ರೂಟನ್ ಗೆ ಮೇಕಪ್, ಮಿನಿವ್ಯಾನ್ ಇನ್ನಷ್ಟು ಸುಂದರ

ವೋಕ್ಸ್ ವ್ಯಾಗನ್ ತನ್ನ ಮಿನಿವ್ಯಾನ್ ಗೆ ನೂತನ 3.6 ಲೀಟರ್ ವಿ6 ಎಂಜಿನ್ ಅಳವಡಿಸಲಿದೆ. ಈ ಮಿನಿವ್ಯಾನ್ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದ್ದು, ಸುಮಾರು 283 ಹಾರ್ಸ್ ಪವರ್ ನೀಡಲಿದೆ. ನೂತನ ಪರಿಷ್ಕೃತ ಮಿನಿವ್ಯಾನನನ್ನು ವೋಕ್ಸ್ ವ್ಯಾಗನ್ ಡೆಟ್ರಾಯಿಟ್ ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಿತ್ತು.
ಮಿನಿವ್ಯಾನ್ ಸಾಕಷ್ಟು ಸೇಫ್ಟಿ ಫೀಚರ್ ಗಳನ್ನೂ ಹೊಂದಿರಲಿದೆ. ಸೈಡ್ ಏರ್ ಬ್ಯಾಗ್, ಡ್ರೈವರ್ ಸುರಕ್ಷತೆಯ ಏರ್ ಬ್ಯಾಗ್ ಗಳನ್ನು ಅಳವಡಿಸಲಿದೆ. ಜೊತೆಗೆ ಇಂಧನ ದಕ್ಷತೆ ಹೆಚ್ಚಿಸಲು "ಇಕೊ" ಬಟನ್ ಕೂಡ ಅಳವಡಿಸಿದೆ. ಮಲ್ಟಿಪಂಕ್ಷನ್ ಸ್ಟೇರಿಂಗ್ ವೀಲ್ ಸೇರಿದಂತೆ ನೂತನ ಮಿನಿವ್ಯಾನ್ ನ ಇಂಟರಿಯರ್ ನ್ನೂ ಸಾಕಷ್ಟು ಪರಿಷ್ಕರಿಸಲಾಗಿದೆ.
ವೋಕ್ಸ್ ವ್ಯಾಗನ್ ರೂಟನ್ ಎಸ್ ದರ ಸುಮಾರು 27,750 ಡಾಲರ್ ಮತ್ತು ರೊಟನ್ ಎಸ್ಇಎಲ್ ದರ 44,060 ಡಾಲರ್. ಭಾರತದಲ್ಲಿ ಎಷ್ಟು ಲಕ್ಷ ರೂಪಾಯಿಗೆ ದೊರಕಲಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.


Click it and Unblock the Notifications








