ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ವೋಕ್ಸ್ ವ್ಯಾಗನ್ ತರಬೇತಿ

ಇದಕ್ಕಾಗಿ ಪುಣೆಯ ಸಮುದಾಯ ಕಾಲೇಜೊಂದಕ್ಕೆ ತಂತ್ರಜ್ಞಾನ ತರಬೇತಿ ನೀಡಲಿದೆ. ಈ ಕುರಿತು ಪುಣೆಯ ಮಿತ್ರ ಮಂಡಲ ಪಾಲಿಟೆಕ್ನಿಕ್ ಕಾಲೇಜಿನೊಂದಿಗೆ ವೋಕ್ಸ್ ವ್ಯಾಗನ್ ಗ್ರೂಪ್ ಟೆಕ್ನಿಕಲ್ ಎಜ್ಯುಕೇಷನ್ ಪ್ರೊಗ್ರಾಮ್ ಕಾರ್ಯತಂತ್ರ ಒಪ್ಪಂದ ಮಾಡಿಕೊಂಡಿದೆ. ಪೊಲೊ ಕಾಂಪ್ಯಾಕ್ಟ್ ಮತ್ತು ವೆಂಟೊ ಸೆಡಾನ್ ಮೂಲಕ ದೇಶದ ಮಾರುಕಟ್ಟೆಯಲ್ಲಿ ಪ್ರಬಲವಾದ ನಂತರ ವೋಕ್ಸ್ ವ್ಯಾಗನ್ ಇಲ್ಲಿ ಒಂದಿಷ್ಟು ಶೈಕ್ಷಣಿಕ ಕಾರ್ಯಕ್ರಮ ರೂಪಿಸಲು ಮನಸ್ಸು ಮಾಡಿದೆ.
ಮಿತ್ರ ಮಂಡಲ ಪಾಲಿಟೆಕ್ನಿಕ್ ಇಂತಹ ಅವಕಾಶ ಪಡೆದ ಭಾರತದ ಮೊದಲ ಕಾಲೇಜ್ ಆಗಿದೆ. ಈ ತರಬೇತಿಯಿಂದ ಮೆಕಾನಿಕಲ್ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಅವಕಾಶ ಹೆಚ್ಚಾಗಲಿದೆ. ಇದರಿಂದ ವಾಹನ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಈ ಸಮುದಾಯದ ವಿದ್ಯಾರ್ಥಿಗಳಿಗೆ ನೆರವಾಗಲಿದೆ.


Click it and Unblock the Notifications








