ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು ಪಸ್ಸಾಟ್ ಬಂದನೋ..

ನೂತನ ಪಸ್ಸಾಟ್ ಡೀಸಲ್ ಆವೃತ್ತಿ ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್ ಮಿಷನ್ ನಲ್ಲಿ ದೊರಕುತ್ತಿದೆ. ವಿಶೇಷವಾಗಿ ಇಂಧನ ದಕ್ಷತೆ ಹೆಚ್ಚಿಸೋ ಬ್ಲೂಮೋಷನ್ ತಂತ್ರಜ್ಞಾನ ನೂತನ ಕಾರಿನ ಹೆಗ್ಗಳಿಕೆ. ಇದರ ಬುಕ್ಕಿಂಗ್ ಭಾರತ ಪಾಕ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದ ಮರುದಿನದಿಂದಲೇ ಆರಂಭವಾಗುತ್ತದೆ. ಡೆಲಿವರಿಗೆ ಕೆಲವು ದಿನ ಕಾಯುವುದು ಮಾತ್ರ ಅನಿವಾರ್ಯ.
ಕಾರಿನ ಇಂಧನ ದಕ್ಷತೆ ಹೆಚ್ಚಿಸಲು ಫೋಕ್ಸ್ ವ್ಯಾಗನ್ ಬ್ಲೂಮೋಷನ್ ತಂತ್ರಜ್ಞಾನವನ್ನು ಅಳವಡಿಸಿದೆ. ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತ, ಇಂಧನ ದಕ್ಷತೆ ಹೆಚ್ಚಿಸುವ ಬ್ಲೂಮೋಷನ್ ತಂತ್ರಜ್ಞಾನ ಪಸ್ಸಾಟ್ ಗೆ ಹೊಸ ಘನತೆಯನ್ನು ನೀಡಿದೆ. ಆರಾಮದಾಯಕತೆ, ಸುರಕ್ಷತೆ ಮತ್ತು ಇಂಧನ ದಕ್ಷತೆ ಫೀಚರ್ ಗಳೊಂದಿಗೆ ನೂತನ ಪಸ್ಸಾಟ್ ನ್ನು ಗ್ರಾಹಕರಿಗೆ ಡೆಲಿವರಿ ಮಾಡಲಾಗುವುದು ಎಂದು ಫೋಕ್ಸ್ ವ್ಯಾಗನ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕರು ಹೇಳಿದ್ದಾರೆ.
ಕಳೆದ ಮೂರು ವರ್ಷದಿಂದ ದೇಶದ ರಸ್ತೆಯಲ್ಲಿ ಹಳೆಯ ಪಸ್ಸಾಟ್ ಮೋಡಿ ಮಾಡುತ್ತಿದೆ. ಈಗ ಕಂಪನಿ ನೂತನ ಪಸ್ಸಾಟ್ ಆವೃತ್ತಿ ಹೊರತಂದಿದೆ. ಫೀಚರ್ ಮತ್ತು ಸ್ಟೈಲ್ ವಿಷ್ಯದಲ್ಲಿ ಎಳ್ಳಷ್ಟು ರಾಜಿಯಿಲ್ಲದಂತೆ ಈ ಆವೃತ್ತಿಯನ್ನು ರೂಪಿಸಲಾಗಿದೆ. ತನ್ನ ಆಕರ್ಷಕತೆ, ಸ್ಥಳಾವಕಾಶ, ಎಕ್ಸ್ ಕ್ಲೂಸಿವ್ ಫೀಚರ್ ಗಳಿಂದ ಗಮನ ಸೆಳೆಯುತ್ತದೆ.
ನೂತನ ಪಸ್ಸಾಟ್ ಆವೃತ್ತಿ 2 ಲೀಟರ್ ನ ಸಿಆರ್ ಟಿಡಿಐ ಎಂಜಿನ್ ನೊಂದಿಗೆ ಗ್ರಾಹಕರ ಕೈಸೇರಲಿದೆ. ಹೊಸ ಪಸ್ಸಾಟ್ ನಲ್ಲಿ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಇದ್ದು, ಟ್ರಾಫಿಕ್ ನಲ್ಲಿ ಆಟೋಮ್ಯಾಟಿಕ್ ಆಗಿ ಸ್ಟಾರ್ಟ್-ಸ್ಟಾಪ್ ಆಗಲಿದೆ. ಈ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಪಾರ್ಕಿಂಗ್ ಅಸ್ಸಿಟ್ ಎಂಬ ಫೀಚರ್ ಕೂಡ ಕಾರಿನಲ್ಲಿದೆ. ಇದರಿಂದ ಆಕ್ಸಿಲರೇಷನ್ ಮತ್ತು ಬ್ರೇಕ್ ಕೆಲಸಗಳು ಸುಲಭವಾಗಲಿದೆ. ಅಟೆನ್ಷನ್ ಅಸಿಸ್ಟ್ ಎಂಬುದು ಮತ್ತೊಂದು ಫೀಚರ್. ಇದು ದೀರ್ಘ ಡ್ರೈವಿಂಗ್ ಕಾಲದಲ್ಲಿ ಚಾಲಕನಿಗೆ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸುತ್ತದಂತೆ! ಇಂತಹ ಇನ್ನೋವೆಟಿವ್ ಫೀಚರ್ ಗಳ ಹೊರತಾಗಿ ಸಾಕಷ್ಟು ಫೀಚರ್ ಗಳೂ ಈ ಕಾರಿನಲ್ಲಿವೆ
ಪ್ರಾಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಲೈಟ್, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್, ಬ್ಲೂಟೂಥ್, ಎಲೆಕ್ಟ್ರಿಸಿಟಿ ನೆರವಿನಿಂದ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೀಟ್ ಗಳು, ಎಬಿಎಸ್, ಇಎಸ್ ಪಿ ಸಿಸ್ಟಮ್ ಗಳು, ಏರ್ ಬ್ಯಾಗ್ ಗಳು ಮತ್ತು ಕಳ್ಳರಿಂದ ರಕ್ಷಣೆ ನೀಡುವ ಆಂಟಿ-ಥೆಪ್ಟ್ ಫೀಚರ್ ಗಳೂ ಇದರಲ್ಲಿವೆ.


Click it and Unblock the Notifications








