ನಿಮಗಾಗಿ ಮಿಟ್ಸುಭಿಷಿ ಹೊಸ ಐಷಾರಾಮಿ ಕಾರು

Mistsubishi Evo X
ನವದೆಹಲಿ, ನ.19: ಆಟೋಕಾರ್ ಪರ್ಫಾರ್ಮೆನ್ಸ್ ಷೋನಲ್ಲಿ ಮಿಟ್ಸುಭಿಷಿ ಸಂಸ್ಥೆಯ ಹೊಚ್ಚ ಹೊಸ ಐಷಾರಾಮಿ ವಾಹನ ಎವಲ್ಯೂಷನ್ ಎಕ್ಸ್ (ಎವೋ ಎಕ್ಸ್ ) ಪ್ರದರ್ಶನಗೊಳ್ಳುತ್ತಿದೆ.

2.0 ಲೀ ಪೆಟ್ರೋಲ್ ಇಂಜಿನ್, 291 bhp ಶಕ್ತಿ ಸಾಮರ್ಥ್ಯವಿದೆ. 0-100 Kph ಅನ್ನು 6.6 ಸೆಕೆಂಡುಗಳಲ್ಲಿ ಹಾಗೂ 60 ರಿಂದ 120 ಕಿ.ಮೀ/ಗಂಟೆ ವೇಗವನ್ನು 5.4 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. 6 ವೇಗ ಸ್ಪೀಡ್ ಗೇರ್, ಎರಡು ಕ್ಲಚ್, DSG ಮಾದರಿ ಗೇರ್ ಬಾಕ್ಸ್. ಕಾರಿನ ಆಕ್ಸಿಲರೇಷನ್ ಅದ್ಭುತವಾಗಿದ್ದು, ಗರಿಷ್ಠ 180ಕಿ.ಮೀ/ಗಂಟೆ ವೇಗವನ್ನು ತಲುಪಬಲ್ಲುದು. ಮಿಟ್ಸುಭಿಷಿ Evo X ಬೆಲೆ 49.95 ಲಕ್ಷ ರೂ( ಎಕ್ಸ್ ಷೋ ರೂಂ, ನವದೆಹಲಿ). ಕ್ರೀಡಾ ವಾಹನವಾಗಿ ಭಾರತೀಯ ಮಾರುಕಟ್ಟೆಯಲ್ಲಿ ವಿಜೃಂಭಿಸಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

ಸದ್ಯಕ್ಕೆ ಭಾರತದಲ್ಲಿ ಐದು ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಿಟ್ಸುಭಿಷಿ ಲ್ಯಾನ್ಸರ್(ಸೆಡಾನ್), ಮಿಟ್ಸುಭಿಷಿ ಸೆಡಿಯಾ (ಸೆಡಾನ್), ಮಿಟ್ಸುಭಿಷಿ ಪಜೆರೊ (SUV). ಮಿಟ್ಸುಭಿಷಿ ಔಟ್ ಲ್ಯಾಂಡರ್ (SUV) ಹಾಗೂ ಮಿಟ್ಸುಭಿಷಿ ಮಾಂಟೆರೊ(SUV). ಎವೋ ಎಕ್ಸ್ ಹಾಗೂ ಮಾಂಟೆರೋ ಪರಿಚಯಿಸುವ ಮೂಲಕ ಭಾರತದ ಆಟೋ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಮಿಟ್ಸುಭಿಷಿ ಚಿಂತಿಸಿದೆ.

ಹೊಚ್ಚ ಹೊಸ ತಂತ್ರಜ್ಞಾನ, ಹೆಚ್ಚಿನ ಶಕ್ತಿ ಹಾಗೂ ಸೌಲಭ್ಯಗಳ ಮೂಲಕ ಮಾಂಟೆರೊ ರಸ್ತೆಗಿಳಿಯಲಿದ್ದು, ಟೊಯೋಟಾ ಫಾರ್ಚುನರ್, ಟೊಯೋಟಾ ಲ್ಯಾಂಡ್ ಕ್ರೂಸರ್ ಪರಾಡೊ, ಆಡಿ Q7, ಬಿಎಂಡಬ್ಲ್ಯೂ X3 ಹಾಗೂ ಫೋರ್ಡ್ ಎಂಡೆವರ್ ಮುಂತಾದ ವಾಹನಗಳಿಗೆ ಸಡ್ಡು ಹೊಡೆಯಲು ಕಾದಿದೆ. ಹಾಗೆಯೇ ಎವೋ ಎಕ್ಸ್ ಕೂಡಾ ವೋಲ್ವೋ ಎಸ್ 80, ಆಡಿ A4 ಹಾಗೂ ಬಿಎಂಡಬ್ಲ್ಯೂ X5 ಜೊತೆ ಸ್ಪರ್ಧಿಸಲಿದೆ.

More from DriveSpark

Article Published On: Friday, November 19, 2010, 11:00 [IST]
English summary
The new Mistsubishi Evo X is on display in the Autocar Performance Show. Evo X is powered by turbocharged 2.0- litre petrol engine. This car is expected to be one of the best sports car for the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+