ನಿಸ್ಸಾನ್ ಕಾರು ಕೂಡಾ ಮಾರುತಿ ತಯಾರಿಸಲಿದೆ

ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಕಂಪೆನಿ ಈಗ ನಿಸ್ಸಾನ್ ಕಂಪೆನಿ ಜೊತೆ ಕಾರುಗಳನ್ನು ತಯಾರಿಸಿಕೊಡಲು ಮಾಡಿಕೊಂಡ ಒಪ್ಪಂದದಲ್ಲೇ ಇತರ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದೆ ಎಂದರು. ಕಂಪೆನಿಯ ಉತ್ಪಾದನಾ ವೆಚ್ಚ ಕಡಿಮೆಯಾಗಿದ್ದು, ಕಂಪೆನಿಯ ಮಾದರಿಗಳಿಗಿಂತ ವಿಭಿನ್ನ ಮಾದರಿಯ ಕಾರುಗಳ ತಯಾರಿಕೆ ಮಾಡಿಕೊಡಲು ಸಿದ್ಧವಿದೆ ಎಂದು ಅವರು ಹೇಳಿದರು.
ಯುರೋಪ್ ನ ಮಾರುಕಟ್ಟೆ ಕಳೆದ ವರ್ಷ ಸಣ್ಣ ಕಾರುಗಳ ಮಾರುಕಟ್ಟೆಯನ್ನು ಹೆಚ್ಚಿಸಿದೆ ಎಂದ ಅವರು ಈ ವರ್ಷ ಕಳೆದ ವರ್ಷದಷ್ಟೇ ಕಾರುಗಳನ್ನು ತಯಾರಿಸಲು ನಿಸ್ಸಾನ್ ನಿಂದ ಬೇಡಿಕೆ ಬಂದಿಲ್ಲ ಎಂದರು.
ಜಪಾನ್ ನ ನಾಲ್ಕನೇ ಅತೀ ದೊಡ್ಡ ಕಾರು ತಯಾರಿಕಾ ಕಂಪೆನಿ ನಿಸ್ಸಾನ್, ಮಾರುತಿಯ ಎ ಸ್ಟಾರ್ ಕಾರುಗಳನ್ನು ಪಿಕ್ಸೋ ಬ್ರಾಂಡ್ ನಡಿಯಲ್ಲಿ ಯೂರೋಪ್ ನಲ್ಲಿ ಮಾರಾಟ ಮಾಡುತ್ತಿದ್ದು ಕಳೆದ ವರ್ಷ 50,000 ಕಾರುಗಳನ್ನು ಯೂರೋಪ್ ನಲ್ಲಿ ಮಾರಾಟ ಮಾಡಿದೆ.
ಆದರೆ ಈ ವರ್ಷ ಕಂಪೆನಿ 20,000 ಕಾರುಗಳನ್ನು ನಿಸ್ಸಾನ್ ಗೆ ತಯಾರಿಸಿಕೊಡುವ ಅಂದಾಜಿಸಿದೆ ಎಂದು ಭಾರ್ಗವ ಹೇಳಿದರು. ವೋಕ್ಸ್ ವ್ಯಾಗನ್ ಕಂಪೆನಿಗೆ ಮಾರುತಿ ಒರಿಜಿನಲ್ ಇಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ ಆಗುವ ಸಾದ್ಯತೆಯನ್ನೂ ಅವರು ತಳ್ಳಿ ಹಾಕಲಿಲ್ಲ.
ಮಾರುತಿ 1,700 ಕೋಟಿ ರೂಪಾಯಿಗಳ ಹೂಡಿಕೆಯ ಮೂಲಕ ತನ್ನ ಮನೇಸರ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಯೋಜನೆ ಹಾಕಿಕೊಂಡಿದೆ.


Click it and Unblock the Notifications








