ಮಾರುತಿಗೆ ಟಾಂಗ್ ಕೊಡಲು ಫಿಯೆಟ್ ಸಜ್ಜು

Fiat to launch a small car in 2012 for India
ನವದೆಹಲಿ, ಜು.2: ಸಣ್ಣಕಾರುಗಳಲ್ಲಿ ಮಾರುತಿ, ಹ್ಯುಂಡೆ ಕಾರುಗಳು ಭರ್ಜರಿ ವ್ಯಾಪಾರದಲ್ಲಿ ತೊಡಗಿರಬಹುದು. ಆದರೆ, ಉತ್ತಮ ಇಂಜಿನ್ ಸಾಮರ್ಥ್ಯದೊಂದಿಗೆ 2010 ರಲ್ಲಿ ಹೊಸ ಕಾರನ್ನು ಫಿಯೆಟ್ ರಸ್ತೆಗಿಳಿಸಲಿದ್ದು, ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆ ಹೊಂದಿದೆ. ಭಾರತದ ಮಾರುಕಟ್ಟೆ ಮೇಲೆ ಪ್ರಭುತ್ವ ಸಾಧಿಸಲು ಸರ್ವಸನ್ನದ್ಧರಾಗಿದ್ದೇವೆ ಎನ್ನುತ್ತಾರೆ ಫಿಯೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್.

ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೆ ವಿನ್ಯಾಸಗೊಂಡ ಸಣ್ಣಕಾರು ಫಿಯೆಟ್ ಯುನೊದಿಂದ ಉಂಟಾಗಿರುವ ಕೆಟ್ಟ ಇಮೇಜ್ ಅನ್ನು ತೊಡೆದು ಹಾಕಲು ಹೊಸ ಬ್ರ್ಯಾಂಡ್ ನೇಮ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಪುಂಟೋ ಮಾರಾಟ ಫಿಯೆಟ್ ಗೆ ತೃಪ್ತಿ ತಂದಿದೆ. ಆದರೆ, ಮಾರುಕಟ್ಟೆಯಲ್ಲಿ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಫಿಯೆಟ್ ಹಾಕಿಕೊಂಡಿದೆ.

2010ರಲ್ಲಿ ಸುಮಾರು 40 ಸಾವಿರ ಕಾರುಗಳನ್ನು ಮಾರಾಟ ಮಾಡಿ ಮಾರುಕಟ್ಟೆ ತನ್ನ ಪಾಲು ಶೇ. 1.5 ರಷ್ಟು ಹಿಗ್ಗಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಆದರೆ, ಫಿಯೆಟ್ ಗೆ ಕಠಿಣ ಪ್ರತಿಸ್ಪರ್ಧೆಯಂತೂ ಇದ್ದೇ ಇದೆ. ಮಾರುತಿಯನ್ನು ಬಿಟ್ಟರೆ, ಹ್ಯುಂಡೈ, ಫೋರ್ಡ್ ನಿಂದ ಒಳ್ಳೆ ಪೈಪೋಟಿ ಸಿಗಲಿದೆ. ಹ್ಯುಂಡೈ ಸಣ್ಣಕಾರುಗಳಲ್ಲದೆ , SUV ಗಳನ್ನು ಪರಿಚಯಿಸಲು ಸಿದ್ಧವಾಗಿದೆ.

ಹ್ಯುಂಡೈ ಈಗಾಗಲೇ ಐ10 ಸರಣಿ ಯಶಸ್ಸಿನಿಂದ ಬೀಗುತ್ತಿದೆ. ಫೋರ್ಡ್ ಕೂಡಾ ಫಿಗೋ ಮಾರಾಟದಲ್ಲಿ ಯಶ ಕಂಡಿದೆ. ಪುಂಟೋ ಲಿನಿಯಾ ಕಾರುಗಳ ಮೇಲೆ ಫಿಯೆಟ್ ನಂಬಿಕೆ ಇಟ್ಟುಕೊಂಡಿದ್ದು, ಪಾಲಿಯೋ ಮಾದರಿಯ ಬೇಡಿಕೆ ಕುಸಿತ ತಲೆನೋವಾಗಿದೆ.

ಆದರೆ, ತಾಂತ್ರಿಕವಾಗಿ ಉತ್ತಮವಾಗಿರುವ ಫಿಯೆಟ್, ಮಾರಾಟ ತಂತ್ರವನ್ನು ಅರಿತಿದೆ. ದೇಶದ ಅಟೋಮೊಬೈಲ್ ದಿಗ್ಗಜ ಟಾಟಾ ಸಂಸ್ಥೆ ಜೊತೆ ಕೈಜೋಡಿಸಿದ್ದು, ಗ್ರಾಹಕರಿಗೆ ಒಂದಿಷ್ಟು ಭರವಸೆ ಮೂಡಿಸಿದೆ. ಆದರೆ, ಫಿಯೆಟ್ ಎಲ್ಲರಿಗೂ ತಿಳಿದಿರುವ ಗುಟ್ಟನ್ನು ಹೇಳಬೇಕು.

ಮಾರುತಿ ತಂತ್ರ: ಮಾರುತಿ ಕಾರುಗಳ ಬೇಡಿಕೆ ಹೆಚ್ಚಲು ಕಾರಣ ಉತ್ತಮ ಸರ್ವಿಸಿಂಗ್, ದೇಶದ ಮೂಲೆ ಮೂಲೆಗಳಲ್ಲಿ ಉತ್ತಮ ವರ್ಕ್ ಶಾಪ್ ಹೊಂದಿದೆ ಅಲ್ಲದೆ, ಸ್ಥಳೀಯವಾಗಿ ಆಟೋ ಕಾಂಪೊನೆಂಟ್ ಗಳು, ಉಪಕರಣಗಳು ಸುಲಭವಾಗಿ, ಕಡಿಮೆ ದರದಲ್ಲಿ ಕೈಗೆಟಕುತ್ತವೆ. ಮಧ್ಯಮವರ್ಗದ ಜನರು ಕಾರು ಕೊಳ್ಳುವ ಮೊದಲು ಕಾರು ರಿಪೇರಿ ತಾಣಗಳ ಬಗ್ಗೆ ವಿಚಾರಿಸುವುದು ಅದಕ್ಕೆ. ಈ ವಿಷಯದಲ್ಲಿ ಮಾರುತಿ ಎಲ್ಲರಿಗಿಂತ ಮುಂದಿದೆ.

ಫಿಯೆಟ್ ಈ ತಂತ್ರವನ್ನು ಸೂಕ್ತವಾಗಿ ಬಳಸಿಕೊಂಡು, ಟಾಟಾ ಮೋಟರ್ಸ್ ನ ಸಹಕಾರ ಪಡೆದರೆ ಅಂದುಕೊಂಡಂತೆ ಹೊಸ ಸಂಚಲನ ಸೃಷ್ಟಿಸಲು ಸಾಧ್ಯ ಯಾವುದಕ್ಕೂ ಕಾದುನೋಡೋಣ.

More from DriveSpark

Article Published On: Friday, July 2, 2010, 14:02 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+