ವಾಹನ ವಿಮೆ ಕಂತಿನಲ್ಲಿ ಹಣ ಉಳಿಸಲು ಉಪಾಯ

Auto Insurance Comparison
ವಾಹನ ವಿಮೆ ಕಡ್ಡಾಯ. ಹೀಗಾಗಿ ಅದರಿಂದ ತಪ್ಪಿಸಿಕೊಳ್ಳುವ ಉಪಾಯ ಇಲ್ಲಿಲ್ಲ. ಆದರೆ, ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ನಾವು ಪಾವತಿಸುವ ಕಂತಿನಲ್ಲಿ ಸ್ವಲ್ಪವಾದರೂ ಹಣ ಉಳಿಸಬಹುದು. ಅದಕ್ಕಾಗಿ ನೀವು ಮಾಡಬೇಕಾದ್ದು ಕಂಪೇರಿಷನ್ ಅಂದ್ರೆ ತುಲನೆ. ಹೆಚ್ಚಿನ ಎಲ್ಲ ವಿಮಾ ಕಂಪನಿಗಳ ಬಡ್ಡಿದರ ಒಂದೇ ರೀತಿ ಇರುವಾಗ ಇಲ್ಲಿ ಕಂಪೇರ್ ಮಾಡುವ ಅಗತ್ಯವೇನಿದೆ ಎಂದು ನೀವು ಕೇಳಬಹುದು. ಆಟೋ ಇನ್ಶೂರೆನ್ಸ್ ಕಂಪೇರಿಷನ್ ಟೂಲ್ ನಿಮ್ಮ ವಾಹನಕ್ಕೆ ಅತ್ಯುತ್ತಮ ವಿಮೆಯನ್ನು ಖರೀದಿಸಲು ನೆರವಾಗುತ್ತದೆ.

ನಿಮಗೆ ಹಲವು ವೆಬ್ ಸೈಟ್ ಗಳು ಉಚಿತವಾಗಿ ಇನ್ಶುರೆನ್ಸ್ ಕಂಪೇರಿಷನ್ ಮಾಡಿಕೊಡುತ್ತವೆ. ಆದರೆ ಇಲ್ಲಿರುವ ಕೆಲವು ಟಿಪ್ಸ್ ಗಳ ಮೂಲಕ ನೀವೇ ನಿಮ್ಮ ವಿಮೆಯನ್ನು ತುಲನೆ ಮಾಡಿಕೊಂಡು ನೋಡಬಹುದು. ಹಣನೂ ಉಳಿಸಬಹುದು.

1. ಹಲವು ಕಂಪನಿಗಳು ಆಫರ್ ಮಾಡುವ ವಿಮಾ ಕವರೇಜ್ ತಿಳಿದುಕೊಂಡು ಯಾವುದು ಉತ್ತಮವಾಗಿದೆ ಎಂದು ಪರಿಶೀಲಿಸಿ ಪಾಲಿಸಿ ಆಯ್ಕೆ ಮಾಡಿಕೊಳ್ಳಿ.

2. ಹೆಚ್ಚು ಚಾಲ್ತಿಯಿಲ್ಲದ ಕಂಪನಿಯಿಂದ ಕಡಿಮೆ ದರವಿದೆ ಎಂದು ವಿಮೆ ಖರೀದಿಸಬೇಡಿ. ವಿಮಾ ಪಾಲಿಸಿ ಒಂದಿಷ್ಟು ದುಬಾರಿಯಾಗಿದ್ದರೂ ಮಾನ್ಯತೆ ಪಡೆದ ಮತ್ತು ನಂಬಲಾರ್ಹ ಕಂಪನಿಯನ್ನೇ ಆಯ್ಕೆ ಮಾಡಿಕೊಳ್ಳಿ.

3. ನಿಮ್ಮ ಕಾರ್ ಗೆ ಸಾಕಷ್ಟು ಕವರೇಜ್ ನೀಡುವ ಕಂಪನಿ ಕೇಳಿದಷ್ಟು ಪಾವತಿಸಲು ಹಿಂಜರಿಯಬೇಡಿ. ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಇದರಿಂದ ಸಾಕಷ್ಟು ಉಪಯೋಗವಾಗುತ್ತದೆ.

4. ನೀವು ಹಳೆಯ ಕಾರ್ ನ ಮಾಲೀಕರಾಗುತ್ತಿದ್ದಲ್ಲಿ ಅದಕ್ಕೆ ಸಮಗ್ರವಾದ ವಿಮೆ ಮಾಡಲು ಹೋಗಬೇಡಿ. ಯಾಕೆಂದರೆ ಅದರ ದರ ನಿಮ್ಮ ಸೆಕೆಂಡ್ ಹ್ಯಾಂಡ್ ಕಾರ್ ದರಕ್ಕಿಂತ ಹೆಚ್ಚಾಗಬಹುದು. ಇದಕ್ಕಾಗಿ ಜನರಲ್ ಇನ್ಸುರೆನ್ಸ್ ಮಾಡಿ.

