ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

Written By:

ಕೆಲವು ಜನರೇ ಹಾಗೆ, ಖುಷಿಯನ್ನು ಎಲ್ಲಿ, ಯಾವಾಗ, ಹೇಗೆ ಪಡೆಯಲು ಬಯಸುತ್ತಾರೆ ಹೇಳಲಾಗುವುದಿಲ್ಲ, ಇದೇ ರೀತಿಯ ಮನಸ್ಥಿತಿ ಹೊಂದಿರುವ ಇಂಗ್ಲೆಂಡ್ ದೇಶದ ಯುವತಿಯೊಬ್ಬಳು ತನಗೆ ಬೇಕಾದ ಜೀವನದ ಸಂತೋಷ ಪಡೆಯಲು ಪಯಣ ಮಾಡುವ ಮೂಲಕ ಈಡೇರಿಸಿಕೊಳ್ಳಲು ಹೊರಟಿದ್ದಾಳೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಹೌದು, ಇಟಲಿಯಲ್ಲಿ ಹುಟ್ಟಿ ಕಳೆದ 5 ವರ್ಷದಿಂದ ಇಂಗ್ಲೆಂಡಿನಲ್ಲಿ ವಾಸವಾಗಿರುವ ಮರೀನಾ ತನಗೆ ಇಷ್ಟವಿಲ್ಲದ ಕೆಲಸ ಮಾಡಲು ಮನಸ್ಸಿಲ್ಲದ ಕಾರಣ ಕೆಲಸವನ್ನು ತ್ಯಜಿಸಿ ತನಗೆ ಇಷ್ಟವಾದ ನಾಯಿಮರಿ ಜೊತೆ ಪ್ರಪಂಚ ಸುತ್ತಲು ಹೊರಟಿದ್ದಾಳೆ. ಮೊದಲಿಂದಲೂ ತನಗೆ ಮೆಚ್ಚಿನ ನಾಯಿಮರಿ 'ಹೂಡಿ' ಜೊತೆ ಅತಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿದ್ದ ಮರೀನಾ, ಜೊತೆಗೆ ಈ ನಾಯಿಮರಿಯನ್ನೂ ಸಹ ಕರೆದೊಯ್ಯಲು ನಿರ್ಧರಿಸಿದಳು.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ತಾನು ಪ್ರವಾಸ ಮಾಡಬೇಕು ಎಂದು ನಿರ್ಧರಿಸಿದ ತಕ್ಷಣ ಆಕೆಯ ತಲೆಯಲ್ಲಿ ಹೇಗೆ ಪ್ರಯಾಣಿಸಬೇಕು ಎಂಬ ಪ್ರೆಶ್ನೆ ಮೂಡಿದ್ದು ಸುಳ್ಳಲ್ಲ, ಅದಕ್ಕೆ ಆಕೆ ಆಯ್ದುಕೊಂಡ ವಾಹನ ರೆನೊ ವ್ಯಾನ್.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ವ್ಯಾನಿನಲ್ಲಿ ಪ್ರತಿಯೊಂದನ್ನೂ ಆಕೆಯೇ ನಿರ್ಮಿಸಿಕೊಂಡಿದ್ದು, ಮರೀನಾ ಮತ್ತು ನಾಯಿಮರಿ ಪ್ರಯಾಣದ ಜೀವನ ನೆಡೆಸಲು ಬೇಕಾಗಿರುವ ಎಲ್ಲಾ ಸೌಲಭ್ಯಗಳು ಈ ವ್ಯಾನಿನಲ್ಲಿವೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಪಯಣಕ್ಕೆ ಈಕೆ ಆರಿಸಿಕೊಂಡಿರುವ ರೆನೊ ವ್ಯಾನ್ ಸಾಮಾನ್ಯದಲ್ಲ ಓದುಗರೇ, ಪ್ರವಾಸಕ್ಕೆಂದೇ ಮಾಡಿರುವ ವ್ಯಾನ್ ಇದಾಗಿದ್ದು, ಮಲಗುವ ಕೋಣೆಯು ಇದೆ ಎಂದರೆ ನೀವೇ ಊಹಿಸಿಕೊಳ್ಳಿ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಮರೀನಾ ಪಿರೋ ಹೇಳುವಂತೆ, " ನನ್ನ ಭಾವನೆಗಳಿಗೆ ವಿರುದ್ಧ ನೆಡೆದುಕೊಳ್ಳದಿರಲು ನಿರ್ಧರಿಸಿದ ಮೇಲೆ ನನ್ನ ಜೀವನ ಶೈಲಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಪ್ರವಾಸ ಕೈಗೊಂಡಿದ್ದು, ಇದಕ್ಕಾಗಿ ನಾನು ಆಯ್ದುಕೊಂಡಿದ್ದು ಈ ಮೊದಲೇ ಹೆಚ್ಚು ಬಳಕೆಯಾದ ಚಿಕ್ಕ ವಾಹನ ಕೊಳ್ಳುವುದು".

