Fiat: ಮಾತೃ ಸಂಸ್ಥೆಯ ಸಹಕಾರದೊಂದಿಗೆ ಮರಳಿ ಭಾರತಕ್ಕೆ ಎಂಟ್ರಿ ಕೊಡಲಿದೆ ಫಿಯೆಟ್
ದೈತ್ಯ ಕಂಪನಿಯೊಂದು ಭಾರತಕ್ಕೆ ಫಿಯೆಟ್ ಬ್ರಾಂಡ್ ಅನ್ನು ಮರಳಿ ತರಲು ಸಿದ್ಧವಾಗುತ್ತಿದೆ. ಅಂತರಾಷ್ಟ್ರಿಯ ದೈತ್ಯ ಕಂಪನಿ ಸ್ಟೆಲ್ಲಂಟಿಸ್ ಬಗ್ಗೆ ಹಲವರಿಗೆ ತಿಳಿದೇ ಇರುತ್ತದೆ. ತಿಳಿಯದವರಿಗೆ ಭಾರತದಲ್ಲಿ ಜೀಪ್ ಮತ್ತು ಸಿಟ್ರನ್ ಬ್ರಾಂಡ್‌ಗಳನ್ನು ನಡೆಸುತ್ತಿರುವುದು ಇದೇ ಸ್ಟೆಲ್ಲಂಟಿಸ್ ಗ್ರೂಪ್‌ನವರು, ಇದೀಗ ಫಿಯೆಟ್ ಬ್ರ್ಯಾಂಡ್ ಅನ್ನು ಕೂಡ ಭಾರತಕ್ಕೆ ಮರಳಿ ತರಲು ಸಜ್ಜಾಗಿದ್ದಾರೆ.
ಅಂತರಾಷ್ಟ್ರೀಯವಾಗಿ ಫಿಯಟ್ ಸೇರಿದಂತೆ ಬಹುದೊಡ್ಡ ಬ್ರಾಂಡ್‌ಗಳು ಸ್ಟೆಲ್ಲಂಟಿಸ್ ಒಡೆತನದಲ್ಲಿವೆ. ಸ್ಟೆಲ್ಲಂಟಿಸ್ ಕಳೆದ ತಿಂಗಳ ಆರಂಭದಲ್ಲಿ STLA M ಪ್ಲಾಟ್‌ಫಾರ್ಮ್ ಅನ್ನು ಅನಾವರಣಗೊಳಿಸಿತ್ತು. ಈ ಪ್ಲಾಟ್‌ಫಾರ್ಮ್ ಸ್ಟೆಲ್ಲಂಟಿಸ್ ಗ್ರೂಪ್‌ಗೆ ಬಹುಮುಖ್ಯವಾಗಿದ್ದು, ಇದು STLA ಮೀಡಿಯಂ (M) ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. 2026ರ ಹೊಸ ಜನ್ ಜೀಪ್ ಕಂಪಾಸ್ ಹಾಗೂ ಸಿಟ್ರನ್ ಹೊಸ ಮಾದರಿಗಳಿಗೆ ಇದೇ ಪ್ಲಾಟ್‌ಫಾರ್ಮ್ ಅನ್ನು ಬಳಸಲಿದೆ ಎನ್ನಲಾಗಿದೆ.

ಜಾಗತಿಕವಾಗಿ Stellantis STLA M ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ, ಇದು ಭವಿಷ್ಯದ ಫಿಯೆಟ್ ಮಾದರಿಗಳನ್ನು ಸಹ ಹುಟ್ಟುಹಾಕುತ್ತದೆ. ಹಾಗಾಗಿ ಭಾರತದಲ್ಲಿ ಸಹೋದರ ಬ್ರ್ಯಾಂಡ್‌ಗಳಾದ ಜೀಪ್ ಮತ್ತು ಸಿಟ್ರನ್‌ಗೆ ಸೇವೆ ಒದಗಿಸುವ ಸಿದ್ಧ ಪ್ಲಾರ್ಟ್‌ಫಾರ್ಮ್‌ನೊಂದಿಗೆ, ಫಿಯೆಟ್ ತನ್ನದೇ ಆದ ಮಾದರಿಗಳನ್ನು ಅದೇ ಪ್ಲಾರ್ಟ್‌ಫಾರ್ಮ್ ಆಧಾರದ ಮೇಲೆ ಕನಿಷ್ಠ ಹೂಡಿಕೆಯೊಂದಿಗೆ ತರಲು ಯೋಜಿಸಲಾಗಿದೆ.
ಫಿಯೆಟ್ ಮರುಪ್ರಾರಂಭಕ್ಕೆ ಸ್ಟೆಲ್ಲಂಟಿಸ್ ಮೌಲ್ಯಮಾಪನ: 2019 ರಲ್ಲಿ ಫಿಯೆಟ್ ಭಾರತದಿಂದ ನಿರ್ಗಮಿಸಿದ ವೇಳೆಗೆ BS6 ಹೊರಸೂಸುವಿಕೆ ನಿಯಮಗಳಿಗೆ ಅನುಗುಣವಾಗಿ ನವೀಕರಿಸಲಿಲ್ಲ. ಜೊತೆಗೆ ಫಿಯೆಟ್ ತನ್ನ ಡೀಸೆಲ್ ಎಂಜಿನ್‌ಗಾಗಿ ಇದ್ದ ಪ್ರಮುಖ ಗ್ರಾಹಕರಾದ ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಅನ್ನು ಕಳೆದುಕೊಂಡಿತು, ಈ ಎರಡೂ ಬ್ರ್ಯಾಂಡ್‌ಗಳು BS6ಗೆ ಅಭಿವೃದ್ಧಿಪಡಿಸಿದ ಎಂಜಿನ್‌ಗಳನ್ನು ಅವರೇ ತಯಾರಿಸಿಕೊಂಡರು.

ಸದ್ಯ ಫಿಯೆಟ್‌ಗೆ ನಿಜವಾಗಿಯೂ ಬೇಕಾಗಿರುವುದು ಹೊಸ ಮಾದರಿಯ ಶ್ರೇಣಿ ಮತ್ತು ಹೊಸ ಎಂಜಿನ್ ಜೊತೆಗೆ ಹೊಸ ಹೂಡಿಕೆಯಾಗಿದೆ. ಆ ಸಂದರ್ಭದಲ್ಲಿ ಅದು ಕಾರ್ಯರೂಪಕ್ಕೆ ಬರದಿದ್ದರೂ, STLA M ಪ್ಲಾಟ್‌ಫಾರ್ಮ್‌ನೊಂದಿಗೆ ಈಗ ಅದನ್ನು ಕಾರ್ಯರೂಪಕ್ಕೆ ತರಲು ಸ್ಟೆಲ್ಲಂಟಿಸ್‌ಗೆ ಅವಕಾಶವಿದೆ. ಅಂದುಕೊಂಡಂತೆ ಆದರೆ ಜೀಪ್ ಮತ್ತು ಸಿಟ್ರನ್‌ನೊಂದಿಗೆ ಫಿಯೆಟ್ ಕೂಡ ಇನ್ನಷ್ಟು ಬಲಗೊಳ್ಳುತ್ತದೆ.
ಭಾರತದಲ್ಲಿ ಫಿಯೆಟ್ ಬ್ರಾಂಡ್ ಅನ್ನು ಮರುಪ್ರಾರಂಭಿಸುವ ವಾಣಿಜ್ಯ ಕಾರ್ಯಸಾಧ್ಯತೆಯನ್ನು ಮತ್ತು ಅದನ್ನು ಹೇಗೆ ವಿಭಿನ್ನವಾಗಿ ಮಾರಾಟ ಮಾಡಬಹುದು ಎಂಬುದನ್ನು ಸ್ಟೆಲ್ಲಂಟಿಸ್ ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಲಾಗಿದೆ. ಪ್ರಸ್ತುತ ಭಾರತದಲ್ಲಿ ಸ್ಟೆಲ್ಲಂಟಿಸ್ ಮೂರು ಸ್ಥಾವರಗಳನ್ನು ಹೊಂದಿದ್ದು, ಒಂದು ಹೊಸೂರಿನಲ್ಲಿ, ಮತ್ತೊಂದು ರಂಜನ್‌ಗಾಂವ್‌ನಲ್ಲಿ, ಇನ್ನೊಂದನ್ನು ತಿರುವಳ್ಳೂರಿನಲ್ಲಿ ಇದೆ.