5. ಬೇರೆ ಕಂಪನಿಗಳು ವಿನಾಯಿತಿ ದರದಲ್ಲಿ ವಾಹನ ವಿಮೆ ಆಫರ್ ನೀಡುವುದಾಗಿ ಹೇಳಿದಾಗ ಕಣ್ಣುಮುಚ್ಚಿ ಸೀದಾ ಹೋಗಬೇಡಿ. ನೀವು ಈಗ ಮಾಡಿರುವ ಪಾಲಿಸಿಗಿಂತ ಬೇರೆ ಕಂಪನಿಯಿಂದ ಹೆಚ್ಚುವರಿ ಲಾಭ ಏನೆಲ್ಲ ಇದೆ ಎಂದು ಸಮಗ್ರವಾಗಿ ಪರಿಶೀಲಿಸಿ.

6. ಜಂಟಿ ವಿಮೆ ಅಂದರೆ, ಉದಾಹರಣೆಗೆ ಮನೆ ಮತ್ತು ವಾಹನ ಇತ್ಯಾದಿಗಳನ್ನು ಜೊತೆಯಾಗಿ ಖರೀದಿಸಿ ಜೊತೆಯಾಗಿ ವಿಮೆ ಮಾಡಿ. ಇದರಿಂದ ನೀವು ಬೆಸ್ಟ್ ಡೀಲ್ ಪಡೆಯಬಹುದು.

7. ನಿಮ್ಮಕಾರ್ ನಲ್ಲಿ ಅಳವಡಿಸಿರುವ ಎಲ್ಲ ಸೇಫ್ಟಿ ಫೀಚರ್ ಗಳನ್ನು ವಿಮಾ ಕಂಪನಿಗೆ ನೀಡಿ. ಸುರಕ್ಷತಾ ಫೀಚರ್ ಹೆಚ್ಚಾದಷ್ಟು ವಿಮಾ ಕಂಪನಿಗಳು ವಿಮಾ ಪಾವತಿ ಮೊತ್ತವನ್ನು ಕಡಿಮೆ ಮಾಡುತ್ತವೆ.

8. ಮಾಹಿತಿಗಳನ್ನು ಸರಿಯಾಗಿ ನೀಡಿ. ಅಂದರೆ ವಿಮಾ ಕಂಪನಿಗಳು ನೀಡುವ ಪಾರ್ಮ್ ನಲ್ಲಿ ಸರಿಯಾದ ಮಾಹಿತಿಯನ್ನು ಸೇರಿಸಿ. ನೀವಿರುವ ಸ್ಥಳ, ಯಾವ ಉದ್ದೇಶಕ್ಕಾಗಿ ವಾಹನ ಬಳಸುತ್ತೀರಿ, ಆಫೀಸ್ ಬಳಕೆಗಾಗಿ ಅಥವಾ ವಾಣಿಜ್ಯ ಬಳಕೆಗಾಗಿ ಇವುಗಳನ್ನೆಲ್ಲ ಅವರು ನೀಡಿದ ಫಾರ್ಮ್ ನಲ್ಲಿ ತುಂಬಿರಿ. ಈಗ ವಾಹನ ವಿಮೆಯ ಪೈರಾಮೀಟರ್ ಬದಲಾಗಿದ್ದು, ನೀವು ಸರಿಯಾದ ಮಾಹಿತಿ ನೀಡಿದಲ್ಲಿ ಹಲವು ವಿನಾಯಿತಿಗಳು ನಿಮ್ಮ ಪಾಲಾಗುತ್ತವೆ.

ವಿಮೆ ಹೊಸದಾಗಿ ಖರೀದಿಸುವಾಗ ಮೇಲೆ ತಿಳಿಸಿದ ಟಿಪ್ಸ್ ಅನುಸರಿಸಲು ಮರೆಯಬೇಡಿ. ಬೆಸ್ಟ್ ಡೀಲ್ ಮಾಡಿ. ಬೆಸ್ಟ್ ಆಫ್ ಲಕ್.

More from DriveSpark

Article Published On: Friday, January 28, 2011, 16:38 [IST]
English summary
If you have been wondering on what is auto insurance comparison and how to go about saving your car insurance then here is a brief. Try these auto insurance comparison tips as it will guide you on present insurance schemes and as well as the smartest approach to get the best and cheapest insurance for your car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+