ಲಕ್ಷುರಿ ಕಾರ್ ಬೇಡಿಕೆ ಹೆಚ್ಚು, ಪೂರೈಕೆಯದ್ದೇ ಚಿಂತೆ

ಕಳೆದ ವರ್ಷ ಅಂದ್ರೆ 2010ರಲ್ಲಿ ದೇಶದಲ್ಲಿ ಸುಮಾರು 15 ಸಾವಿರ ಲಕ್ಷುರಿ ವಾಹನ ಮಾರಾಟವಾಗಿದ್ದು, ಶೇ. 70ರಷ್ಟು ಪ್ರಗತಿ ಕಂಡಿವೆ. ಬಿಎಂಡಬ್ಲ್ಯು ಎಕ್ಸ್1, ಆಡಿ8, ಪೊರ್ಷ್ ಮತ್ತು ಮರ್ಸಿಡಿಸ್ ಎಸ್500 ಮುಂತಾದ ಕಾರ್ ಗಳ ಬೇಡಿಕೆ ಹೆಚ್ಚಿದ್ದರೂ ಅವುಗಳ ಡೆಲಿವರಿ ಸಮಯ ಹೆಚ್ಚಾಗಿದೆ.
ಗ್ರಾಹಕರ ಬೇಡಿಕೆಗೆ ತಕ್ಕಂತೆ ವಾಹನಗಳನ್ನು ಪೂರೈಸಲು ಕಂಪನಿ ಶ್ರಮಿಸುತ್ತಿದೆ ಎಂದು ಮರ್ಸಿಡಿಸ್ ಬೆಂಝ್ ಮಾರಾಟ ವಿಭಾಗದ ನಿರ್ದೇಶಕರು ಹೇಳುತ್ತಾರೆ. ಆದರೆ ಲಕ್ಷುರಿ ವಾಹನ ಡೆಲಿವರಿಯಾಗಲು ಸರಾಸರಿ 3-4 ತಿಂಗಳು ಕಾಯಬೇಕಿದೆ ಎಂದು ಅವರು ಹೇಳುತ್ತಾರೆ. ಇದೇ ಪರಿಸ್ಥಿತಿ ಬಿಎಂಡಬ್ಲ್ಯು ಮತ್ತು ಆಡಿಗೂ ಇದೆ.
ಸಿಕೆಡಿ ಮೂಲಕ ದೇಶದ ಘಟಕಗಳಿಗೆ ವಾಹನಗಳನ್ನು ಆಮದು ಮಾಡಿಕೊಳ್ಳುವುದರಿಂದ ವಾಹನ ಗ್ರಾಹಕರ ಕೈಗೆ ತಲುಪಲು ತಡವಾಗುತ್ತದೆ ಎಂದು ಮರ್ಸಿಡಿಸ್ ನ ಅಧಿಕಾರಿಯೊಬ್ಬರು ಹೇಳುತ್ತಾರೆ. ಪೊರ್ಷ್ ಕಂಡಿಷನ್ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಪೊರ್ಷ್ ಕಂಪನಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರನ್ನು ನಿರ್ಮಿಸುತ್ತದೆ. ಹೀಗಾಗಿ ಡೆಲಿವರಿ ಒಂದಿಷ್ಟು ತಡವಾಗುವುದು ಸಹಜ ಎಂದು ಪೊರ್ಷ್ ಇಂಡಿಯಾದ ನಿರ್ದೇಶಕರು ಹೇಳುತ್ತಾರೆ.


Click it and Unblock the Notifications








