ಸಾರ್ಕ್ ರಾಷ್ಟ್ರಗಳ ರಸ್ತೆಗಿಳಿದ ಫಿಯೆಟ್ ಕಾರುಗಳು

ಫಿಯೆಟ್ ತಯಾರಿಕೆಯ ಪಾಲಿಯೊ, ಲಿನೆಯಾ, ಪಂಟೋಗಳನ್ನು ನೆರೆಯ ಬಲಭಾಗದ ಚಾಲನೆ ರೂಢಿಯಲ್ಲಿರುವ ಬಾಂಗ್ಲಾದೇಶ, ನೇಪಾಳ, ಭೂತಾನ, ಶ್ರೀಲಂಕಾ ಸೇರಿದಂತೆ ಸಾರ್ಕ್ ದೇಶಗಳಿಗೆ ರಫ್ತು ಮಾಡಲಿರುವುದಾಗಿ ಫಿಯೆಟ್ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ತರುಣ್ ಖನ್ನ ಸುದ್ದಿಗಾರರಿಗೆ ತಿಳಿಸಿದರು.
ಕಂಪೆನಿ ಈಗಾಗಲೇ 1100 ಪಂಟೋ, 360 ಲಿನೆಯಾ ಮತ್ತು 650 ಪಾಲಿಯೋ ಕಾರುಗಳನ್ನು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಿದೆ. ಕಂಪೆನಿ ಇದೀಗ ಲಿನೆಯಾ ಕಾರಿನ ಉನ್ನತೀಕರಿಸಿದ ಮಾದರಿ ಮತ್ತು ಸಿಎನ್ ಜಿ ಪಂಟೋಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು.
ಫಿಯೆಟ್ ಟಾಟಾ ಮೋಟಾರ್‍ಸ್ ನ ಸಹಯೋಗದಲ್ಲಿ ಈ ವರ್ಷ 40,000 ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಕಳೆದ ಸಾಲಿನಲ್ಲಿ ಕಂಪೆನಿ 24,000 ಕಾರುಗಳನ್ನು ಮಾರಾಟ ಮಾಡಿದ್ದು, ಪ್ರತೀ ತಿಂಗಳಿಗೆ 2500 ಕಾರುಗಳನ್ನು ಮಾರಾಟ ಮಾಡುತ್ತಿದ್ದು ಇದರಲ್ಲಿ 1500 ಪಂಟೋಗಳಾಗಿವೆ ಎಂದು ಅವರು ಹೇಳಿದರು.
ಕಂಪೆನಿ ಪುಣೆಯ ರಂಜನ್ಗಾಂವ್ ನ ಘಟಕ ವಾರ್ಷಿಕ 2 ಲಕ್ಷ ಕಾರುಗಳು ಹಾಗೂ ಮೂರು ಲಕ್ಷ ಎಂಜಿನ್ ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications