ರೆನಾಲ್ಟ್ ಗೆ ವಿಚ್ಛೇದನ, ಮಹೀಂದ್ರ ಇನ್ನು ಒಂಟಿ

Logan
ಫ್ಯಾಮಿಲಿ ಕಾರ್ ಲೊಗಾನ್ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ಶೀಘ್ರದಲ್ಲಿ ದೇಶದ ವಾಹನೋದ್ಯಮ ಮತ್ತೊಂದು ವಿಚ್ಛೇದನಕ್ಕೆ ಸಾಕ್ಷಿಯಾಗಲಿದೆ. ಮಹೀಂದ್ರ ಮತ್ತು ರೆನಾಲ್ಟ್ ನ ಲೊಗಾನ್ ಜಂಟಿ ಉದ್ಯಮಕ್ಕೆ ಶೀಘ್ರದಲ್ಲಿ ತೆರೆಬೀಳಲಿದ್ದು ಮಹೀಂದ್ರ ಒಂಟಿಯಾಗಲಿದೆ.

ಲೊಗಾನ್ ಬಿಎಸ್III ಮತ್ತು ಲೊಗಾನ್ ಬಿಎಸ್IV ಆವೃತ್ತಿಗಳೆರಡರ ಜಂಟಿ ಉದ್ಯಮದ ಪೂರ್ಣ ಪಾಲನ್ನು ತನ್ನದಾಗಿಸಿಕೊಳ್ಳಲು ಮಹೀಂದ್ರ ಸಿದ್ಧತೆ ನಡೆಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಲೊಗಾನ್ ನಲ್ಲಿ ರೆನಾಲ್ಟ್ ಲೊಗೊ ಮಿಸ್ಸಾಗಲಿದೆ. ಇಲ್ಲಿವರೆಗೆ ರೆನಾಲ್ಟ್ ಮತ್ತು ಮಹೀಂದ್ರ ಜಂಟಿ ಉದ್ಯಮದ ಮೂಲಕ ಲೊಗಾನ್ ಮಾರಾಟ ಮಾಡುತ್ತಿದ್ದವು.

ಮಾರಾಟದಲ್ಲಿ ಹಿನ್ನೆಡೆ ಉಂಟಾದ ಹಿನ್ನಲೆಯಲ್ಲಿ ಕಳೆದ ವರ್ಷವೇ ಜಂಟಿ ಉದ್ಯಮದಿಂದ ಕಂಪನಿಗಳೆರಡು ಹೊರಬರುವ ಸೂಚನೆ ನೀಡಿದ್ದವು. ಜೊತೆಗೆ ಮಹೀಂದ್ರ ಜಂಟಿ ಉದ್ಯಮದಲ್ಲಿ ಶೇಕಡಾ 49ರಷ್ಟು ಪಾಲು ತನ್ನದಾಗಿಸಿಕೊಳ್ಳುವ ಮೂಲಕ ಜಂಟಿ ಉದ್ಯಮವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿತ್ತು.

ಕೆಲವೇ ದಿನಗಳಲ್ಲಿ ಜಂಟಿ ಉದ್ಯಮ ಬದಲಾವಣೆ ಕಾಣಲಿದೆ ಎಂದು ಕಂಪನಿಯ ಆಟೋಮೊಟಿವ್ ವಿಭಾಗದ ಆಧ್ಯಕ್ಷರು ಹೇಳಿದ್ದಾರೆ. ಇದು ದೇಶದ ಸುಮಾರು 150 ಡೀಲರ್ ಕೇಂದ್ರಗಳಿಗೆ ಅನ್ವಯವಾಗಲಿದೆ. ಕೆಲವೇ ದಿನಗಳಲ್ಲಿ ಈ ಶೋರೂಂಗಳಲ್ಲಿ ರೆನಾಲ್ಟ್ ಲೊಗೊ ಕಾಣೆಯಾಗಲಿದೆ.

ಮಾರುಕಟ್ಟೆಯಲ್ಲಿ ಲೊಗಾನ್ ಗೆ ಹಿನ್ನಡೆ ಉಂಟಾಗಿರುವುದರಿಂದ ಮಹೀಂದ್ರ ಜಂಟಿ ಉದ್ಯಮದಿಂದ ಹೊರಬರಲು ನಿರ್ಧರಿಸಿದ್ದು, ಒಂಟಿಯಾಗಿ ಲೊಗಾನ್ ಆವೃತ್ತಿಯನ್ನು ಪರಿಷ್ಕರಿಸಲಿದೆ. ಲೊಗಾನ್ ಇನ್ನು ಮುಂದೆ ಮಹೀಂದ್ರ ಮೊದಲ ಎಕ್ಸ್ ಕ್ಲೂಸಿವ್ ಪ್ರಯಾಣಿಕ ಕಾರಾಗಲಿದೆ. ಲೊಗಾನ್ ಪರಿಷ್ಕರಿಸಲಿರುವ ಆವೃತ್ತಿ ಮತ್ತು ಎಕೊನಾಮಿಕಲ್ ಆವೃತ್ತಿಗಳೆರಡೂ ಜಂಟಿ ಉದ್ಯಮದಿಂದ ಬೇರೆಯಾಗಲಿದೆ.

ಅಬಕಾರಿ ಸುಂಕವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಲೊಗಾನ್ ಗಾತ್ರವನ್ನು ಚಿಕ್ಕದಾಗಿಸುವ ಯೋಜನೆ ಕಂಪನಿಗಿದೆ. ಮತ್ತೆ ಲೊಗಾನ್ ಗೆ ಬೇಡಿಕೆ ಹೆಚ್ಚಿಸಿಕೊಳ್ಳು ದೇಶದಲ್ಲಿ ಕಂಪನಿ ತನ್ನದೇ ಡೀಲರ್ ಷಿಪ್ ಕೇಂದ್ರಗಳನ್ನು ನಿರ್ಮಿಸಲಿದ್ದು, ಮುಂದಿನ 2 ವರ್ಷಗಳಲ್ಲಿ ಡೀಲರ್ ಕೇಂದ್ರಗಳ ಸಂಖ್ಯೆಯನ್ನು 70ಕ್ಕೆ ಹೆಚ್ಚಿಸಲಿದೆ.

ಲೊಗಾನ್ ದರ: ಲೊಗಾನ್ ಬಿಎಸ್III ದರ: 1.2 ಲೀಟರ್ ಜಿಎಲ್ಇ ದರ- 4,66,700 ರೂಪಾಯಿ. 1.4 ಜಿಎಲ್ಎಕ್ಸ್ ದರ-4,91,700 ರೂಪಾಯಿ. ಲೊಗಾನ್ ಬಿಎಸ್IV ದರ: 1.4 ಜಿಎಲ್ಇ ದರ 4,69,700 ರೂ. ಮತ್ತು 1.4 ಜಿಎಲ್ಎಕ್ಸ್ ದರ 4,94,700 ರೂಪಾಯಿ.

More from DriveSpark

Article Published On: Thursday, February 10, 2011, 17:35 [IST]
English summary
English Summary: The auto industry is getting ready for another break up from JV and this time it is between Mahindra and Renault.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+