ಥೈಲ್ಯಾಂಡ್ ಎಕ್ಸ್ ಪೋನಲ್ಲಿ ಹೋಂಡಾ ಹೊಸ ಕಾರು

Honda’s prototype compact car for Thailand Motor Expo
ನವದೆಹಲಿ, ನ.15: ಜಪಾನ್ ಮೂಲದ ಕಾರು ಕಂಪೆನಿ ಹೋಂಡಾ ಸಂಸ್ಥೆಯ ಭಾರತದ ವಿಭಾಗ ದೊಂದಿಗೆ ಹೊರ ಬಂದಿದೆ. ಈ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋನಲ್ಲಿ ಹೊಚ್ಚ ಹೊಸ ಸಣ್ಣಕಾರಿನ ವಿನ್ಯಾಸವನ್ನು ಪ್ರದರ್ಶಿಸಲು Honda Siel Cars India ಸಜ್ಜಾಗಿದೆ. ಜಪಾನ್ ಮೂಲದ ಹೋಂಡಾ ಕಾರು ಕಂಪೆನಿಯ ಭಾರತದ ವಿಭಾಗ ಹೊಸ ಹೊಸ ಕಾರು ವಿನ್ಯಾಸದಿಂದ ಗ್ರಾಹಕರನ್ನು ಸೆಳೆಯಲು ಎಲ್ಲ ಸಿದ್ಧತೆ ನಡೆಸಿದೆ.

ಕಾರಿನ ಮಾದರಿಯನ್ನು ವರ್ಷಾರಂಭದಲ್ಲಿ ದೆಹಲಿ ಆಟೋ ಎಕ್ಸ್ ಪೋ 2010ರಲ್ಲಿ ಪ್ರದರ್ಶಿತಗೊಂಡು ಜನಮೆಚ್ಚುಗೆ ಕಂಡ ಈ ಕಾರಿನ ಮಾದರಿ ಈಗ ಥೈಲ್ಯಾಂಡ್ ನ ಆಟೋ ಎಕ್ಸ್ ಪೋಗೆ ಹೋಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಈ ಕಾರು ಕಾಣಿಸಿಕೊಳ್ಳಲಿದೆ. ಕಾರಿನ ಬೆಲೆ ಸುಮಾರು 5 ಲಕ್ಷ ರು ಎನ್ನಲಾಗಿದೆ. ವಿಶ್ವದಾದ್ಯಂತ ಕಾರನ್ನು ಪರಿಚಯಿಸಲಾಗುವುದು ಹಾಗೂ ಈ ಕಾರು ಥೈಲ್ಯಾಂಡ್ ಮಾರುಕಟ್ಟೆಯನ್ನು 2011ರಲ್ಲಿ ಪ್ರವೇಶಿಸಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಹೋಂಡಾ ಹಾಗೂ ಸಿಯೆಲ್ ಸಂಸ್ಥೆಯ ಜಂಟಿ ಯೋಜನೆಯಂತೆ ಈ ಹೊಸ ಕಾರಿನ ಎರಡು ಆವೃತ್ತಿಗಳನ್ನು ಹೊರ ತರುವ ಸಾಧ್ಯತೆಯಿದೆ. ಭಾರತದ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಒಂದು ಕಾರನ್ನು ರೂಪಿಸಲಾಗಿದೆ. ಇಂಧನ ಉಳಿತಾಯಕ್ಕೆ ಆದ್ಯತೆ ನೀಡಿ ಇನ್ನೊಂದು ಕಾರನ್ನು ವಿನ್ಯಾಸಗೊಳಿಸಿದ್ದು, ಅದನ್ನು ಥೈಲ್ಯಾಂಡ್ ನಲ್ಲಿ ಪರಿಚಯಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಸಣ್ಣ ಕಾರುಗಳ ಮಾದರಿಗಳ ಜೊತೆಗೆ ಅಕಾರ್ಡ್, ಸಿಟಿ, ಸಿವಿಕ್, ಜಾಜ್, ಸಿಆರ್-ವಿ ಹಾಗೂ ಫ್ರೀಡ್ ಮಾದರಿಗಳನು ಪ್ರದರ್ಶನಕ್ಕಿಡಲಾಗುತ್ತದೆ. ಮೋಟರ್ ಸೈಕಲ್ CBR250R, ಸ್ಕೂಟರ್ ಮಾದರಿ PCX ಗಳನ್ನು ಥೈಲ್ಯಾಂಡ್ ಆಟೋ ಎಕ್ಸೋನಲ್ಲಿ ಕಾಣಬಹುದು.

More from DriveSpark

Article Published On: Monday, November 15, 2010, 11:05 [IST]
English summary
The Indian wing of the Japanese car company Honda, Honda Siel Cars India is making efforts to display the prototype compact car at the ensuing Thailand Motor Expo this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+