ಟ್ರಾಕ್ಟರಿಗೆ ರಿಮೋಟ್ ಚಾಲಕ, ನೇಗಿಲಯೋಗಿಗೆ ಸಹಾಯಕ

Sonalika Group
ರಿಮೋಟ್ ಕಂಟ್ರೋಲರ್ ವಾಹನಗಳೆಂಬುದು ಇನ್ನು ಮುಂದೆ ಮಕ್ಕಳಿಗೆ ಆಟಿಕೆ ಮಾತ್ರವಾಗಿ ಉಳಿಯುವುದಿಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ದೇಶದ ನೇಗಿಲ ಯೋಗಿ ರಿಮೋಟ್ ಕಂಟ್ರೋಲರ್ ಮೂಲಕ ಟ್ರಾಕ್ಟರ್ ಅಪರೇಟ್ ಮಾಡಬಹುದಾಗಿದೆ.

ನೂತನ ರಿಮೋಟ್ ಕಂಟ್ರೋಲರ್ ಟ್ರಾಕ್ಟರ್ ರೈತನಿಗೆ ವರದಾನವೆಂದು ಕಂಪನಿ ಹೇಳಿದೆ. ಯಾಕೆಂದರೆ ಪ್ರಸಕ್ತ ವಾತಾವರಣವು ರೈತರನ್ನು ದೈಹಿಕವಾಗಿ ಹಿಂಸಿಸಿಬಿಡುತ್ತದೆ. ಭಾರಿ ಮಳೆಗೆ, ಮೈಕೊರೆಯುವ ಚಳಿಗೆ, ಬಿಸಿಲ ಬೇಗೆಗೆ ಟ್ರಾಕ್ಟರ್ ಅಪರೇಟ್ ಮಾಡುವುದು ಕಷ್ಟ.

ಆದರೆ ನೂತನ ಟ್ರಾಕ್ಟರನ್ನು ರಿಮೋಟ್ ಕಂಟ್ರೊಲ್ ಮೂಲಕ ನಿಯಂತ್ರಿಸಬಹುದು. ಮಳೆ ಬಂದರೆ ಕೊಡೆಹಿಡಿದುಕೊಂಡು ರಿಮೋಟ್ ನಲ್ಲಿ ಟ್ರಾಕ್ಟರ್ ಬಿಡಬಹುದು. ಬಿಸಿಲು ಜೋರಾಗಿದ್ದರೆ ನೆರಳಲ್ಲಿ ಕುಳಿತುಕೊಂಡು, ಚಳಿಯಿದ್ದರೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ರಿಮೋಟ್ ಮೂಲಕ ಟ್ರಾಕ್ಟರ್ ಬಿಡಬಹುದು!

"ರೈತರಿಗೆ ಕೃಷಿ ಕೆಲಸ ಸುಲಭವಾಗುವಂತೆ ನೆರವಾಗುವ ರಿಮೋಟ್ ಕಂಟ್ರೋಲರ್ ಟ್ರಾಕ್ಟರ್ ಅಭಿವೃದ್ಧಿಪಡಿಸಿದ್ದೇವೆ. ಇದು ರೈತರ ಸಮಯ, ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸಲಿದೆ. ಈ ಅನ್ವೇಷಣೆ ಆರಂಭಿಕ ಹಂತದಲ್ಲಿದ್ದು ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಬೇಕಾಗಬಹುದು' ಎಂದು ಸೊನಾಲಿಕಾ ಗ್ರೂಪ್ ಚೇರ್ಮನ್ ಎಲ್. ಡಿ. ಮಿತ್ತಲ್ ಹೇಳಿದ್ದಾರೆ.

ಸೊನಾಲಿಕಾ ಗ್ರೂಪ್ ಈ ಟ್ರಾಕ್ಟರನ್ನು ತನ್ನ ಫ್ಲಾಗ್ ಷಿಪ್ ಕಂಪನಿ ಇಂಟರ್ ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್(ಐಟಿಎಲ್) ಸಹಯೋಗದೊಂದಿಗೆ ನಿರ್ಮಿಸಲಿದೆ. ಐಟಿಎಲ್ ದೇಶದ ಅಗ್ರ ಟ್ರಾಕ್ಟರ್ ಕಂಪನಿಗಳಲ್ಲಿ ಮೂರನೇ ಸ್ಥಾನದಲ್ಲಿದೆ.

More from DriveSpark

Article Published On: Friday, July 15, 2011, 11:51 [IST]
English summary
Sonalika Group, has come up with a new tractor model that can be controlled via remote.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+