕೆ ತಕ್ಕಂತೆ ಟಯರ್ ಜೋಡಣೆಗಾಗಿ ಡೀಲರ್ಸ್ ಅನ್ನು ಕೂಡಾ ಫೋರ್ಟಲ್ ಮೂಲಕ ದಿನಾಂಕ ಮತ್ತು ಸಮಯವನ್ನು ಕಾಯ್ದಿಸಬಹುದಾಗಿದ್ದು, ಹಣಪಾವತಿ ವಿಧಾನಗಳು ಕೂಡಾ ಸಾಕಷ್ಟು ಸರಳವಾಗಿವೆ. ಟಯರ್ ಖರೀದಿಗಾಗಿ ಆನ್‌ಲೈನ್ ಪೋರ್ಟಲ್ ದಿನದ 24 ಗಂಟೆ ವಾರದ 7 ದಿನವು ಕಾರ್ಯನಿರ್ವಹಿಸಲಿದ್ದು, ಟಯರ್ ಖರೀದಿಗೆ ಇಎಂಐ ಸೌಲಭ್ಯ ನೀಡಿರುವುದು ಕೂಡಾ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.