ಗ್ರಾಹಕ ಸ್ನೇಹಿ ವೋಕ್ಸ್ ವ್ಯಾಗನ್ ಪೋಲೋ ಕಾರು

ಹೊಸ ಪೋಲೋ ಕಾರಿನಲ್ಲಿ 4 ಸಿಲಿಂಡರ್ ಪೆಟ್ರೋಲ್ ಇಂಜಿನ್ 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್. ಇಂಧನ ಮಿತವ್ಯಯಕಾರಿಯಾಗಿದ್ದು ಪ್ರತಿ ಲೀಟರ್ ಗೆ 15.96 ಕಿ.ಮೀವರೆಗೂ ಓಡಲಿದೆ. ಪುಣೆಯ ಚಕನ್ ನ ಘಟಕದಲ್ಲಿ ಪೋಲೋ ಕಾರುಗಳನ್ನು ತಯಾರಿಸಿ ಹೊರಬಿಡಲಾಗುತ್ತಿದೆ.
ಕಡಿಮೆ ಅವಧಿಯಲ್ಲೇ ಹೊಸ ಅವೃತ್ತಿಯ ಕಾರು ಹೊರತ್ತಿರುವುದು ಗ್ರಾಹಕರಿಗೆ ಆಚ್ಚರಿ ಮೂಡಿಸಿದರೂ, ಗ್ರಾಹಕಸ್ನೇಹಿ ತತ್ವಕ್ಕೆ ಬದ್ಧರಾಗಿ ಹೊಸ ಕಾರು ವಿನ್ಯಾಸಗೊಳಿಸಿದ್ದು, ಸುಮಾರು 4.8 ಲಕ್ಷ ಬೆಲೆಯ 1.2 ಲೀ ಸಾಮರ್ಥ್ಯದ ಪೋಲೋ ಕಾರು ಮಾರಾಟಕ್ಕೆ ಯಾವುದೇ ಧಕ್ಕೆಯಿಲ್ಲ . ಹೊಸ ಕಾರು ಪೂರಕವಾಗಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ವೋಕ್ಸ್ ವ್ಯಾಗನ್ ನ ನಿರ್ದೇಶಕರಲ್ಲಿ ಒಬ್ಬರಾದ ನೀರಜ್ ಗರ್ಗ್ ಹೇಳಿದರು.


Click it and Unblock the Notifications








