ಟೋಯೋಟಾ ಇಟಿಯೋಸ್ ಕಾರು 4.96ಲಕ್ಷಕ್ಕೆ

ಮಾರುತಿ ಡಿಜೈರ್, ಟಾಟಾ ಇಂಡಿಗೋ ಹಾಗು ಹೋಂಡಾ ಸಿಟಿ ವಿರುದ್ಧ ನೇರ ಪೈಪೋಟಿಗೆ ಇಟಿಯೋಸ್ ಇಳಿದಿದೆ. ಬೆಂಗಳೂರಿನ ಬಿಡದಿಯ ಟೋಯೋಟಾ ಘಟಕಕ್ಕೆ ಹೆಚ್ಚಿನ ಬಂಡವಾಳ ಹರಿದು ಬಂದಿದ್ದು, ಸುಮಾರು 3,200 ಕೋಟಿ ರು ಹೂಡಿಕೆ ಮಾಡಲಾಗಿದೆ. ಈ ಘಟಕದಿಂದ ವಾರ್ಷಿಕವಾಗಿ ಸುಮಾರು 70,000 ವಾಹನಗಳನ್ನು ಉತ್ಪಾದಿಸಲಾಗುತ್ತದೆ.
ಸುಮಾರು 1,500ಸಿಸಿ ಪೆಟ್ರೋಲ್ ಇಂಜಿನ್ ವುಳ್ಳ ಇಟಿಯೋಸ್ ಸ್ಫೋರ್ಟಿಂಗ್ ಹೊರವಿನ್ಯಾಸ ಹೊಂದಿದೆ. ಡಿಸೇಲ್ ಆವೃತ್ತಿಯ ಕಾರು ಮುಂದಿನ ವರ್ಷಾಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಹ್ಯಾಚ್ ಬ್ಯಾಕ್ ಇಟಿಯೋಸ್ ಲಿವಾ ಆವೃತ್ತಿಯನ್ನು ಮಾರ್ಚ್ 2011ರ ವೇಳೆಗೆ ಪರಿಚಯಿಸಲು ಟೋಯೋಟಾ ನಿರ್ಧರಿಸಿದೆ. ಇಟಿಯೋಸ್ ನ ಬುಕ್ಕಿಂಗ್ ಜನವರಿ 2011ರಿಂದ ಆರಂಭವಾಗಲಿದೆ.
ಸದ್ಯಕ್ಕೆ ಟೋಯೋಟಾ ಇನ್ನೋವಾ(MUV), ಕೊರೊಲ್ಲಾ ಹಾಗೂ ಕಾಮ್ರೆ ಐಷಾರಾಮಿ ಕಾರು, ಫಾರ್ಚ್ಯೂನರ್ SUV ಮಾರಾಟದಲ್ಲಿ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ. ವಾರ್ಷಿಕವಾಗಿ ಸುಮಾರು 1,45,000 ಫಾರ್ಚೂನರ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಫಾರ್ಚ್ಯೂನರ್ ಹಾಗೂ ಇಟಿಯೋಸ್ ಉತ್ಪಾದನೆಯನ್ನು 2011ರಲ್ಲಿ ದ್ವಿಗುಣಗೊಳಿಸುವುದು ಹಾಗೂ ಇಟಿಯೋಸ್ ಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಭದ್ರವಾದ ನೆಲೆ ಕಲ್ಪಿಸುವುದು ಟೋಯೋಟಾ ಮುಂದಿರುವ ಸದ್ಯದ ಸವಾಲಾಗಿದೆ.
ಇಟಿಯೋಸ್ ಆರು ಮಾದರಿಗಳಲ್ಲಿ ಲಭ್ಯವಾಗಲಿದ್ದು, ಆರಂಭಿಕ ಬೆಲೆ ರೂ 4,96 ಲಕ್ಷ (ದೆಹಲಿ ಎಕ್ಸ್‌ಷೋರೂಂ ಬೆಲೆ) ಇದ್ದರೆ, ಉನ್ನತ ಶ್ರೇಣಿಯ ಬೆಲೆ ರೂ 6.86 ಲಕ್ಷ ಇದೆ. ಬುಕಿಂಗ್ ಬುಧವಾರದಿಂದಲೇ ಆರಂಭವಾಗಿದ್ದು ರೂ 50 ಸಾವಿರ ಠೇವಣಿ ಇರಿಸಬೇಕು. ಕಿರ್ಲೋಸ್ಕರ್ ಸಮೂಹದ ಜಂಟಿ ಸಹಭಾಗಿತ್ವದಲ್ಲಿ ನಗರದ ಹೊರ ವಲಯದ ಬಿಡದಿಯಲ್ಲಿನ 2ನೇ ಘಟಕದಲ್ಲಿ 'ಇಟಿಯೋಸ್" ಕಾರುಗಳನ್ನು ತಯಾರಿಸಲಾಗುತ್ತಿದೆ. ಖ್ಯಾತ ಸಂಗೀತಗಾರ ಎ. ಆರ್. ರೆಹಮಾನ್ 'ಇಟಿಯೋಸ್"ನ ಪ್ರಚಾರ ರಾಯಭಾರಿಯಾಗಿದ್ದಾರೆ.


Click it and Unblock the Notifications








