ಡುಕಾಟಿ-ಬೆಂಝ್ ಮೈತ್ರಿ, ಮರ್ಸಿಡಿಸ್ ಬೈಕ್ ಗ್ಯಾರಂಟಿ

Super-Bikes
ಇಟಲಿಯ ಡುಕಾಟಿ ಅಂದ್ರೆ ವಾಹನ ಲೋಕದ ಕೆಟ್ಟ ಹುಡುಗ. ಆ ಕಂಪನಿ ಹೊರತರುವುದೆಲ್ಲ ರಾಕೇಟ್ ವೇಗದ ಸೂಪರ್ ಬೈಕ್ ಗಳನ್ನು. ಡುಕಾಟಿ ಡೈವಲ್ ಇದಕ್ಕೆ ಪ್ರಮುಖ ಉದಾಹರಣೆ. ಸೂಪರ್ ಬೈಕ್ ಲೋಕದ ದಂತಕತೆ ಡುಕಾಟಿಯೊಂದಿಗೆ ಐಷಾರಾಮಿ ಕಾರ್ ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ಒಪ್ಪಂದವೊಂದು ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬೆಂಝ್ ಬೈಕ್ ಗಳು ರಸ್ತೆಗಿಳಿಯುವ ಸೂಚನೆ ದಟ್ಟವಾಗಿದೆ.

ಕಂಪನಿಯ ಕಾರ್ಯ ತಂತ್ರ ಭಾಗವಾಗಿ ಡುಕಾಟಿ ಮೋಟಾರ್ ನೊಂದಿಗೆ ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿರುವುದಾಗಿ ಮರ್ಸಿಡಿಸ್-ಎಎಂಜಿ ಜಿಎಂಬಿಚ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಟಿಸಿದ್ದಾರೆ. "ಎಎಂಜಿ ಮತ್ತು ಡುಕಾಟಿಗಳೆರಡು ಕಂಪನಿಗಳ ವಾಹನಗಳ ಕಾರ್ಯಕ್ಷಮತೆ ಹೆಚ್ಚಿಸಲು ಪಾಲುದಾರಿಕೆ ಮಾಡಿಕೊಂಡಿವೆ. ರೇಸಿಂಗ್ ಎಂಬುದು ಈಗ ಫ್ಯಾಷನ್. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರ ರೂಪಿಸಲಿದ್ದೇವೆ ಎಂದು ಕಂಪನಿಗಳೆರಡು ಪ್ರಕಟಣೆಯಲ್ಲಿ ಹೇಳಿದ್ದವು.

ಡೈಮ್ಲರ್-ಬೆಂಝ್ 1985ರಲ್ಲಿ ಇನ್ ಸ್ಪರ್ ಎಂಬ ದ್ವಿಚಕ್ರವಾಹನವನ್ನು ಪ್ರಾಯೋಗಿಕವಾಗಿ ಹೊರತಂದಿತ್ತು. ಆದರೆ ನಂತರ ಯಾಕೋ ಬೆಂಝ್ ಕಂಪನಿ ಬೈಕ್ ಮಾರುಕಟ್ಟೆಯತ್ತ ಮನಸ್ಸು ಮಾಡಿರಲಿಲ್ಲ. ಆದರೆ ಈಗ ಪರಿಸರ ಮಾಲಿನ್ಯ ಕಡಿಮೆ ಮಾಡುವುದು ಮತ್ತು ಕಾರ್ಬನ್ ಲಿಮಿಟ್ಸ್ ಗಮನದಲ್ಲಿಟ್ಟುಕೊಂಡು ಕಂಪನಿ ಬೈಕ್ ನತ್ತ ಮುಖಮಾಡಿದೆ ಎನ್ನಲಾಗಿದೆ. ಕಾರ್ ಗಳಿಗೆ ಹೋಲಿಸಿದರೆ ಬೈಕ್ ಹೊರಸೂಸುವ ಕಾರ್ಬನ್ ಕಡಿಮೆ.

ಬೈಕ್ ಮಾರುಕಟ್ಟೆಗೆ ಪ್ರವೇಶಿಸುವ ಕುರಿತು ಬೆಂಝ್ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಇವೆರಡು ಕಂಪನಿಗಳು ಮೈತ್ರಿಮಾಡಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಝ್ ಬೈಕ್ ಗಳು ರಸ್ತೆಗಿಳಿದರೆ ಯಾವುದೇ ಅಚ್ಚರಿಯಿಲ್ಲ. ಡುಕಾಟಿ ಈಗಾಗಲೇ ದೇಶದ ರಸ್ತೆಗೆ ತಿಂಗಳ ಹಿಂದೆ 5 ಸೂಪರ್ ಬೈಕ್ ತಂದುಬಿಟ್ಟಿದೆ. ಸೂಪರ್ ಬೈಕ್ ಲೋಕದಲ್ಲಿ ಬೆಂಝ್ ಕಮಾಲ್ ಏನಿದೆಯೋ ಕಾದು ನೋಡಬೇಕಿದೆ.

More from DriveSpark

Article Published On: Monday, February 14, 2011, 10:29 [IST]
English summary
Luxury car maker Mercedes Benz is now planning to devolpe luxury motorcycles. So very soon the stylish luxurious motorcycle which was branded by Benz should going hit the roads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+