ಫೋರ್ಡ್ ಎಕೊಸ್ಪೋರ್ಟ್ ದರ ನಿರೀಕ್ಷಿಸಿದಷ್ಟು ದುಬಾರಿಯಾಗಲ್ಲ!

ಫೋರ್ಡ್ ಎಕೊಸ್ಪೋರ್ಟ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ಬಹುನಿರೀಕ್ಷಿತ ಫೋರ್ಡ್ ಎಕೊಸ್ಪೋರ್ಟ್ ಸಣ್ಣ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ದರವು ನಿರೀಕ್ಷಿಸಿದಕ್ಕಿಂತಲೂ ಕಡಿಮೆ ದರಕ್ಕೆ ದೊರಕಲಿದೆ ಎಂದು ವರದಿಗಳು ಹೇಳಿವೆ.

ದರ ಕಡಿಮೆಯಾಗಲು ಪ್ರಮುಖ ಕಾರಣ ಫೋರ್ಡ್ ಎಕೊಸ್ಪೋರ್ಟ್ ಉತ್ಪಾದನೆಯ ಸ್ಥಳೀಕರಣ. ಅಮೆರಿಕದ ಕಾರು ಕಂಪನಿಯು ನೂತನ ಐದು ಸೀಟಿನ ಎಸ್‌ಯುವಿಗೆ ಶೇಕಡ 80ರಷ್ಟು ಬಿಡಿಭಾಗಗಳನ್ನು ಸ್ಥಳೀಯವಾಗಿ ಪೂರೈಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಇದರಿಂದ ಎಕೊಸ್ಪೋರ್ಟ್ ದರ ಕಡಿಮೆಯಾಗಲಿದೆ.

ಉತ್ಪಾದನೆ ಸ್ಥಳೀಕರಣದಿಂದಾಗಿ ಫೋರ್ಡ್ ಎಕೊಸ್ಪೋರ್ಟ್ ದರ ಸುಮಾರು 7-9 ಲಕ್ಷ ರುಪಾಯಿ ಆಸುಪಾಸಿನಲ್ಲಿರಲ್ಲಿದೆ. ಬ್ರೆಝಿಲ್ ದೇಶದಲ್ಲಿ ಈಗ ಎಕೊಸ್ಪೋರ್ಟ್ ದರ ಸುಮಾರು 53,490 ರಿಯಲ್ ಇದೆ. ಇದನ್ನು ರೂಪಾಯಿಗೆ ಪರಿವರ್ತಿಸಿದಾಗ ಸುಮಾರು 14.5 ಲಕ್ಷ ರು. ಆಗುತ್ತದೆ. ಆದರೆ ಇದೇ ದರ ಭಾರತದಲ್ಲಿ ಇರಲಾರದು ಎಂದು ಈ ಹಿಂದೆ ಹೇಳಿದ್ದೇವು.

ಕಂಪನಿಯು ಬ್ರೇಝಿಲ್ ನಲ್ಲಿ ಸದ್ಯ ಬೇಸ್ ಆವೃತ್ತಿಯ ದರ ಮಾಹಿತಿ ಮಾತ್ರ ಬಹಿರಂಗಪಡಿಸಿದೆ. ಉಳಿದ ಆವೃತ್ತಿಗಳ ಮಾಹಿತಿಯನ್ನು ಕಂಪನಿ ಶೀಘ್ರದಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಕಂಪನಿಯು ಚೆನ್ನೈ ಘಟಕಕ್ಕೆ ಸುಮಾರು 750 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ ಎಂದು ವರದಿಗಳು ಹೇಳಿವೆ. ಕಂಪನಿಯು ಈ ವರ್ಷದಿಂದಲೇ ಚೆನ್ನೈ ಘಟಕದಲ್ಲಿ ಎಕೊಸ್ಪೋರ್ಟ್ ಉತ್ಪಾದನೆ ಆರಂಭಿಸಲಿದೆ. ಮುಂದಿನ ವರ್ಷದ ಆರಂಭದಿಂದಲೇ ರಸ್ತೆಯಲ್ಲಿ ಎಕೊಸ್ಪೋರ್ಟ್ ಮೋಡಿ ಮಾಡುವ ನಿರೀಕ್ಷೆಯಿದೆ.

More from DriveSpark

Article Published On: Thursday, July 19, 2012, 10:23 [IST]
English summary
EcoSport compact SUV would carry a highly affordable price tag that would make it much more cheaper than expected. he reason being high localisation plan the American carmaker is aiming at. Ford is looking to localise production of the 5-seater SUV by about 80%.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+