ಫೋರ್ಡ್ ಎಕೊಸ್ಪೋರ್ಟ್ ದರ ಮಾಹಿತಿ ಬಹಿರಂಗ

Posted By:

ಭಾರತ ಸೇರಿದಂತೆ ಜಾಗತಿಕವಾಗಿ ಎಕೊಸ್ಪೋರ್ಟ್ ಎಸ್‌ಯುವಿ ಪರಿಚಯಿಸುವುದಾಗಿ ಫೋರ್ಡ್ ಭರವಸೆ ನೀಡಿತ್ತು. ಇದೀಗ ನಿಗದಿ ಪ್ರಕಾರ ವಿವಿಧ ದೇಶಗಳಲ್ಲಿ ಕಂಪನಿಯು ಎಕೊಸ್ಪೋರ್ಟ್ ಅನಾವರಣ ಮಾಡುವ ದಿನಾಂಕವನ್ನು ಶೆಡ್ಯೂಲ್ ಮಾಡುತ್ತಿದೆ. ಕಂಪನಿಯು ಮುಂದಿನ ತಿಂಗಳು ಫೋರ್ಡ್ ಎಕೊಸ್ಪೋರ್ಟ್ ಎಸ್‌ಯುವಿಯನ್ನು ಬ್ರೆಝಿಲ್ ದೇಶದಲ್ಲಿ ಪರಿಚಯಿಸಲಿದೆ.

ದೇಶದ ಗ್ರಾಹಕರು ಬಹುನಿರೀಕ್ಷೆಯಿಂದ ಫೋರ್ಡ್ ಎಕೊಸ್ಪೋರ್ಟ್ ಎಸ್‌ಯುವಿಯನ್ನು ಕಾಯುತ್ತಿದ್ದಾರೆ. ಆ ಕಾರಿನ ಟೆಕ್ ಮಾಹಿತಿ, ದರದ ಮಾಹಿತಿಗಾಗಿ ಎಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ವಿಶೇಷವೆಂದರೆ ಅದರ ದರ ಮಾಹಿತಿ ಈಗ ಬಹಿರಂಗಗೊಂಡಿದೆ.

ಫೋರ್ಡ್ ಬ್ರೆಝಿಲ್ ವೆಬ್ ತಾಣದಲ್ಲಿ ಪ್ರಕಟವಾದ ಎಕೊಸ್ಪೋರ್ಟ್ ದರ ಮಾಹಿತಿ ಪಟ್ಟಿ ನಮಗೆ ಸಿಕ್ಕಿದೆ. ದೇಶಕ್ಕೆ ಆಗಮಿಸುವಾಗ ಈ ದರದಲ್ಲಿ ಕೊಂಚ ಬದಲಾವಣೆ ಕಾಣಬಹುದು.

ನೂತನ ಎಕೊಸ್ಪೋರ್ಟ್ ದರ ಬ್ರೆಝಿಲ್ 53,490 ರಿಯಲ್(ಬ್ರೆಝಿಲ್ ಕರೆನ್ಸಿ) ಆಗಿದೆ. ಅಂದರೆ ರುಪಾಯಿಗೆ ಕನ್ವರ್ಟ್ ಮಾಡುವಾಗ ಸುಮಾರು 14.5 ಲಕ್ಷ ರುಪಾಯಿ ಆಗುತ್ತದೆ. ಕಂಪನಿಯು ಸದ್ಯ ಬೇಸ್ ಆವೃತ್ತಿಯ ದರ ಮಾಹಿತಿ ಮಾತ್ರ ಬಹಿರಂಗಪಡಿಸಿದೆ. ಉಳಿದ ಆವೃತ್ತಿಗಳ ಮಾಹಿತಿಯನ್ನು ಕಂಪನಿ ಶೀಘ್ರದಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

ಬ್ರೆಝಿಲ್ ನಲ್ಲಿ ಉಳಿದ ಎಕೋಸ್ಪೋರ್ಟ್ ಆವೃತ್ತಿಗಳ ಅಂದಾಜು ದರ 59,990 ರಿಯಲ್( 16.22 ಲಕ್ಷ ರು.) ಮತ್ತು 63,690 ರಿಯಲ್( 17.22 ಲಕ್ಷ ರು.) ಇರುವ ನಿರೀಕ್ಷೆಯಿದೆ. ದೇಶದ ರಸ್ತೆಗೆ ಆಗಮಿಸುವಾಗ, ಇಲ್ಲಿನ ತೆರಿಗೆ ಮತ್ತು ಇನಿತರ ಕಾರಣಗಳಿಗೆ ತಕ್ಕಂತೆ ದರದಲ್ಲಿ ಬದಲಾವಣೆ ಇರುವ ನಿರೀಕ್ಷೆಯಿದೆ.

English summary
Here we bring you the detailed price list of the EcoSport which has appeared on Ford Brazil's website. The SUV will be available in three variants with prices for the base model starting at BRL 53,490 which converts to approx. Rs 14.5 lakhs. Meanwhile, more variants are expected to be rolled out later.
Story first published: Monday, July 16, 2012, 15:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark