ಪುಟ್ಟ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದ ಫಿಯೆಟ್: 48 ತಿಂಗಳಿಗೆ ರೂ. 3,500 ಪಾವತಿಸಿದ್ರೆ ಸಾಕು

ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಫಿಯೆಟ್ ವಿಶ್ವದ ಅತಿ ಚಿಕ್ಕದಾದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಫಿಯೆಟ್ ಟೊಪೊಲಿನೊ ಹೆಸರಿನ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರನ್ನು ಈಗ ಮಾರಾಟಕ್ಕೆ ಪರಿಚಯಿಸಿದೆ. ಇದರ ಉದ್ದ ಕೇವಲ 2.53 ಮೀಟರ್. ಹಾಗಾಗಿ, ಇದು ಎಂಜಿ ಕಾಮೆಟ್ ಇವಿಗಿಂತಲೂ ಚಿಕ್ಕದಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ಎಲೆಕ್ಟ್ರಿಕ್ ಕಾರಿನ ಮುಂಗಡ ನೋಂದಣಿ ಈಗಾಗಲೇ ಇಟಲಿಯಲ್ಲಿ ಪ್ರಾರಂಭವಾಗಿದೆ. ಮೊದಲ ಹಂತವಾಗಿ ಫಿಯೆಟ್ ಟೊಪೊಲಿನೊ ಇಟಲಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಇದಾದ ನಂತರ ವಿಶ್ವದ ಇತರ ದೇಶಗಳಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಭಾರತದಲ್ಲಿಯೂ ಈ ಕಾರು ಮಾರಾಟವಾಗುವುದೇ ಎಂದು ಕೇಳಿದರೆ, ಮಾರಾಟವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

fiat-topolino-ev-car-italy-price-features

ನಗರ ಬಳಕೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಕಾಂಪ್ಯಾಕ್ಟ್ ನೋಟ ಮತ್ತು ಬೈಕ್ ತರಹದ ಉಪಯುಕ್ತತೆಯಂತಹ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ವಾಹನದ ಗರಿಷ್ಠ ವೇಗವು MG ಕಾಮೆಟ್ EV ಗಿಂತ ಕಡಿಮೆ ಇದೆ. MG ಕಾಮೆಟ್ EV ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇನ್ನು ಫಿಯೆಟ್ ಟೊಪೊಲಿನೊ ಗಂಟೆಗೆ 45 ಕಿ.ಮೀ ವೇಗದಲ್ಲಿ ಚಲಿಸಲಿದೆ.

500e ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು. ಫಿಯೆಟ್ ಟೊಪೊಲಿನೊ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರು ಮಾದರಿಯಾಗಿದೆ. ಈ ಕಾರಿನಲ್ಲಿ 5.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 75 ಕಿ.ಮೀ ವರೆಗೆ ಪ್ರಯಾಣಿಸಬಹುದು. ಈ ಕಾರನ್ನು ಎರಡು ವಿಭಿನ್ನ ರೂಫ್ ಆಯ್ಕೆಗಳೊಂದಿಗೆ ಖರೀದಿಸಬಹುದು.

fiat-topolino-ev-car-italy-price-features
ಫಿಯೆಟ್ ಟೊಪೊಲಿನೊ ಕ್ಯಾನ್ವಾಸ್ ರೂಫ್ ಅಥವಾ ಗಾಜಿನ ರೂಫ್ ನೊಂದಿಗೆ ಲಭ್ಯವಿದೆ. ಈ ಕಾರಿನಲ್ಲಿ ಸಾಂಪ್ರದಾಯಿಕ ಲೋಹದ ರೂಫ್ ನೀಡಲಾಗಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ. ಇದರೊಂದಿಗೆ, ಈ ಕಾರುಗಳಲ್ಲಿ ಡೋರ್ ಮತ್ತು ನಾನ್ ಡೋರ್ ಆಯ್ಕೆಗಳನ್ನು ನೀಡಲಾಗುತ್ತದೆ. ಇದು ಆಸಕ್ತಿದಾಯಕ ಆಯ್ಕೆಯಾಗಿದ್ದು, ಗ್ರಾಹಕರನ್ನು ಸೆಳೆಯಲು ಇದನ್ನು ಪರಿಚಯಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ಹಲವು ವಿಶೇಷತೆಗಳನ್ನು ಹೊಂದಿರುವ ವಾಹನವಾಗಿಯೂ ಈ ಟೊಪೊಲಿನೊವನ್ನು ಮಾರಾಟಕ್ಕೆ ತರಲಾಗಿದೆ. ಕಾರು ಕ್ರೋಮ್-ಲೇಪಿತ ಕನ್ನಡಿಗಳು, ಯುಎಸ್‌ಬಿ ಫ್ಯಾನ್, ಬ್ಲೂಟೂತ್ ಸ್ಪೀಕರ್ ಮತ್ತು ಪ್ರೀಮಿಯಂ ಸೀಟ್ ಕವರ್‌ನೊಂದಿಗೆ ಬರುತ್ತದೆ. ಟೊಪೊಲಿನೊ ಈ ಕಾರನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕೂಡ ಗಮನಿಸಬೇಕಾದ ಸಂಗತಿ.

fiat-topolino-ev-car-italy-price-features

ಕಾರಿನ ಬೆಲೆ USD 8,065 ಆಗಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ರೂ. 6.70 ಲಕ್ಷವಾಗಿದೆ. ಈ ಕಾರಿನತ್ತ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ, ಫಿಯೆಟ್ ಇಟಾಲಿಯನ್ನರಿಗೆ ಅತ್ಯಂತ ಕಡಿಮೆ ಮಾಸಿಕ ಕಂತು ಯೋಜನೆಯನ್ನು ಪರಿಚಯಿಸಿದೆ. ಇದು ತಿಂಗಳಿಗೆ USD 42 ರಂತೆ 48 ತಿಂಗಳ ಕಂತು ಯೋಜನೆಯನ್ನು ಪರಿಚಯಿಸಿದೆ.

ಅಂದರೆ ತಿಂಗಳಿಗೆ ಕೇವಲ ರೂ. 3,500 ಪಾವತಿಸುವ ಮೂಲಕ ಫಿಯೆಟ್ ಟೊಪೊಲಿನೊವನ್ನು ಖರೀದಿಸಬಹುದು. ಫಿಯೆಟ್ ಟೊಪೊಲಿನೊ ಈಗಾಗಲೇ ಇಟಲಿಯಲ್ಲಿ ಭಾರೀ ಸ್ವಾಗತವನ್ನು ಪಡೆದುಕೊಂಡಿದೆ. ವರದಿಗಳ ಪ್ರಕಾರ, ಈ ಕಾರಿನ ಕಾಯ್ದಿರಿಸುವಿಕೆಯು ಈಗಾಗಲೇ 19 ವಾರಗಳವರೆಗೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಫಿಯೆಟ್ ಇದೆ.

fiat-topolino-ev-car-italy-price-features
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 21, 2023, 8:30 [IST]
English summary
Fiat topolino ev car italy price features
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+