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಹಳೆಯ ವ್ಯಾನಿನಲ್ಲಿ ಪ್ರತಿಯೊಂದು ತಾಂತ್ರಿಕ ವಿಭಾಗದ ವಿಚಾರ ತಿಳಿದಿರುವ ಮರೀನಾ, ವಾಹನ ಕೆಟ್ಟು ನಿಂತರೂ ಸಹ ಸರಿಪಡಿಸಿ ಮತ್ತೆ ಪಯಣ ಮುಂದುವರೆಸುವಷ್ಟು ಚಾಣಾಕ್ಷತೆ ಈಕೆಗಿದೆ ಎಂದರೆ ನೀವೇ ತಿಳಿದುಕೊಳ್ಳಿ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಈ ಬಗ್ಗೆ ತಾನು ಸಾಮಾಜಿಕ ತಾಣಗಳಲ್ಲಿ ವಿಚಾರ ಮಂಡಿಸಿದರೂ ಸಹ ಹೆಣ್ಣು ಮಗಳು ಎನ್ನುವ ಕಾರಣಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯಲಿಲ್ಲ ಎನ್ನುತ್ತಾರೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಇದರಿಂದ ವಿಮುಖಳಾದೆ ತಾನೇ ಒಂದು ಬ್ಲಾಗ್ ತೆರೆದು ತಾನು ಮಾಡುತ್ತಿರುವ ಕಾರ್ಯದ ಬಗ್ಗೆ ಜನರಿಗೆ ಫೋಟೋ ಮತ್ತುವಿಡಿಯೋ ಸಹಿತ ವಿವರಿಸುವ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡ ಮರೀನಾ ತಾನು ನಿರ್ಮಿಸಿದ ವ್ಯಾನ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಪುರುಷರು ಬರೆಯುವ ಬ್ಲಾಗ್ ಲೇಖನಗಳು ಹೆಚ್ಚು ಕ್ಲಿಷ್ಟತೆಯಿಂದ ಕೂಡಿದ್ದು ಅವುಗಳನ್ನು ಜನತೆ ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗಬಹುದು ಎಂಬುದು ಈಕೆಯ ಅಭಿಪ್ರಾಯವಾಗಿದೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ತಾನು ಈ ಪಯಣವನ್ನು ಯಶಸ್ವಿಯಾಗಿ ಮುಗಿಸಿ ಮತ್ತೊಬ್ಬರಿಗೆ ಸ್ಪೂರ್ತಿಯಾದರೆ ಅಷ್ಟೇ ಸಾಕು ಎನ್ನುವ ಮರೀನಾ ಈಗ ಮಾಡ ಹೊರಟಿರುವ ಕಾರ್ಯದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದಾಳೆ.

 ಕೈತುಂಬಾ ಸಂಬಳ ಬರುತಿದ್ದ ಕೆಲಸ ಬಿಟ್ಟು ಈಕೆ ಮಾಡಿದ್ದೇನು ಗೊತ್ತಾ...!?

ಈಗಿನ ಕಾಲದಲ್ಲಿ ಪ್ರತಿಯೊಂದು ಕೆಲಸವನ್ನು ಇಂಟರ್ನೆಟ್ ಬಳಸಿ ಮಾಡಲಾಗುತ್ತಿದ್ದು, ಹೀಗಿರುವಾಗ ಕೆಲಸವನ್ನು ನಿರ್ದಿಷ್ಟ ಸ್ಥಳದಲ್ಲಿ ಮಾಡುವ ಅಗತ್ಯ ಖಂಡಿತ ಇಲ್ಲ, ಎನ್ನುವ ಮರೀನಾ ತಾವು ಮಾಡುತ್ತಿರುವ ಉದ್ಯೋಗದಿಂದ ಸಂತೃಪ್ತಿ ಹೊಂದದಿದ್ದರೆ, ಕೆಲಸ ತ್ಯಜಿಸಿ ನಿಮಗಿಷ್ಟವಾದ ಕಾರ್ಯ ಕೈಗೆತ್ತಿಕೊಳ್ಳಿ ಎನ್ನುವ ಕಿವಿ ಮಾತು ಹೇಳುವುದನ್ನು ಮರೀನಾ ಪಿರೋ ಮರೆಯುವುದಿಲ್ಲ.

ರೆನೊ ಮೋಟರ್ಸ್ ಲೊಡ್ಜಿ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ

Read more on ರೆನೊ renault
English summary
“We are living in a time where many jobs can be done through the web, so why not take advantage of it?"
Please Wait while comments are loading...

Latest Photos