ನ್ಯಾನೋ ಕಾರು ವಾಪಸ್, ಸುಳ್ಳು ಸುದ್ದಿ :ಟಾಟಾ

ಸುರಕ್ಷಿತ ನಿಯಮಗಳಿಗನುಸಾರವಾಗಿ ನ್ಯಾನೋ ಕಾರು ವಿನ್ಯಾಸಗೊಳಿಸಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ನ್ಯಾನೋ ಕಾರಿಗೆ ದಿಢೀರ್ ಎಂದು ಬೆಂಕಿ ಹತ್ತಿದ ಕೆಲ ಪ್ರಕರಣಗಳನ್ನು ಉದಾಹರಿಸಿ ಸಂಸ್ಥೆಯ ಹೆಸರು ಕೆಡಿಸಲು ಕೆಲವರು ಮುಂದಾಗಿದ್ದಾರೆ. ನ್ಯಾನೋ ಕಾರಿನಲ್ಲಿ ಯಾವುದೇ ದೋಷವಿಲ್ಲ ಎಂದು ಸಂಸ್ಥೆ ಹೇಳಿದೆ.
ಅಲ್ಲಿಗೂ ಗ್ರಾಹಕರಿಗೆ ತೃಪ್ತಿಯಾಗದಿದ್ದರೆ, ಉಚಿತವಾಗಿ ಸುರಕ್ಷತೆ ಪರೀಕ್ಷೆ ನಡೆಸಬಹುದು. ಗ್ರಾಹಕರಿಗೆ ಇದು ಐಚ್ಛಿಕವಾಗಿದೆ. ನಾವು ಯಾವುದೇ ಕಾರನ್ನು ಹಿಂದಕ್ಕೆ ಪಡೆಯುತ್ತಿಲ್ಲ. ಯಾವುದೇ ಹೊಸ ಸುರಕ್ಷಿತ ಸೌಲಭ್ಯ ಒದಗಿಸುವ ಯೋಜನೆಯಿಲ್ಲ. ಈಗಾಗಲೇ 70,000 ನ್ಯಾನೋ ಕಾರುಗಳನ್ನು ಟಾಟಾ ಮೋಟರ್ಸ್ ಮಾರಾಟ ಮಾಡಿದ್ದು, ಶೇ. 85ರಷ್ಟು ಗ್ರಾಹಕರು ಟಾಟಾ ಒದಗಿಸುವ ಸೇವೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications








