ಭಾರತಕ್ಕೆ ಬಂತು ದುಬಾರಿ ಬೈಕುಗಳು!

Harley-Davidson starts bookings in India
ಯಮಹಾ, ಹೋಂಡಾ ಸಂಸ್ಥೆಗಳು ಇನ್ನೂ ತಮ್ಮ ದುಬಾರಿ ಬೈಕು ಮಾದರಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ, ಬೆಳೆಯುವ ಮೊದಲೇ ಅಮೆರಿಕದ ದೈತ್ಯಬೈಕುಗಳ ಸಂಸ್ಥೆ ಹರ್ಲೆ ಡೇವಿಡ್ ಸನ್ ತನ್ನ ಛಾಪು ಮೂಡಿಸಲು ಹೊರಟಿದೆ. ಬೈಕು ಪ್ರಪಂಚದಲ್ಲಿ ಒಂದು ಶತಮಾನಕ್ಕೂ ಅಧಿಕ ಅನುಭವವುಳ್ಳ ಈ ಬೈಕ್ ಸಂಸ್ಥೆ ಭಾರತದ ಮಾರುಕಟ್ಟೆಗೆ ಜಿಗಿಯುವ ಬಗ್ಗೆ ಹೇಳಿಕೆ ನೀಡಿದ ಒಂಬತ್ತು ತಿಂಗಳೊಳಗೆ, ಬುಕ್ಕಿಂಗ್ ಆರಂಭಿಸಿದೆ. ಈ ಭರ್ಜರಿ ಬೈಕ್ ಗಳ ಮೋಡಿಗೆ ಸಿಲುಕಿರುವ ಜನ ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದಾರೆ. ಆನ್ ಲೈನ್ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.

ಒಟ್ಟು 12 ಮಾದರಿ ಬೈಕುಗಳು ಸದ್ಯ ಭಾರತದ ಗ್ರಾಹಕರಿಗೆ ಲಭ್ಯವಾಗಲಿದೆ. ದೆಹಲಿ, ಮುಂಬೈ, ಚಂಡೀಗಢ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಅಧಿಕೃತ ಡೀಲರ್ ಷೋರೂಂಗಳನ್ನು ಸಂಸ್ಥೆ ಆರಂಭಿಸಿದೆ. ಹರ್ಲೆ ಡೆವಿಡ್ ಸನ್ ಮೋಟರ್ ಸೈಕಲ್ ಕುಟುಂಬದ ಹೊಸ ಮಾದರಿಗಳಾದ ಸ್ಫೋರ್ಟ್ ಸ್ಟರ್, ಡೈನಾ, ವಿಆರ್ ಎಸ್ಸಿ, ಸಾಫ್ಟ್ ಟೈಲ್ ಮತ್ತು ಟೂರಿಂಗ್ ಭಾರತದಲ್ಲಿ ಬೇಡಿಕೆಯಿದೆ. ಬೆಲೆ ಸುಮಾರು ರು.6,95,000 ರಿಂದ ರು. 34,95,000 ಮಾತ್ರ(ನವದೆಹಲಿ ಷೋರೂಂ ಬೆಲೆಯಂತೆ). ಐಸಿಐಸಿಐ ಬ್ಯಾಂಕ್ ನ ಲೋನ್ ಪಡೆದು ಇಎಂಐ ಮೂಲಕ ಹಣ ಪಾವತಿಸುವ ಸೌಲಭ್ಯವು ಲಭ್ಯ.

ಸುಮಾರು 883 ಸಿಸಿ ಇಂದ 1803 ಸಿಸಿ ಸಾಮರ್ಥ್ಯದ ಬೈಕುಗಳನ್ನು ಭಾರತಕ್ಕೆ ಪರಿಚಯಿಸಲಾಗುತ್ತಿದ್ದು, ಈ ಬೈಕುಗಳನ್ನು ಓಡಿಸಲು ಗಂಡೆದೆ ಬೇಕು ಎನ್ನುತ್ತಾರೆ ಹರ್ಲೆ ಡೇವಿಡ್ ಸನ್ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥ ಸಂಜಯ್ ತ್ರಿಪಾಠಿ. 'ಭಾರತದ ಯುವಕರಲ್ಲಿರುವ ಬೈಕ್ ಕ್ರೇಜ್ ಲಾಭ ಪಡೆದು, ಉತ್ತಮ ಗುಣಮಟ್ಟ ಬೈಕ್ ಒದಗಿಸುವುದು ನಮ್ಮ ಉದ್ದೇಶ. ವಿಹಾರ ಹಾಗೂ ಪ್ರವಾಸಕ್ಕಾಗಿ ಬೈಕ್ ಬಳಕೆ ಹೆಚ್ಚುತ್ತಿದೆ. ಹರ್ಲೆ ಡೇವಿಡ್ ಸನ್ ಬೈಕುಗಳನ್ನು ಇಲ್ಲಿನ ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೆ ರೂಪಿಸಲಾಗಿದೆ' ಎಂದು ತ್ರಿಪಾಠಿ ಹೇಳಿದರು.

Most Read Articles

Kannada
Story first published: Thursday, April 22, 2010, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X