ಕಾಂಪ್ಯಾಕ್ಟ್ ಕಾರ್ ಬೀಟ್ ಎಲ್ ಪಿ ಜಿ ಆವೃತ್ತಿ ರಸ್ತೆಗೆ

ಕಂಪನಿ ಈಗ ಎಲ್ ಪಿಜಿ ಬೀಟ್ ನ ಎಲ್ ಎಸ್ ಮತ್ತು ಎಲ್ ಟಿ ಎಂಬ ಎರಡು ಆವೃತ್ತಿಗಳನ್ನು ಅನಾವರಣ ಮಾಡಿದೆ. ಇವೆರಡು ಕಾರ್ ಗಳಿಗೆ ಮೂರು ವರ್ಷದ ವ್ಯಾರೆಂಟಿ ಅಥವಾ 1 ಲಕ್ಷ ಕಿ.ಮೀ. ವ್ಯಾರೆಂಟಿ ನೀಡಲಾಗುವುದೆಂದು ಜನರಲ್ ಮೋಟರ್ಸ್ ಹೇಳಿದೆ.
ಪರಿಸರ ಸ್ನೇಹಿ ಷೆವರ್ಲೆ ಬೀಟ್ ಎಲ್ ಪಿಜಿ ಕಾರ್, ಮುಂದಿನ ತಲೆಮಾರಿನ/ ಅಡ್ವಾನ್ಸ್ ಡ್ ಎಲ್ ಪಿಜಿ ತಂತ್ರಜ್ಞಾನ ಹೊಂದಿದ್ದು ಪೆಟ್ರೊಲ್ ಮತ್ತು ಎಲ್ ಪಿಜಿ ಗಳ ನಡುವೆ ಯಾವುದೇ ಶಕ್ತಿಗಳ ನಷ್ಟವಿಲ್ಲದೇ ಸ್ಮೂತ್ ಟ್ರಾನ್ಸಕ್ಷನ್ ಗೆ ಅವಕಾಶ ನೀಡುತ್ತದೆ. ನೈಲಾನ್ ಸಾಮಾಗ್ರಿಗಳ ಹೈಪ್ರೆಸರ್ ಎಲ್ ಪಿಜಿ ಪೈಪ್ ಅಳವಡಿಸಿರುವ ದೇಶದ ಮೊದಲ ಎಲ್ ಪಿಜಿ ಕಾರ್ ಇದೆಂದು ಹೇಳಲಾಗಿದೆ.
ನೂತನ ಕಾರ್ ಗೆ 1.2 ಲೀಟರ್ ಸ್ಮಾರ್ಟೆಕ್ ಎಂಜಿನ್ ಅಳವಡಿಸಲಾಗಿದ್ದು, ಸಿಲಿಂಡರ್ ಹೆಡ್ ಅಲ್ಯುಮಿನಿಯಂ ನಿಂದ ಆವೃತ್ತವಾಗಿದೆ. ಅತ್ಯಧಿಕ ಇಂಧನ ದಕ್ಷತೆ ಹೊಂದಿರುವ ಈ ಎಂಜಿನ್ ಹಗುರವಾಗಿದೆ. ನೂತನ ಕಾರ್ ಕೇವಲ ಎಲ್ ಪಿಜಿ ನೆರವಿನಿಂದ ಸುಮಾರು 349 ಕಿ.ಮೀ. ಮತ್ತು ಎಲ್ ಪಿಜಿ, ಗ್ಯಾಸೊಲಿನ್ ನೆರವಿನಿಂದ ಸುಮಾರು 1 ಸಾವಿರ ಕಿ.ಮೀ. ಪ್ರಯಾಣಿಸುವ ನಿರೀಕ್ಷೆಯಿದೆ.
ನೂತನ ಕಾರ್ ಸಾಕಷ್ಟು ಸುರಕ್ಷತೆಯ ಫೀಚರ್ ಗಳೊಂದಿಗೆ ಬಂದಿದೆ. ಇದರಲ್ಲಿ ಎಲ್ ಪಿಜಿ ಕಿಟ್ ಇದ್ದು, ತುರ್ತು ಸಮಯದಲ್ಲಿ ನೆರವಿಗೆ ಬರುತ್ತದೆ. ಈ ಕಿಟ್ ಎಂಜಿನ್ ಕಂಪಾರ್ಟ್ ಮೆಂಟ್ ನಲ್ಲಿದ್ದು ಕಾರ್ ನ ಇಂಟಿರಿಯರ್ ಸ್ಥಳಾವಕಾಶಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಎಲ್ ಷೆವರ್ಲೆ ಬೀಟ್ ಎಲ್ ಪಿಜಿ ಆವೃತ್ತಿಗೆ ದರ ಸುಮಾರು 4.10 ಲಕ್ಷ ರೂ.


Click it and Unblock the Notifications








