ಮಾರುತಿಯ 5 ಹೊಸ ಕಾರು ಬಿಡುಗಡೆಗೆ ಸಿದ್ಧ

ಕಳೆದ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪೆನಿಯ ಮಾರುಕಟ್ಟೆ ಪಾಲು ಶೇ 50 ರಷ್ಟು ದಾಖಲೆಯ ಕುಸಿತವಾಗಿರುವುದರ ಹಿನ್ನೆಲೆಯಲ್ಲಿ ಕಂಪೆನಿ ಈ ಬಿಡುಗಡೆಗೆ ಮುಂದಾಗಿದ್ದು ತನ್ನ ಆಲ್ಟೋ, ಎಸ್ಟಿಲೋ, ವ್ಯಾಗನ್ ಆರ್, ಈಕೋ ಮತ್ತು ಸೇಡನ್ ಎಸ್ಎಕ್ಸ್ ಫೋರ್ ಕಾರುಗಳ ಸಿಎನ್‌ಜಿ ಮಾದರಿಯನ್ನು ಒಂದೇ ದಿನ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಶಶಾಂಕ್ ಶ್ರೀ ವಾಸ್ತವ ಅವರು ಕಂಪೆನಿಯ ಉತ್ಪಾದನೆಗಳಲ್ಲಿ ಸಿಎನ್‌ಜಿ ಮಾದರಿಗಳು ಮುಖ್ಯವಾಗಿದ್ದು ಕಂಪೆನಿ ದೇಶದಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲಿದ್ದು ಮೊದಲ ಬಿಡುಗಡೆಯ ಲಾಭ ಪಡೆಯಲಿದೆ ಎಂದಿದ್ದಾರೆ.


Click it and Unblock the Notifications








