ಮತ್ತೆ ಭಾರತದ ರಸ್ತೆ ಆಳಲು ಅಂಬಾಸಿಡರ್ ಸಿದ್ಧ

ಹೊರ ವಿನ್ಯಾಸ ಹಳೆ ಲುಕ್ ಹಾಗೆ ಉಳಿಸಿಕೊಂಡು, ಒಳಾಂಗಣ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗುವುದು. ಮುಂದಿನ ವರ್ಷದ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸಂಪೂರ್ಣವಾಗಿ ಹೊಸ ವಿನ್ಯಾಸದ ಅಂಬಾಸಡರ್ ತಯಾರಾಗಲಿದೆ.
ಹೊಸ ಆಕರ್ಷಕ ವಿನ್ಯಾಸ ರೂಪಿಸಲು ಯುರೋಪಿನ ತಜ್ಞರನ್ನು ಹಿಂದೂಸ್ತಾನ್ ಮೋಟಾರ್ಸ್ ಕರೆಸಿಕೊಂಡಿದೆ. ಜುಲೈ 2011 ರ ವೇಳೆಗೆ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ ಎಂದು ಹೆಚ್ ಎಂ ಮುಖ್ಯಸ್ಥ ಸಿಕೆ ಬಿರ್ಲಾ ಹೇಳಿದರು.
BS IV ಹಾಗೂ BS V 1.5 ಲೀ ಮತ್ತು 2 ಲೀ ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್ ಗಳನ್ನು ಹೊಸ ಅಂಬಾಸಡರ್ ಹೊಂದಿರುತ್ತದೆ. ಕಾರಿನ ವಿನ್ಯಾಸ ಹಾಗೂ ಕಾರ್ಯ ಕ್ಷಮತೆ ಹೆಚ್ಚಳಕ್ಕಾಗಿ ಯುರೋಪಿನ ಆಟೋಮೊಬೈಲ್ ತಜ್ಞರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮತ್ತೆ ಅಂಬಾಸಡರ್ ನ ಸುವರ್ಣಯುಗ ಆರಂಭವಾಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜಾ.
ಹೊಸ ಅಂಬಾಸಡರ್ ಕಾರಿಗೆ ಸುಮಾರು 5 ರಿಂದ 7 ಲಕ್ಷ ರು ನಿಗದಿ ಪಡಿಸಲಾಗಿದೆ. ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಅಂಬಾಸಡರ್ ಕಾರಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾಗರೋತ್ತರ ದೇಶಗಳಿಗೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಹಿಂದೂಸ್ತಾನ್ ಮೋಟಾರ್ಸ್ ಯೋಜಿಸಿದೆ. 70 ರ ದಶಕ ಭಾರತದ ನೆಚ್ಚಿನ ಟ್ಯಾಕ್ಸಿ ಕಾರು ಮತ್ತೆ ತನ್ನ ಪ್ರಾಬಲ್ಯ ಮೆರೆಯಲು ಸರ್ವ ಸನ್ನದ್ಧವಾಗಿದೆ.


Click it and Unblock the Notifications








