ಮಾರುತಿಯ ಹೊಸ ಸಿಎನ್ ಜಿ ಕಾರುಗಳ ಸುತ್ತ

Maruti launches CNG variants
ನವದೆಹಲಿ, ಆ.15: ದೇಶದ ಅತೀ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ತನ್ನ ಆಲ್ಟೋ, ಎಸ್ಟಿಲೋ, ವ್ಯಾಗನ್ ಆರ್, ಈಕೋ ಮತ್ತು ಎಸ್ ಎಕ್ಸ್ 4 ಕಾರುಗಳ ಸಿಎನ್ ಜಿ ಚಾಲಿತ ಮಾದರಿಗಳನ್ನು ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಕಾರುಗಳ ದೆಹಲಿ ಎಕ್ಸ್ ಶೋ ರೂಂ ಬೆಲೆ 3.23 ಲಕ್ಷ ರೂಪಾಯಿಗಳಿಂದ 7.47 ಲಕ್ಷ ರೂಪಾಯಿಗಳವರೆಗೆ ಇದ್ದು ಪೆಟ್ರೋಲ್ ಚಾಲಿತ ಮಾದರಿಗಳಿಗಿಂತ ಶೇ 15 ರಿಂದ 18 ರಷ್ಟು ದುಬಾರಿಯಾಗಿದೆ. ಸಿಎನ್ ಜಿ ಚಾಲಿತ ಆಲ್ಟೋ ಕಾರಿನ ಬೆಲೆ 3.23 ಲಕ್ಷ ರೂಪಾಯಿಗಳಾಗಿದ್ದು ಇದು ಪೆಟ್ರೋಲ್ ಮಾದರಿಗಿಂತ 45,000 ರೂಪಾಯಿ ಅಧಿಕವಾಗಿದೆ.

ಸೇಡನ್ ಎಸ್ ಎಕ್ಸ್ 4 ಕಾರಿನ ಬೆಲೆ 7.47 ಲಕ್ಷ ರೂಪಾಯಿಗಲಾಗಿದ್ದು ಇದು ಪೆಟ್ರೋಲ್ ಚಾಲಿತ ಕಾರಿಗಿಂತ 55,000 ರೂಪಾಯಿ ಅಧಿಕವಾಗಿದೆ. ಎಸ್ಟಿಲೋ ಬೆಲೆ 4.05 ಲಕ್ಷ ರೂಪಾಯಿಗಳಗಿದ್ದು, ವ್ಯಾಗನ್ ಆರ್ ಕಾರಿನ ದರ 4.11 ಲಕ್ಷ ಹಾಗೂ ಈಕೊ ದರ 3.63 ಲಕ್ಷ ರೂಪಾಯಿಗಳಾಗಿವೆ.

ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಿನ್ಜೋ ನಕನಿಶಿ ಅವರು ಮಾತನಾಡಿ ದೇಶದಲ್ಲೇ ಮೊದಲ ಬಾರಿಗೆ ಉತ್ಕಷ್ಟ ಗುಣಮಟ್ಟದ ಸಿಎನ್ ಜಿ ಚಾಲಿತ ಕಂಪೆನಿ ನಿರ್ಮಿಸಿದ ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು ಇವು ಪರಿಸರ ಸ್ನೇಹಿ ಆಗಿವೆ ಎಂದರು.

ಈ ಸಿಎನ್ ಜಿ ಮಾದರಿಯ ಕಾರುಗಳು ದೆಹಲಿ, ಮುಂಬೈ ಹಾಗೂ ಗುಜರಾತ್ ನಲ್ಲಿ ಲಭ್ಯವಿದ್ದು ದೇಶದಲ್ಲಿ 650 ಸಿ ಎನ್ ಜಿ ಸ್ಟೇಷನ್ ಗಳಿದ್ದು ಮುಂದೆ ಈ ಮಾದರಿಯ ಕಾರುಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದರು. ಕಂಪೆನಿಯ ಮಾರುಕಟ್ಟೆ ಪಾಲು ಈ ಹಣಕಾಸು ವರ್ಷದಲ್ಲಿ ಶೇ 50ಕ್ಕಿಂತ ಕೆಳಗೆ ಕುಸಿದಿರುವ ಹಿನ್ನೆಲೆಯಲ್ಲಿ ಕಂಪೆನಿ ಮಾರಾಟವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.

ಅದರಂತೆ ಸಿ ಎನ್ ಜಿ ಚಾಲಿತ ವಾಹನಗಳನ್ನು ಬಿಡುಗಡೆಗೊಳಿಸಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೋಟಿವ್ ಮ್ಯಾನುಫ್ಯಾಕ್ಚರರ್ಸ್ ಪ್ರಕಾರ ಮಾರುತಿ ಕಳೆದ ಏಪ್ರಿಲ್ - ಜೂನ್ ಅವಧಿಯಲ್ಲಿ 2,82,488 ಕಾರುಗಳನ್ನು ಮಾರಾಟ ಮಾಡಿದ್ದು ಇದು ದೇಶದ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಶೇ 47.68 ರಷ್ಟಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ ಒಟ್ಟು 5,92,405 ಕಾರುಗಳು ಮಾರಾಟವಾಗಿವೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುತಿ ಶೇ 53.13ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಈ 5 ಹೊಸ ಮಾದರಿಯ ಕಾರುಗಳ ಬಿಡುಗಡೆಯಿಂದ ಕಂಪೆನಿ ಒಟ್ಟು ಮಾರುಕಟ್ಟೆ ಪಾಲು ಶೇ.50 ನ್ನು ಮೀರಲಿರುವದಾಗಿ ವಿಶ್ವಾಸ ವ್ಯಕ್ತಪಡಿಸಿದೆ.

Article Published On: Sunday, August 15, 2010, 15:51 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+