ಫೋರ್ಡ್ ಎಕೊಸ್ಪೋರ್ಟ್ ದರ ಡಸ್ಟರಿಗಿಂತ್ಲೂ ಕಡಿಮೆ
ನೂತನ ಎಕೊಸ್ಪೋರ್ಟ್ ಕಾರಿನ ಕುರಿತಾದ ಮಾಹಿತಿಗಳನ್ನು ಕೊಂಚ ಕೊಂಚ ಬಹಿರಂಗಪಡಿಸಲು ಫೋರ್ಡ್ ಇಂಡಿಯಾ ಆರಂಭಿಸಿದೆ. ನೂತನ ಕಾರಿಗೆ ರೆನೊ ಡಸ್ಟರೇ ಪ್ರಮುಖ ಪ್ರತಿಸ್ಪರ್ಧಿ. ವಿಶೇಷವೆಂದರೆ ನೂತನ ಫೋರ್ಡ್ ಎಕೊಸ್ಪೋರ್ಟ್ ಕಾರಿನ ದರ ಡಸ್ಟರಿಗಿಂತಲೂ ಕಡಿಮೆ ಇರಲಿದೆಯೆಂಬ ಮಾಹಿತಿ ನಮಗೆ ದೊರಕಿದೆ.
ಫೋರ್ಡ್ ಎಕೊಸ್ಪೋರ್ಟ್ ದರ ನಾಲ್ಕು ಮೀಟರಿಗಿಂತಲೂ ಕಡಿಮೆ ಇರಲಿದೆ. ಇದು 1.5 ಲೀಟರ್ ಎಂಜಿನ್ ಹೊಂದಿರಲಿದೆ. ವಿಶೇಷವೆಂದರೆ ಇದರಲ್ಲಿ 20 ಸಣ್ಣ ಸಂಗ್ರಹ ಜಾಗಗಳು ಇರಲಿದೆ. ಇದರ ಹಿಂದಿನ ಸಂಗ್ರಹ ಸ್ಥಳದಲ್ಲಿ 560 ಲೀಟರಿನ ವಾಷಿಂಗ್ ಮೆಷಿನ್ ಇಡಬಹುದೆಂದು ಕಂಪನಿ ಪ್ರತಿಪಾದಿಸಿದೆ.
ಬೆಟ್ಟಗುಡ್ಡ ಹಾದಿಗಳಲ್ಲಿ ಸರಾಗವಾಗಿ ಚಲಿಸಲು ಹಿಲ್ ಲಾಂಚ್ ಅಸಿಸ್ಟ್, ಅನನ್ಯ ಡ್ರೈವಿಂಗಿಗೆ ಸ್ಮಾರ್ಟ್ ಸ್ಟಾರ್ಟ್ ಸ್ಟಾಪ್ ಬಟನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ, ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಮುಂತಾದ ಫೀಚರುಗಳಿರಲಿವೆ.
ನೂತನ ಎಕೊಸ್ಪೋರ್ಟ್ ಕಾರಿನ ಡೀಸೆಲ್ ಆವೃತ್ತಿಯನ್ನೂ ಕಂಪನಿ ಪರಿಚಯಿಸಲಿದೆಯಂತೆ. ಬಹುಶಃ ಡೀಸೆಲ್ ಆವೃತ್ತಿಯು ಜಾಗತಿಕ ಮಾರುಕಟ್ಟೆಗೆ ಮಾತ್ರ ಸೀಮಿತವಾಗುವ ನಿರೀಕ್ಷೆಯಿದೆ.


Click it and Unblock the Notifications









