ಚಳಿಗಾಲದಲ್ಲೂ ಮಾರುತಿ ಕಾರು ಬಿಸಿಬಿಸಿ ಮಾರಾಟ

Maruti posts 17% sale rise in December
ನವದೆಹಲಿ, ಜ. 5: ಭಾರತದ ಕಾರು ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆ ಮಾರುತಿ ಸುಜುಕಿ ಡಿಸೆಂಬರ್ ತಿಂಗಳಿನಲ್ಲಿ 99225 ವಾಹನಗಳನ್ನು ಮಾರಾಟ ಮಾಡಿದೆ. ಮಾರಾಟ ಪ್ರಮಾಣ ಶೇ. 17 ರಷ್ಟು ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸಂಸ್ಥೆ ಉತ್ತಮ ಅಭಿವೃದ್ಧಿ ಸಾಧಿಸಿದೆ ಎನ್ನಬಹುದು. ಡಿಸೆಂಬರ್ 2009ರಲ್ಲಿ 84804 ವಾಹನಗಳು ಮಾತ್ರ ಮಾರಾಟವಾಗಿದ್ದವು.

ಆದರೆ, ರಫ್ತು ಮಾರುಕಟ್ಟೆಯಲ್ಲಿ ಕೊಂಚ ಹಿನ್ನಡೆ ಉಂಟಾಗಿದ್ದು, 2009ರಲ್ಲಿ 13804 ಕಾರುಗಳನ್ನು ರಫ್ತು ಮಾಡಲಾಗಿತ್ತು. ಈ ಬಾರಿ 9756 ಮಾತ್ರ ಇತರೆ ದೇಶಗಳಿಗೆ ಕಳಿಸಲು ಸಾಧ್ಯವಾಗಿದೆ. ಆಲ್ಟೋ ಕಾರಿನ ಮಾರಾಟದಲ್ಲಿ ಏರಿಕೆ ಕಂಡಿದ್ದು, ಮಾರುತಿಯ ನೆಚ್ಚಿನ ಕಾರು ಮಾರುತಿ 800 ಮಾರಾಟ ಶೇ30.15ರಷ್ಟು ಇಳಿಕೆಯಾಗಿದೆ. ಡಿಸೆಂಬರ್ 2009 ರಲ್ಲಿ ಸುಮಾರು 2574 ಕಾರುಗಳು ಮಾರಾಟವಾಗಿತ್ತು. ಈ ಬಾರಿ 1798 ಕಾರುಗಳು ಮಾರಾಟವಾಗಿವೆ.

ಏ 2 ವಿಭಾಗ ಭರ್ಜರಿ ವ್ಯಾಪಾರ ಮಾಡಿದ್ದು ಶೇ. 23.46ರಷ್ಟು ಪ್ರಗತಿ ಸಾಧಿಸಿದ್ದು ಒಟ್ಟಾರೆ 64492 ಕಾರುಗಳನ್ನು ಮಾರಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 52236 ಕಾರುಗಳು ಮಾರಾಟವಾಗಿದ್ದವು. A2 ವಿಭಾಗದಲ್ಲಿ ಎಸ್ಟಿಲ್ಲೊ, ಸ್ವಿಫ್ಟ್, ಎ ಸ್ಟಾರ್, ಆಲ್ಟೋ, ವಾಗನ್ ಆರ್ ಹಾಗೂ ರಿಟ್ಜ್ ಕಾರುಗಳು ಸೇರುತ್ತವೆ.

ಇದರಂತೆ ಎ3 ವಿಭಾಗದ SX4 ಹಾಗೂ ಡಿಜೈರ್ ಕಾರುಗಳು ಉತ್ತಮ ಮಾರಾಟ ದಾಖಲೆ ಪಡೆದಿವೆ. ಶೇ.19.37ರಷ್ಟು ಪ್ರಗತಿಯೊಂದಿಗೆ 9632 ಕಾರುಗಳು ಡಿಸೆಂಬರ್ 2010ರಲ್ಲಿ ಮಾರಾಟವಾಗಿದ್ದು, ಕಳೆದ ವರ್ಷ 7843 ಕಾರುಗಳು ಮಾರಾಟವಾಗಿದ್ದವು. ಒಟ್ಟಾರೆ ಮೊದಲ 9 ತಿಂಗಳಿನಲ್ಲಿ ಕಾರು ಮಾರಾಟದಲ್ಲಿ ಶೇ.26.91ರಷ್ಟು ಪ್ರಗತಿ ಸಾಧಿಸಲಾಗಿದೆ. ಸುಮಾರು 927665 ಕಾರುಗಳನ್ನು ಮಾರಲಾಗಿದೆ.

More from DriveSpark

Article Published On: Wednesday, January 5, 2011, 18:13 [IST]
English summary
The Indian car giant Maruti Suzuki has accrued a sale increase of 17% during December 2010 by selling 99225 units. This corresponds to the sale volume achieved in December 2009- 84804 units, said the company’s report.This accounts for an increase of 26.01% despite a fall in the export market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+