ರೆನಾಲ್ಟ್, ಬಜಾಜ್ ನಿಂದ ಅಗ್ಗದ ಸಣ್ಣ ಕಾರು

"ಬಜಾಜ್ ಯುಎಲ್ ಸಿ ಎಂಬುದು ರೆನಾಲ್ಟ್ ಕಾರ್ ಗಿಂತ ಅಗ್ಗವಾಗಿರಲಿದೆ(2,500ಡಾಲರ್). ಮಾರುಕಟ್ಟೆಯಲ್ಲಿ ನಿಸ್ಸಾನ್-ರೆನಾಲ್ಟ್ ಮತ್ತು ಬಜಾಜ್ ಮೂರು ಕಂಪನಿಗಳ ಸಹಭಾಗಿತ್ವದಲ್ಲಿ ಬಜಾಜ್ ಯುಎಲ್ ಸಿ ಮಾರಾಟ ಕಾಣಲಿದೆ" ಎಂದು ರೆನಾಲ್ಟ್ ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರು ಹೇಳಿದ್ದಾರೆ. ರೆನಾಲ್ಟ್ ಸಣ್ಣ ಕಾರ್ ಈಗ ಮಾತುಕತೆಯ ಹಂತದಲ್ಲಿದ್ದು ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದಿದ್ದಾರೆ.
ರೆನಾಲ್ಟ್ 2011 ರಿಂದ 2013ರವರೆಗಿನ ಅವಧಿಯಲ್ಲಿ 5 ಹೊಸ ಕಾರ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದರಲ್ಲಿ ಪ್ರೀಮಿಯಂ ಹ್ಯಾಚ್ ಬ್ಯಾಕ್, ಸೆಡಾನ್ ಮತ್ತು ಮಲ್ಟಿ ಪರ್ ಪೊಸ್ ವೆಹಿಕಲ್ ಗಳು ಸೇರಿರಲಿವೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಝಿಲ್ ಮತ್ತು ರಷ್ಯಾ ನಂತರ ಕಂಪನಿಗೆ ಭಾರತವೂ ಸೂಕ್ತ ಮಾರುಕಟ್ಟೆಯಾಗಿದೆ ಮತ್ತು ಚೀನಾಕ್ಕಿಂತ ಭಾರತಕ್ಕೆ ಕಂಪನಿಯು ಹೆಚ್ಚು ಗಮನ ನೀಡುತ್ತಿದ್ದು 2020ಕ್ಕೆ 6 ದಶಲಕ್ಷ ಯೂನಿಟ್ ಮಾರಾಟದ ಗುರಿಯನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.


Click it and Unblock the Notifications








