ಮಹೀಂದ್ರ ಜಿಯೊ: ನೂತನ ಪ್ಯಾಸೆಂಜರ್ ಕ್ಯಾಬ್

ಕೆಲವು ತಿಂಗಳ ಹಿಂದೆ ಮಹೀಂದ್ರ ಮ್ಯಾಕ್ಸಿಮೊ ಪಿಕ್ ಅಪ್ ಟ್ರಕ್ ಹೊರತಂದಿತ್ತು. ಆದರೆ ಅದು ಒಂದಿಷ್ಟು ದುಬಾರಿಯಾಗಿತ್ತು. ಗ್ರಾಹಕರು ಇನ್ನಷ್ಟು ಅಗ್ಗದ ವಾಹನ ಬಯಸಿದ್ದರು. ಗ್ರಾಹಕರಿಗೆ ಇಷ್ಟವಾಗುವಂತಹ ಹೊಸ ಉತ್ಪನ್ನವೊಂದನ್ನು ಬಿಹಾರದಲ್ಲಿ ಮಹೀಂದ್ರ ಹೊರತಂದಿದೆ. ಅದು ಮಹೀಂದ್ರ ಜಿಯೊ ಪ್ಯಾಸೆಂಜರ್ ಕ್ಯಾಬ್.
ಟಾಟಾ, ಬಜಾಜ್, ಪಿಯಾಜಿಯೊಗಳಿಗೆ ಪೈಪೋಟಿ ನೀಡಲು ಮಹೀಂದ್ರ ಸಿದ್ಧವಾಗಿದೆ. ನೂತನ ಪ್ಯಾಸೆಂಜರ್ ಕ್ಯಾಬ್ ದರವೂ ಕಡಿಮೆ ಇರುವುದರಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಜಿಯೊ ಪ್ಯಾಸೆಂಜರ್ ಕ್ಯಾಬ್
* ಎಂಜಿನ್: ಸಿಂಗಲ್ ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್
* 441.5 ಸಿಸಿ
* ಗೇರ್: ನಾಲ್ಕು ಮುಂದಕ್ಕೆ, ಒಂದು ರಿವರ್ಸ್ ಗೇರ್
ದರ: ಮಹೀಂದ್ರ ನೂತನ ಕ್ಯಾಬ್ ನ್ನು ಬಿಹಾರದಲ್ಲಿ ಹೊರತಂದಿದೆ. ಅಲ್ಲಿನ ದರ 1.95 ಲಕ್ಷ ರೂಪಾಯಿ.


Click it and Unblock the Notifications