ಮಾರುತಿ ಆಲ್ಟೋ ಹೊಸ ಕಾರು ಬಿಡುಗಡೆ

ಕೆ ಸೀರೀಸ್ ಎಂಜಿನ್ ಹೊಂದಿರುವ ಹೊಸ ಆಲ್ಟೋದ ದೆಹಲಿ ಎಕ್ಸ್ ಶೋ ರೂಮ್ ಬೆಲೆ 3.3 ಲಕ್ಷ ರೂಪಾಯಿಗಳಿಂದ 3.16ಲಕ್ಷ ರೂಪಾಯಿಗಳವರೆಗೆ ಇದೆ. ಈ ಹೊಸ ಆಲ್ಟೊ ಕೆ 10 ಕಾರು ಒಂದು ಲೀಟರಿನ ಪೆಟ್ರೋಲ್ ಇಂಜಿನ್ ಹೊಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿನ್ಜೊ ನಕಾನಿಶಿ ಅವರು ಆಲ್ಟೋದ ಉತ್ತಮ ವಿನ್ಯಾಸ, ಇಂಧನ ಕ್ಷಮತೆ ಮತ್ತು ಆಕರ್ಷಕ ಬೆಲೆ ಇದನ್ನು ಭಾರತದ ಜನಪ್ರಿಯ ಕಾರ್ ನ್ನಾಗಿಸಿದ್ದು, ಹೊಸ ಆಲ್ಟೋ ಕೆ 10 ಕಾರು ಇದನ್ನು ಮುಂದುವರೆಸಲಿದೆ ಎಂದರು.
ಪ್ರಸ್ತುತ ಕಂಪೆನಿ ತಿಂಗಳಿಗೆ 20,000 ಆಲ್ಟೋ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಆಲ್ಟೋ ಕೆ 10 ಪ್ರತೀ ಲೀಟರ್ ಪೆಟ್ರೋಲಿಗೆ 20.2 ಕಿಲೋಮೀಟರ್ ಕ್ರಮಿಸುತ್ತದೆ ಎಂದು ಕಂಪೆನಿ ಹೇಳಿದೆ. 0 ಇಂದ 100 ಕಿ.ಮೀ ವೇಗವನ್ನು 13.3 ಸೆಕೆಂಡುಗಳಲ್ಲಿ ತಲುಪಬಹುದಾಗಿದೆ. ಕಾರಿನ ಬಣ್ಣದ ಬಂಪರ್ ಗಳು, ಟ್ಯೂಬ್ ರಹಿತ ಟೈರುಗಳು ಇನ್ನಿತರ ಆಕರ್ಷಣೆಗಳಾಗಿವೆ.


Click it and Unblock the Notifications








