ವೋಕ್ಸ್ ವ್ಯಾಗನ್ ಹೊಸ ಪಸ್ಸಾಟ್ ಕಾರ್ ಮಾರ್ಚ್ ನಲ್ಲಿ ರಸ್ತೆಗೆ
image-24-vwpassat.jpg kannada.drivespark.com}ಹೊಸ ವೋಕ್ಸ್ ವ್ಯಾಗನ್ ಪಸ್ಸಾಟ್ ನಿರೀಕ್ಷೆಯಲ್ಲಿರುವರಿಗೆ ಇದು ಸಿಹಿಸುದ್ದಿ. ಯಾಕೆಂದರೆ ನೂತನ ಪಸ್ಸಾಟ್ ಕಾರಿಗೆ ಇನ್ನು ಹೆಚ್ಚು ದಿನ ಕಾಯಬೇಕಿಲ್ಲ. ಈ ಆರ್ಥಿಕ ವರ್ಷದ ಅಂತ್ಯದಲ್ಲಿ ಅಂದರೆ ಮುಂದಿನ ತಿಂಗಳು ನೂತನ ಕಾರ್ ಬ್ಲೂಮೋಷನ್ ತಂತ್ರಜ್ಞಾನದೊಂದಿಗೆ ರಸ್ತೆಗಿಳಿಯಲಿದೆ. ನೂತನ ಪಸ್ಸಾಟ್ ಕಾರ್ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಬ್ಲೂಮೋಷನ್ ತಂತ್ರಜ್ಞಾನದೊಂದಿಗೆ ಹೊಸ ಪಸ್ಸಾಟ್ ಕಾರ್ ಶೀಘ್ರದಲ್ಲಿ ರಸ್ತೆಗಿಳಿಯಲಿದೆ ಎಂದು ವೋಕ್ಸ್ ವ್ಯಾಗನ್ ಗ್ರೂಪ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಬ್ಲೂಮೋಷನ್ ತಂತ್ರಜ್ಞಾನದ ಮೂಲಕ ಕಂಪನಿಯ ಹೊಸ ಅನುಭವ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ನೂತನ ಬ್ಲೂಮೋಷನ್ ಪಸ್ಸಾಟ್, ಸ್ಟಾರ್ಟ್ ಸ್ಟಾಪ್, ಸುಧಾರಿತ ಬ್ರೇಕ್ ಎನರ್ಜಿ, ಡಿಎಸ್ ಜಿ ಡ್ಯೂಯಲ್ ಕ್ಲಚ್ ಗೇರ್ ಬಾಕ್ಸ್, ಗೇರ್ ಸಿಫ್ಟ್ ಇಂಡಿಕೇಟರ್, ಅತ್ಯಧಿಕ ಇಂಧನ ದಕ್ಷತೆಯ ಎಂಜಿನ್ ಮುಂತಾದ ಫೀಚರ್ ಗಳಿರಲಿವೆ. ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಆರಂಭವಾಗುವ ಥಿಂಕ್ ಬ್ಲೂ ಕಾಂಪೈನ್ ಗೆ ಪೂರಕವಾಗಿ ಕಂಪನಿಯು ಬ್ಲೂಮೋಷನ್ ಪಸ್ಸಾಟ್ ಹೊರತರಲಿದೆ.
ವೋಕ್ಸ್ ವ್ಯಾಗನ್ ಪಸ್ಸಾಟ್ ಕಾರ್ 2007ರಿಂದಲೇ ದೇಶದ ರಸ್ತೆಯಲ್ಲಿದೆ. ಹೊಸ ಪರಿಸರ ಸ್ನೇಹಿ ಪಸ್ಸಾಟ್ ದರ ಹಳೆಯ ಪಸ್ಸಾಟ್ ಗಿಂತ ಹೆಚ್ಚಿರುವ ನಿರೀಕ್ಷೆಯಿದೆ. ಸದ್ಯ ರಸ್ತೆಯಲ್ಲಿರುವ ಪಸ್ಸಾಟ್ ದರ ಸುಮಾರು 19 ಲಕ್ಷ ರೂ. ಇದೆ. ಹೊಸ ಫೀಚರ್ ಗಳೊಂದಿಗೆ ಮುಂದಿನ ತಿಂಗಳು ಮಾರುಕಟ್ಟೆಗಿಳಿಯುವ ಪಸ್ಸಾಟ್ ಕುರಿತು ಕಾರ್ ಪ್ರೇಮಿಗಳಲ್ಲಿ ಹೊಸ ಹೈಪ್ ಸೃಷ್ಟಿಯಾಗಿದೆ.


Click it and Unblock the Notifications








