ಕಾರುಗಳ ರಫ್ತು ಸೀಮಿತಗೊಳಿಸಿದ ಮಾರುತಿ

Maruti Suzuki to limit exports to last year's level
ಚೆನ್ನೈ, ಜು.21:ದೇಶದ ಅತೀ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಉತ್ಪಾದನಾ ಸಾಮರ್ಥ್ಯದ ಕೊರತೆಯ ಕಾರಣದಿಂದ ಕಾರುಗಳ ರಫ್ತನ್ನು ಕಳೆದ ವರ್ಷದಷ್ಟಕ್ಕೇ ಸೀಮಿತಗೊಳಿಸಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಅಧ್ಯಕ್ಷ ರ್ ಸಿ ಭಾರ್ಗವ ಅವರು ನಾವು ಕಾರುಗಳ ರಫ್ತಿನಲ್ಲಿ ಇತರ ಕಂಪೆನಿಗಳೊಂದಿಗೆ ಸ್ಪರ್ಧಿಸುತಿದ್ದರೂ ಉತ್ಪಾದನೆಯ ಕೊರತೆಯಿಂದ ರಫ್ತನ್ನು ಕಳೆದ ವರ್ಷದಷ್ಟಕ್ಕೇ ಸೀಮಿತಗೊಳಿಸಬೇಕಾಗಿದೆ ಎಂದರು.

ಮಾರುತಿ 2008-09 ನೇ ಸಾಲಿನಲ್ಲಿ 1,47,000 ಕಾರುಗಳನ್ನು ರಫ್ತು ಮಾಡಿದ್ದು ಇದರಲ್ಲಿ ಏ ಸ್ಟಾರ್ ವರ್ಗದ ಕಾರುಗಳ ಸಂಖ್ಯೆ 1.27 ಲಕ್ಷ ವಾಗಿದೆ. ಕಂಪೆನಿ ಯೂರೋಪ್ ದೇಶಗಳಾದ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ನೆದರ್ ಲ್ಯಾಂಡ್ ಗೆ ಕಾರುಗಳನ್ನು ರಫ್ತು ಮಾಡುತಿದ್ದು, ಯೂರೋಪ್ ನ ಹೊರಗೆ ಆಲ್ಜೀರಿಯಾ, ಚಿಲಿ, ಇಂಡೋನೇಷ್ಯಾ ಮತ್ತು ಇತರ ಪಕ್ಕದ ದೇಶಗಳಿಗೆ ಕಾರುಗಳನ್ನು ರಫ್ತು ಮಾಡುತ್ತಿದೆ.

ಈ ವರ್ಷ ಕಂಪೆನಿ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್, ಆಸ್ಟ್ರೇಲಿಯಾ, ನಾರ್ವೆ ದೇಶಗಳಿಗೆ ಕಾರುಗಳನ್ನು ರಫ್ತು ಮಾದಲಿದೆ. ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪೆನಿ ಈಗಾಗಲೇ ಮನೇಸರ್ ನ ತನ್ನ ಕಾರು ಉತ್ಪಾದನಾ ಘಟಕದ ಸಾಮರ್ಥ್ಯದ ಹೆಚ್ಚಳದಲ್ಲಿ ತೊಡಗಿದ್ದು ಇದು 2012 ರಲ್ಲಿ ಪೂರ್ಣಗೊಳ್ಳಲಿದೆ ಎಂದು ಭಾರ್ಗವ ಹೇಳಿದರು.

ಕಂಪೆನಿ ಮನೇಸರ್ ನ ಘಟಕವನ್ನು 1700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾರ್ಷಿಕ 2.5 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯಕ್ಕೆ ನವೀಕರಿಸಲಿದೆ. ಇದರಿಂದ ಕಂಪೆನಿಯ ಒಟ್ಟು ಉತ್ಪಾದನೆ 2012 ರಲ್ಲಿ ವಾರ್ಷಿಕ 12.50ಲಕ್ಷ ಕಾರುಗಳಿಗೇರಲಿದೆ.

ಕಂಪೆನಿಯ ಕಾರುಗಳಿಗೆ ಈಗ ಗ್ರಾಹಕರು ಬುಕ್ ಮಾಡಿದ 3-4 ತಿಂಗಳು ಕಾಯಬೇಕಾಗಿದ್ದು ಡೀಸೆಲ್ ಮಾದರಿಯ ಸ್ವಿಫ್ಟ್ ಡಿಸೈರ್ ಕಾರಿಗೆ ಕಾಯಬೇಕಾದ ಅವಧಿ ಇನ್ನೂ ಹೆಚ್ಚಿದೆ. 2008-09 ರಲ್ಲಿ ಕಂಪೆನಿ ಮೊದಲ ಬಾರಿಗೆ 10 ಲಕ್ಷಕ್ಕಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಇದರಲ್ಲಿ 8.7 ಲಕ್ಷ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು ಸರ್ವಕಾಲಿಕ ದಾಖಲೆಯಾಗಿದೆ.

More from DriveSpark

Article Published On: Wednesday, July 21, 2010, 12:13 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+