ಲಾಕ್‌ಡೌನ್ ನಡುವೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ದೇಶದ ಮುಂಚೂಣಿ ಟೈರ್ ಉತ್ಪಾದನಾ ಕಂಪನಿಯಾಗಿರುವ ಅಪೊಲೊ ಟೈರ್ಸ್ ಹೊಸ ಉತ್ಪಾದನಾ ಘಟಕಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ 7ನೇ ಟೈರ್ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿತು.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿರುವ ಹಿನ್ನಲೆಯಲ್ಲಿ ದೇಶಿಯ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ಅಪೊಲೊ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ 7ನೇ ಘಟಕದಲ್ಲೂ ಟೈರ್ ಉತ್ಪಾದನೆಗೆ ಅಧಿತೃತ ಚಾಲನೆ ನೀಡುವ ಮೂಲಕ ಸಾಗರರೋತ್ತರ ವ್ಯವಹಾರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಸಿದ್ದತೆಯಲ್ಲಿದೆ.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಅಪೊಲೊ ಟೈರ್ಸ್ ಕಂಪನಿಯು ಹೊಸ ಉತ್ಪಾದನಾ ಘಟಕ ಸೇರಿ ಒಟ್ಟು ಏಳು ಟೈರ್ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಏಳನೇ ಘಟಕವನ್ನು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿರುವ ಚಿತ್ತೂರು ಬಳಿ ಆಂಭಿಸಿತು.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಏಳು ಟೈರ್ ಉತ್ಪಾದನಾ ಘಟಕಗಳಲ್ಲಿ ಐದು ಘಟಕಗಳು ಭಾರತದಲ್ಲೇ ನಿರ್ಮಾಣ ಮಾಡಿರುವ ಅಪೊಲೊ ಕಂಪನಿಯು ಮತ್ತು ಇನ್ನೇರಡು ಟೈರ್ ಘಟಕಗಳಲ್ಲಿ ಒಂದು ಘಟಕವನ್ನು ಆಫ್ರಿಕದಲ್ಲಿ ಮತ್ತು ಮತ್ತೊಂದು ಘಟಕದಲ್ಲೂ ಯುರೋಪ್‌ನಲ್ಲಿ ಆರಂಭಿಸಿದೆ.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಚಿತ್ತೂರು ಜಿಲ್ಲೆಯ ಚಿನ್ನಪಂದೂರಿನಲ್ಲಿ ನಿರ್ಮಾಣಗೊಂಡಿರುವ ಅಪೊಲೊ ಹೊಸ ಟೈರ್ ಘಟಕವು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಸುಮಾರು 256 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹೊಸ ಘಟಕದಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ 5 ಲಕ್ಷ ಟೈರ್‌ಗಳು ಉತ್ಪಾದನೆಗೊಳಿಸುವ ಗುರಿಹೊಂದಲಾಗಿದೆ.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಕಂಪನಿಯ ಹೇಳಿಕೆಯ ಪ್ರಕಾರ, 2022ರ ಕೊನೆಗೆ ದಿನಂಪ್ರತಿ ಈ ಹೊಸ ಘಟಕದಲ್ಲಿ 15 ಸಾವಿರ ಪ್ಯಾಸೆಂಜರ್ ಟೈರ್ ಮತ್ತು 3 ಸಾವಿರ ಟ್ರಕ್ ಟೈರ್ ಉತ್ಪಾದನೆ ಮಾಡಬೇಕೆಂಬ ಗುರಿಹೊಂದಲಾಗಿದ್ದು, ಇದಕ್ಕಾಗಿ ಕಂಪನಿಯು ಹೊಸ ಘಟಕದ ಮೇಲೆ ರೂ. 3,800 ಕೋಟಿ ಹೂಡಿಕೆ ಮಾಡಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಹೊಸ ಟೈರ್ ಘಟಕ ನಿರ್ಮಣಕ್ಕೆ 2016-17ರ ಹಣಕಾಸು ವರ್ಷದಲ್ಲೇ ಚಾಲನೆ ನೀಡಿದ್ದ ಕಂಪನಿಯು ಇದೀಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಉತ್ಪಾದನೆಗೆ ಚಾಲನೆ ನೀಡಿದ್ದು, ಹೊಸ ಘಟಕದೊಂದಿಗೆ ಟ್ರಕ್ ಟೈರ್ ಉತ್ಪಾದನೆಯಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಆರಂಭದಲ್ಲಿ ಹೊಸ ಘಟಕವನ್ನು 200 ಎಕರೆ ವಿಸ್ತೀರ್ಣದಲ್ಲಿ ರೂ.1,800 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿತ್ತು. ಆದರೆ ಟೈರ್ ಬೇಡಿಕೆಗೆ ಅನುಸಾರವಾಗಿ ಹೊಸ ಘಟಕವನ್ನು ಹೆಚ್ಚುವರಿ 56 ಎರಕೆ ವಿಸ್ತೀರ್ಣದೊಂದಿಗೆ ಯೋಜನೆಯು ವೆಚ್ಚವನ್ನು ರೂ. 3,800 ಕೋಟಿ ಎಂದು ಅಂದಾಜಿಸಲಾಗಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ಹೊಸ ಘಟಕದೊಂದಿಗೆ ದೇಶಾದ್ಯಂತ ಅತಿ ಕಡಿಮೆ ಅವಧಿಯಲ್ಲಿ ಟೈರ್ ಉತ್ಪನ್ನಗಳನ್ನು ಸಾಗಿಸಲು ಮತ್ತು ಟೈರ್ ರಫ್ತಿಗೆ ಸಹಕಾರಿಯಾಗುವಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ತೆರೆದಿರುವ ಅಪೊಲೊ ಕಂಪನಿಯು ಉದ್ಯೋಗ ಸೃಷ್ಠಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

Most Read Articles

Kannada
English summary
Apollo Tyres Opens New Manufacturing Plant At Chittoor In Andhra Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X