ಏನಿದು STLA M ಪ್ಲಾಟ್‌ಫಾರ್ಮ್: STLA M ನಾಲ್ಕು ಜಾಗತಿಕ BEV (ಬ್ಯಾಟರಿ ಎಲೆಕ್ಟ್ರಿಕ್ ವಾಹನ) ಪ್ಲಾಟ್‌ಫಾರ್ಮ್‌ಗಳಲ್ಲಿ ಮೊದಲನೆಯದು, ಇದು ಹಲವಾರು ಸ್ಟೆಲ್ಲಂಟಿಸ್ ಬ್ರ್ಯಾಂಡ್‌ಗಳಿಂದ ಭವಿಷ್ಯದ ಮಾದರಿಗಳಿಗೆ ಆಧಾರವಾಗಿದೆ. ಇದು ಮಾಡ್ಯುಲರ್ ಪ್ಲಾಟ್‌ಫಾರ್ಮ್ ಆಗಿದ್ದು, 4.3 ಮೀಟರ್‌ಗಳಿಂದ 4.9 ಮೀಟರ್‌ಗಳ ನಡುವಿನ ಉದ್ದದ C- ಮತ್ತು D- ವಿಭಾಗಗಳಲ್ಲಿ - 2.7 ಮೀಟರ್‌ಗಳು ಮತ್ತು 2.9 ಮೀಟರ್‌ಗಳ ನಡುವಿನ ವೀಲ್‌ಬೇಸ್‌ಗಳೊಂದಿಗೆ ವಾಹನಗಳಿಗೆ ಆಧಾರವಾಗಿಸಬಲ್ಲದು.
ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮಾದರಿಗಳು ಮುಂಭಾಗ, ಹಿಂಭಾಗ ಅಥವಾ ನಾಲ್ಕು-ಚಕ್ರ ಡ್ರೈವ್ (4WD), 4WD ಡ್ಯುಯಲ್-ಮೋಟಾರ್ ಸೆಟ್-ಅಪ್ ಅನ್ನು ಒಳಗೊಂಡಿರುತ್ತವೆ. ವಾಹನಗಳ ಪವರ್ 215hp ಮತ್ತು 382hp ನಡುವೆ ಇರುತ್ತದೆ. ಬ್ಯಾಟರಿ ಪ್ಯಾಕ್‌ಗಳು 98kWh ವರೆಗೆ ಗಾತ್ರದಲ್ಲಿರುತ್ತವೆ, WLTP ಸೈಕಲ್‌ನಲ್ಲಿ 700km ರೇಂಜ್ ನೀಡಬಲ್ಲವು.
STLA M ಪ್ಲಾಟ್‌ಫಾರ್ಮ್‌ನಲ್ಲಿ ಕ್ರಾಸ್‌ಒವರ್‌ಗಳು ಮತ್ತು SUV ಗಳನ್ನು ಒಳಗೊಂಡಂತೆ ವಿವಿಧ ಬಾಡಿ ಡಿಸೈನ್‌ಗಳಿಗೆ ಅನುಮತಿಸುತ್ತದೆ. ಸ್ಟೆಲ್ಲಂಟಿಸ್‌ನ ಪ್ರಸ್ತುತ ಲೈನ್-ಅಪ್‌ಗೆ ಆಧಾರವಾಗಿರುವ ಹಳತಾದ PSA ಮತ್ತು FCA ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ ತೂಕವನ್ನು ಕಡಿಮೆ ಮಾಡಲು ಮತ್ತು ಸುಧಾರಿತ ಡ್ರೈವ್, ನಿರ್ವಹಣೆಯನ್ನು ನೀಡಲು ಹೊಸ STLA M ಪ್ಲಾಟ್‌ಫಾರ್ಮ್ ವಿನ್ಯಾಸಗೊಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








