ರೆನಾಲ್ಟ್ ಕಾನ್ಸೆಪ್ಟ್ ಕಾರ್- ಕಾಪ್ಟರ್

ಹೊಸ ಕಾಪ್ಟರ್ ಡಿಸಿಐ 169 ಟ್ವಿನ್-ಟರ್ಬೊ ಎಂಜಿನ್ ಹೊಂದಿದ್ದು ಫನ್ ಡ್ರೈವ್ ಗೆ ಸೂಕ್ತವಾಗಿದೆ. ಇದು ಕಡಿಮೆ ಕಾರ್ಬನ್ ಡೈಯಾಕ್ಷೆಡ್ ಹೊರಸೂಸುತ್ತದೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವುದಾಗಿ ಕಂಪನಿ ಹೇಳಿದೆ. ನೂತನ ಕಾರ್ ಡಿಝೈರ್ ಕಾರ್ ನಂತಿದ್ದು, ಆಕರ್ಷಕ ಫೀಚರ್ ಹೊಂದಿರಲಿದೆ ಎಂದು ಕಂಪನಿಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಹೇಳುತ್ತಾರೆ.
ಇದರ ಇಂಟಿರಿಯರ್ ಮತ್ತು ಎಕ್ಸ್ ಟಿರಿಯರ್ ಆಕರ್ಷಕವಾಗಿದ್ದು, ಗಮನಸೆಳೆಯುತ್ತದೆ. ಪರಿಸರಕ್ಕೆ ಹೊರಸೂಸುವ ಕಾರ್ಬನ್ ಅಂಶಗಳನ್ನು ಕಡಿಮೆ ಮಾಡಲು ಸಾಧ್ಯವಾಗುವಂತೆ ಇದನ್ನು ರೂಪಿಸಲಾಗಿದೆ. ಇದು ಚಿಟ್ಟೆಯಂತಹ ಡೋರ್ ಮತ್ತು 22 ಇಂಚಿನ ದೊಡ್ಡ ಟೈರ್ ಹೊಂದಿದ್ದು, ಕಪ್ಪು ಬಿಳುಪು ಬಣ್ಣದ ರಿಮ್ ಹೊಂದಿದೆ.
ಆರೆಂಜ್ ಬಣ್ಣದ ಬಾಡಿ, ಆಕರ್ಷಕ ಶೇಡ್, ಆಕರ್ಷಕ ಇಂಟಿರಿಯರ್, ಹೊರವಿನ್ಯಾಸದ ಸೊಬಗಿನಿಂದ ಈ ಕಾರ್ ಬೆರಗು ಮೂಡಿಸುತ್ತದೆ. ಕಾಪ್ಟರ್ ಪ್ರಯಾಣ ಬೋಟ್ ನಲ್ಲಿ ಸ್ಮೂತಾಗಿ ಪ್ರಯಾಣಿಸಿದ ಅನುಭವವಾಗಲಿದೆ ಎಂದು ಸಿಇಒ ಹೇಳುತ್ತಾರೆ. ಡೈನಾಮಿಕ್ ಆಗಿರುವ ಗ್ರಾಫಿಕ್ಸ್ ವಿನ್ಯಾಸ ಕಾರ್ ಗೆ ಹೊಸ ಲುಕ್ ನೀಡಿದೆ.


Click it and Unblock the Notifications








