ನಿಸಾನ್‌ನಿಂದ ಅಗ್ಗದ ಡಸ್ಟರ್ ಎಸ್‌ಯುವಿ ನಿರೀಕ್ಷಿಸಿ!

Posted By:

ಜಪಾನ್ ಮೂಲದ ನಿಸ್ಸಾನ್ ಕಂಪನಿಯು ದೇಶದ ಮಾರುಕಟ್ಟೆಯನ್ನು ಗುರಿಯಾರಿಸಿಕೊಂಡು ಡಸ್ಟರ್ ನಿಸ್ಸಾನ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ. ಮೂಲಗಳ ವರದಿ ಪ್ರಕಾರ ರೆನೊ‌ ಕಂಪನಿಯೊಂದಿಗೆ ಟೈ ಅಪ್ ಹೊಂದಿರುವ ನಿಸ್ಸಾನ್, ಬ್ಯಾಡ್ಜ್‌ ಬದಲಾವಣೆಯೊಂದಿಗೆ ದೇಶದ ರಸ್ತೆಗಿಳಿಯಲಿದೆ.

ನಿಮಗಿದು ತಿಳಿದಿರಲಿ...

ಜಾಗತಿಕವಾಗಿ ಪಾಲುದಾರಕೆ ಹೊಂದಿರುವ ಜಪಾನ್ ಮೂಲದ ನಿಸ್ಸಾನ್ ಹಾಗೂ ಫ್ರೆಂಚ್ ಕಾರು ತಯಾರಕ ಕಂಪನಿ ರೆನೊ ಭಾರತದಲ್ಲಿ ಕ್ರಾಸ್-ಬ್ಯಾಡ್ಜಿಂಗ್ (ಲೊಗೊ ಬದವಾವಣೆ) ವ್ಯವಸ್ಥೆಯನ್ನು ಹೊಂದಿದೆ. ಇದರಂತೆ ರೆನೊ ಬ್ರಾಂಡ್‌ಗಳಿಗೆ ನಿಸ್ಸಾನ್ ಬ್ಯಾಡ್ಜ್‌ಗಳನ್ನು ಲಗತ್ತಿಸಿ ಕಾರುಗಳನ್ನು ಮಾರುಕಟ್ಟೆಗಿಳಿಸಲಾಗುತ್ತಿದೆ. ಅದೇ ರೀತಿ ನಿಸ್ಸಾನ್ ಮೈಕ್ರಾ ಹಾಗೂ ಸನ್ನಿ ಕಾರುಗಳಿಗೆ ರೆನೊ ಬ್ಯಾಡ್ಜ್ ನೀಡಿ ಮಾರುಕಟ್ಟೆಗಿಳಿಸಲಾಗಿತ್ತು.

ಹಾಗಿದ್ದರೆ ನಿಸ್ಸಾನ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದು ಗ್ರಾಹಕರಿಗೆ ಬಿಟ್ಟ ವಿಚಾರ. ಹಾಗಾಗಿ ರೆನೊ ಡಸ್ಟರ್ ಹಾಗೂ ರಿ-ಬ್ಯಾಡ್ಜ್ ಹೊಂದಿರುವ ನಿಸ್ಸಾನ್ ಡಸ್ಟರ್‌ನಲ್ಲಿ ಯಾವುದು ಶ್ರೇಷ್ಠ ಎಂಬುದನ್ನು ನೀವೇ ಆರಿಸಿಕೊಳ್ಳಬಹುದು. ಆದರೆ ಬ್ಯಾಡ್ಜ್ ಬದಲಾವಣೆಯೊಂದಿಗೆ ರೆನೊ ಡಸ್ಟರ್ ಸ್ಫೋರ್ಟ್ ಯುಟಿಲಿಟಿ ವೆಹಿಕಲ್ ಬಿಡುಗಡೆ ಮಾಡಲಿರುವ ನಿಸ್ಸಾನ್, 2014ರಲ್ಲಿ ದೇಶದ ರಸ್ತೆಗಿಳಿಸಲಿದ್ದು, ಮತ್ತಷ್ಟು ಅಗ್ಗದ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ಗ್ರಿಲ್, ಬಂಪರ್, ಹುಡ್ ಹಾಗೂ ಫೆಂಡರ್‌ಗಳಲ್ಲಿ ಬದಲಾವಣೆಗಳನ್ನು ನಾವು ನಿಸ್ಸಾನ್‌ ಎಸ್‌ಯುವಿ ಡಸ್ಟರ್ ಕಾರಿನಿಂದ ನಿರೀಕ್ಷಿಸಬಹುದಾಗಿದೆ. ಕಾಸ್ಮೆಟಿಕ್ಸ್ ಬದಲಾಗಿ ಮಹತ್ತರ ಬದಲಾವಣೆ ತರಲಾಗುತ್ತದೆಯೇ ಎಂಬುದಕ್ಕೆ ಸದ್ಯದಲ್ಲೇ ಉತ್ತರ ದೊರಕಲಿದೆ.

ನಿಸ್ಸಾನ್ ಅಥವಾ ರೆನೊ ಡಸ್ಟರ್?

ನಿಸ್ಸಾನ್ ಅಥವಾ ರೆನೊ ಡಸ್ಟರ್?

ಪ್ರಸ್ತುತ ಡಸ್ಟರ್ ಎಸ್‌ಯುವಿ ಕಾರಿಗೆ ಜಾಗತಿಕವಾಗಿ ಭಾರಿ ಪ್ರತಿಕ್ರಿಯೆ ದೊರಕುತ್ತಿದೆ. ಸ್ಫೋರ್ಟ್ ಯುಟಿಲಿಟಿ ಕಾರು ಆದ ಡಸ್ಟರ್‌ಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಹಾಗಾಗಿ ಭಾರತದಲ್ಲಿ ನಿಸ್ಸಾನ್ ತನ್ನ ಬಿಡುಗಡೆಯನ್ನು 2014ರ ವರೆಗೂ ಮುಂದೂಡುತ್ತಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ರೆನೊ ಜತೆ ಪಾಲುದಾರಿಕೆ ಹೊಂದಿರುವ ನಿಸ್ಸಾನ್ ಎಸ್‌ಯುವಿ ಕಾರು ದೇಶದಲ್ಲಿ ಪರಿಚಯಿಸಲಾಗುತ್ತಿರುವ ಮೊದಲ ಬ್ರಾಂಡ್ ಆಗಿರಲಿದೆ. ಪ್ರಸ್ತುತ ಬ್ಯಾಡ್ಜ್ ಬದಲಾವಣೆಯೊಂದಿಗೆ ಮೈಕ್ರಾ (ರೆನೊ ಪಲ್ಸ್) ಹಾಗೂ ಸನ್ನಿ (ರೆನೊ ಸ್ಕಾಲಾ) ಬಿಡುಗಡೆ ಮಾಡಲಾಗಿದೆ.

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ಬಹುನಿರೀಕ್ಷಿತ ನಿಸ್ಸಾನ್ ಎಸ್‌ಯುವಿ ಕಾರು ಪ್ರಸ್ತುತ ಇರುವ ರೆನೊ ಡಸ್ಟರ್‌ಗಿಂತಲೂ ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದೆ.

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ನಿಸ್ಸಾನ್‌ನಿಂದ ಡಸ್ಟರ್ ಎಸ್‌ಯುವಿ

ನಿಸ್ಸಾನ್ ಡಸ್ಟರ್ ಎಸ್‌ಯುವಿ ರೆನೊ ಡಸ್ಕರ್‌ಗಿಂತ ಅಗ್ಗದ ದರದಲ್ಲಿ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.

English summary
Nissan is all set to launch the Duster SUV. If you are not aware, Nissan and Renault have a cross-badging understanding in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark