ಟಾಟಾ ಮೋಟರ್ಸ್ ಆದಾಯ ಹೆಚ್ಚಳ

Tata Motors
ದೇಶದ ಎರಡನೇ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 31,685 ಕೋಟಿ ರೂ. ಆದಾಯ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯ 25,974 ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 22ರಷ್ಟು ಏರಿಕೆ ದಾಖಲಿಸಿದೆ.

ಇದೇ ತ್ರೈಮಾಸಿಕದಲ್ಲಿ ಕಂಪನಿಯ ವಹಿವಾಟು ಲಾಭ 4,822 ಕೋಟಿ ರೂ.ಗೆ ತಲುಪಿದ್ದು ಕಳೆದ ವರ್ಷದ ಇದೇ ಅವಧಿಗಿಂತ ಸುಮಾರು 15.2ರಷ್ಟು ಏರಿಕೆ ಕಂಡಿದೆ. ಕಂಪನಿಯ ಒಟ್ಟಾರೆ ಲಾಭ 2,424 ಕೋಟಿ ರೂ. ತಲುಪಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ 650 ಕೋಟಿ ರೂ. ಹೆಚ್ಚಾಗಿದೆ. 2010ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಆದಾಯ 87,523 ಕೋಟಿ ರೂ. ತಲುಪಿದ್ದು, ಶೇ. 37.3ರಷ್ಟು ಏರಿಕೆ ಕಂಡಿದೆ.

ದೇಶಿ ಮಾರುಕಟ್ಟೆಯಲ್ಲಿ ಟಾಟಾ ವಾಣಿಜ್ಯ ವಾಹನಗಳ ಮಾರಾಟ ಶೇಕಡ 21.5ರಷ್ಟು ಏರಿಕೆ ದಾಖಲಿಸಿದೆ. ಫಿಯೆಟ್, ಜಾಗ್ವಾರ್, ಲ್ಯಾಂಡ್ ರೋವರ್ ಮಾದರಿಯ ವಾಹನಗಳಿಗೆ ಬೇಡಿಕೆ ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 4.7ರಷ್ಟು ಏರಿಕೆ ಕಂಡಿದೆ. ಪ್ರಯಾಣಿಕ ಕಾರ್ ಮಾರಾಟ ಶೇ. 12.7 ರಷ್ಟು ಹೆಚ್ಚಾಗಿದೆ.

Article Published On: Saturday, February 12, 2011, 15:14 [IST]
English summary
English Summary: The country’s second largest auto maker Tata Motors has lot of joys to celebrate as its revenue hit the 22% rise with Rs31685 crores against Rs25974 crores of the same quarter of 2009.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+