ಒಂದು ಕೋಟಿ ರೂಪಾಯಿಯ ಬೆಂಝ್ ಸ್ಪೋರ್ಟಿ ಬ್ಯೂಟಿ

Mercedes Benz India
ಕೆಲವು ವಾಹನಗಳ ದರ ಕೇಳಿದರೆನೇ ನಮ್ಮ ಬ್ಯಾಂಕ್ ಅಕೌಂಟ್ ಬೆಚ್ಚಿ ಬೀಳುವಂತಿವೆ. ಐಷಾರಾಮಿ ವಾಹನ ಎಂಬುದು ಪ್ರೆಸ್ಟಿಜ್ ಪ್ರಶ್ನೆಯಾಗಿರುವುದರಿಂದ ಇಲ್ಲಿ ದರವೇ ಪ್ರಮುಖ ಮಾನದಂಡದಂತಿರುತ್ತದೆ. ಸದ್ಯ ದೇಶದಲ್ಲಿ ಕೋಟಿ ರೂ.ಗಿಂತ ಹೆಚ್ಚು ದರದ ಕೆಲವೇ ಕೆಲವು ಬೆರಳೆಣಿಕೆಯ ಲಕ್ಷುರಿ ವಾಹನಗಳಿವೆ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಬೆಂಝ್ ನ ನೂತನ ಜಿ-ಕ್ಲಾಸ್ ಎಸ್ ಯು ವಿ.

ವಿಶ್ವ ದರ್ಜೆಯ ಐಷಾರಾಮಿ ಕಾರ್ ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ನ ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿದೆ. ಸುಮಾರು 1.10 ಕೋಟಿ ರೂ. ದರದ ನೂತನ ಜಿ-ಕ್ಲಾಸ್ ಎಸ್ ಯುವಿ ವೆಹಿಕಲ್ ಗಳನ್ನು ಈ ತಿಂಗಳ ಅಂತ್ಯದಲ್ಲಿ ಇಲ್ಲಿನ ರಸ್ತೆಗೆ ತಂದು ಬಿಡಲಿದೆ. ದರ ಹೆಚ್ಚಾದರೂ ಇದಕ್ಕೆ ಬೇಡಿಕೆ ಕಡಿಮೆಯಾಗುವುದಿಲ್ಲ. ಈಗಾಗಲೇ 20 ನೂತನ ಜಿ-ಕ್ಲಾಸ್ ಕಾರ್ ಬುಕ್ಕಿಂಗ್ ಆಗಿರುವುದೇ ಇದಕ್ಕೆ ಸಾಕ್ಷಿ.

ನೂತನ ಎಸ್ ಯುವಿ ಈಗಾಗಲೇ ಜಾಗತಿಕವಾಗಿ ಮಿಂಚಿರುವ ಸ್ಪೋರ್ಟಿ ಬ್ಯೂಟಿಯಾಗಿದೆ. ಒಟ್ಟಾರೆ ಜಾಗತಿಕವಾಗಿ ಸುಮಾರು 2 ಲಕ್ಷದಷ್ಟು ಜಿ-ಕ್ಲಾಸ್ ಎಸ್ ಯುವಿ ಮಾರಾಟಗೊಂಡಿರುವುದಾಗಿ ಬೆಂಝ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಜಿ-ಕ್ಲಾಸ್ ಸ್ಪೋರ್ಟಿ ವಾಹನಗಳು ತನ್ನ ವೇಗದ ಆವೇಗದಿಂದ ಶ್ರೀಮಂತ ಕಾರ್ ಪ್ರೇಮಿಗಳ ಮೆಚ್ಚುಗೆ ಪಡೆದಿದೆ.

Article Published On: Tuesday, February 15, 2011, 16:22 [IST]
English summary
The Indian roads will very soon find the charm of a new SUV from the world Class luxury car maker Mercedes Benz, with the launch of its G Class. Priced at Rs1.10 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+