2011ಕ್ಕೆ ವೋಕ್ಸ್ ವ್ಯಾಗನ್ ಹೊಸ ಜೆಟ್ಟಾ, ಪಸ್ಸಾಟ್

ಐಷಾರಾಮಿ ಕಾರು ಮಾರುಕಟ್ಟೆ ವಹಿವಾಟಿನಲ್ಲಿ ಏರಿಕೆ ಕಾಣುತ್ತಲೇ ಇದೆ.2011ರಲ್ಲಿ ಕೂಡಾ ಇದು ಹಾಗೆ ಮುಂದುವರೆಯುವ ಸಾಧ್ಯತೆಯಿದೆ. ಪೊಲೊ ಹಾಗೂ ವೆಂಟೊ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಜೆಟ್ಟಾ ಹಾಗೂ ಪಸ್ಸಾಟ್ ಕಾರುಗಳ ಬೆಲೆ ಇನ್ನೂ ನಿರ್ಧರಿಸಿಲ್ಲ ಎಂದು ಸಂಸ್ಥೆ ಹೇಳಿದೆ.
ಪುಣೆಯ ಚಕನ್ ನ ಘಟಕದಲ್ಲಿ ಪೋಲೋ ಕಾರುಗಳನ್ನು ತಯಾರಿಸಲಾಗುತ್ತಿದೆ. ಬಿಳಿ ಬಣ್ಣದ ಪೋಲೋ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.ಜನವರಿಯಿಂದ ನವೆಂಬರ್ ತನಕ ಸುಮಾರು 26,000 ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ನವೆಂಬರ್ ತಿಂಗಳಲ್ಲಿ 4613 ಪೋಲೋ ಹಾಗೂ ವೆಂಟೋ ಕಾರುಗಳು ಬಿಕರಿಯಾಗಿವೆ.
ಚಕನ್ ಘಟಕ ಸೇರಿದಂತೆ ಭಾರತದ ಕಾರು ಮಾರುಕಟ್ಟೆ ನಂಬಿಕೊಂಡು ವೋಕ್ಸ್ ವ್ಯಾಗನ್ ಸುಮಾರು 3,800 ಕೋಟಿ ರು ಬಂಡವಾಳ ಹೂಡಿದೆ. ಚಕನ್ ಘಟಕದಿಂದ ವಾರ್ಷಿಕವಾಗಿ 1.1 ಲಕ್ಷ ವಾಹನಗಳನ್ನು ಹೊರತರಲು ಸಂಸ್ಥೆ ಯೋಜಿಸಿದೆ.


Click it and Unblock the Notifications








