ಜುಲೈನಲ್ಲಿ ಮಾರುತಿ ಕಾರು ಮಾರಾಟದಲ್ಲಿ ಹೆಚ್ಚಳ

ಕಂಪೆನಿ ಕಳೆದ ತಿಂಗಳು 1,00,587 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ 10,743 ಕಾರುಗಳ ರಫ್ತು ಕೂಡ ಸೇರಿದೆ. ಕಂಪೆನಿಯ ಆಮ್ನಿ, ವರ್ಸಾ ಮತ್ತು ಈಕೋ ಕಾರುಗಳ ಮಾರಾಟದಲ್ಲಿ ಶೇ.86 ರಷ್ಟು ಏರಿಕೆ ದಾಖಲಾಗಿದೆ.
ಆಲ್ಟೋ, ವ್ಯಾಗನ್ ಆರ್, ರಿಟ್ಜ್, ಝೆನ್, ಎಸ್ಟಿಲೋ, ಸ್ವಿಫ್ಟ್, ಮತ್ತು ಏ ಸ್ಟಾರ್ ಕಾರುಗಳ ಮಾರಾಟದಲ್ಲಿ ಶೇ 33.2 ರಷ್ಟು ಏರಿಕೆ ದಾಖಲಾಗಿದ್ದು, ಒಟ್ಟು 64,000 ಕಾರುಗಳು ಮಾರಾಟವಾಗಿವೆ. ಏ3 ವಿಭಾಗದ ಡಿಸೈರ್ ಹಾಗೂ ಎಸ್ ಎಕ್ಸ್ ಫೋರ್ ಕಾರುಗಳ ಮಾರಾಟದಲ್ಲಿ ಶೇ.13ರಷ್ಟು ಏರಿಕೆ ದಾಖಲಾಗಿದೆ.
ಕಂಪೆನಿ ಕೆಲನಗರಗಳಲ್ಲಿ ಜಾರಿಗೆ ತಂದಿರುವ ಮಾಲಿನ್ಯ ನಿಯಂತ್ರಣ ನಿಯಮಗಳ ಕಾರಣದಿಂದ ಮಾರುಕಟ್ಟೆಯಿಂದ ಹಿಂತೆಗೆದುಕೊಂಡ ಮಾರುತಿ 800ಕಾರುಗಳ ಮಾರಾಟದಲ್ಲಿ ಶೇ.40 ರಷ್ಟು ಕುಸಿತ ದಾಖಲಾಗಿದೆ.


Click it and Unblock the Notifications








