ಫಿಗೊ ಸಾಥ್, ಫೋರ್ಡ್ ಇಂಡಿಯಾ ಹೊಸ ದಾಖಲೆ

ಇದರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಂಡಿರುವುದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಫೋರ್ಡ್ ಫಿಗೊ. 2011ರ ಜನವರಿಯಲ್ಲಿ ಸುಮಾರು 8,600 ಫಿಗೊ ಮಾರಾಟಗೊಂಡಿತ್ತು. ಇದು ಫಿಗೊ ರಸ್ತೆಗಿಳಿದ ನಂತರದ ಅತ್ಯಧಿಕ ಮಾರಾಟವಾಗಿದೆ.
ಪ್ರಸಕ್ತ ವರ್ಷ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಾಣುವ ಮುನ್ಸೂಚನೆ ಇದೆಂದು ಇದೇ ಸಂದರ್ಭದಲ್ಲಿ ಫೋರ್ಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. "2010 ನಮಗೆ ಪ್ರಮುಖ ವರ್ಷ. ಈ ಸಂದರ್ಭದಲ್ಲಿ ಫೋರ್ಡ್ ವಾರ್ಷಿಕ ಮಾರಾಟ ಅತ್ಯುತ್ತಮ ಎತ್ತರಕ್ಕೆ ಏರಿದೆ. 2011ರ ಜನವರಿಯ ಮಾರಾಟ ಹೊಸ ದಾಖಲೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ' ಎಂದು ಅವರು ಹೇಳಿದ್ದಾರೆ.
2010ರಲ್ಲಿ ಫೋರ್ಡ್ ಇಂಡಿಯಾ 83,887 ವಾಹನ ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 184ರಷ್ಟು ಏರಿಕೆ ದಾಖಲಿಸಿದೆ. ಇದರಲ್ಲಿ ಫಿಗೊ ಮಾರಾಟವೇ ಸುಮಾರು 68 ಸಾವಿರ ಯೂನಿಟ್ ಆಗಿದೆ. ದೇಶದ ವಾಹನ ಉದ್ಯಮದಿಂದ ಝಿಗ್ ವೀಲ್ ವರ್ಷದ ಕಾರ್ ಸೇರಿದಂತೆ ಸುಮಾರು 20 ಪ್ರಶಸ್ತಿಗಳನ್ನು ಫೋರ್ಡ್ ಫಿಗೊ ತನ್ನದಾಗಿಸಿಕೊಂಡಿದೆ.


Click it and Unblock the Notifications








