ನವೆಂಬರ್ ವಾಹನ ಮಾರಾಟ ಭರ್ಜರಿ ಎರಡಂಕಿ ಪ್ರಗತಿ

ಮಾರುತಿ, ಹ್ಯುಂಡೈ, ಹೀರೋ ಹೋಂಡಾ, ಮಹೀಂದ್ರ ಆಂಡ್ ಮಹೀಂದ್ರ ವಾಹನ ಮಾರಾಟ ಭರ್ಜರಿ ಪ್ರಗತಿ ಕಂಡಿದೆ. ಆದರೆ ಟಾಟಾ ಮೋಟಾರ್ಸ್ ಮಾರಾಟ ಒಂದಿಷ್ಟು ಕಡಿಮೆಯಾಗಿದೆ. ಪ್ರಸಕ್ತ ತಿಂಗಳಿನಲ್ಲಿ ದೇಶದ ಬೃಹತ್ ವಾಹನ ಮಾರಾಟ ಕಂಪನಿ ಮಾರುತಿ ಒಂದು ಲಕ್ಷ ವಾಹನ ಮಾರಾಟ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಕಂಪನಿಯ ದೇಶಿಯ ಮಾರಾಟ 1,02,533 ಯೂನಿಟ್‌ಗೆ ತಲುಪಿದೆ.
ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಕಂಪನಿಯ ವಾಹನ ಮಾರಾಟ ಶೇ. 34.2ರಷ್ಟು ಏರಿಕೆ ಕಂಡಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದ ಫಿಗೋ ನೆರವಿನಿಂದ ಫೋರ್ಡ್ ಮಾರಾಟ 7,504ಕ್ಕೆ ತಲುಪಿದೆ. ವಾಹನ ಮಾರಾಟ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿದ್ದು ಹಿಂದಿನ ತಿಂಗಳ ಅತ್ಯುತ್ತಮ ಮಾರಾಟಕ್ಕೆ ಹೋಲಿಸುವಂತಿಲ್ಲವೆಂದು ಕನ್ಸಲ್ಟಂಟ್ ಕಂಪನಿ ಏಜೆಂಲ್ ಬ್ರೋಕಿಂಗ್ ಹೇಳಿದೆ.
ಪೂರೈಕೆ ಸಂಬಂಧಿತ ಸಮಸ್ಯೆಗಳಿಂದ ಒಟ್ಟಾರೆ ನ್ಯಾನೋ ಮಾರಾಟ ಕುಸಿದಿರುವುದರಿಂದ ಟಾಟಾ ಮೋಟಾರ್ಸ್ ಮಾರಾಟ ಕೇವಲ ಶೇ.1ರಷ್ಟು ಏರಿಕೆ ದಾಖಲಿಸಿದೆ. ಆದರೂ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಅತ್ಯುತ್ತಮ ಪ್ರಗತಿ ದಾಖಲಿಸಿದೆ. ಅಂದರೆ ನವೆಂಬರ್‌ನಲ್ಲಿ ಈ ವಿಭಾಗಗಳಲ್ಲಿವಾಹನ ಮಾರಾಟ 50,419 ಯೂನಿಟ್‌ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ವಾಹನಗಳ ಮಾರಾಟ 50,114 ಯೂನಿಟ್ ಆಗಿತ್ತು.
ಹ್ಯುಂಡೈ ಮೋಟಾರ್ಸ್ 31,540 ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 28,169 ಯೂನಿಟ್‌ಗೆ ಹೋಲಿಸಿದರೆ ಶೇ.12ರಷ್ಟು ಏರಿಕೆ ದಾಖಲಿಸಿದೆ. ನಿರ್ವಹಣೆ ಸಮಸ್ಯೆಗಳ ನಡುವೆಯೂ ಹಬ್ಬದ ಸೀಸನ್ ಬೇಡಿಕೆಯಿಂದ ಹ್ಯುಂಡೈ ಮಾರಾಟ ಭರ್ಜರಿ ಪ್ರಗತಿ ದಾಖಲಿಸಿದೆ ಎಂದು ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕರು ಹೇಳಿದ್ದಾರೆ.
ಜನರಲ್ ಮೋಟಾರ್ಸ್ 8,376 ವಾಹನ ಮಾರಾಟ ಮಾಡಿದ್ದು, 2009ರ ಇದೇ ತಿಂಗಳ 26,666 ಯೂನಿಟ್‌ಗೆ ಹೋಲಿಸಿದರೆ ಶೇ. 17.67ರಷ್ಟು ಪ್ರಗತಿ ದಾಖಲಿಸಿದೆ.


Click it and Unblock the Notifications