ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

Written By:

ಗೋವಾದಲ್ಲಿ ಸೂಪರ್ ಬೈಕ್ ಪ್ರಿಯರಿಗಾಗಿ ನಡೆಯುತ್ತಿರುವ 5ನೇ ಆವೃತ್ತಿಯ ಐಬಿಡಬ್ಲ್ಯು (ಇಂಡಿಯಾ ಬೈಕ್ ವೀಕ್) ಉತ್ಸವದಲ್ಲಿ ಅಹಿತಕರ ಘಟನೆ ಒಂದು ನಡೆದಿದ್ದು, ಕವಸಾಕಿ ಸೂಪರ್ ಬೈಕ್ ವಿನ್ಯಾಸದ ಬಗ್ಗೆ ಕಮೆಂಟ್ ಮಾಡಿದ್ದ ಯುವಕನಿಗೆ ಬೈಕ್ ಪ್ರಿಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.

ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಕಳೆದ 3 ದಿನಗಳಿಂದ ಗೋವಾದಲ್ಲಿ ನಡೆಯುತ್ತಿರುವ ಇಂಡಿಯಾ ಬೈಕ್ ವೀಕ್ ಉತ್ಸುವವು ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಂತೆ ಮಾಡಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನ ಬೈಕ್ ಉತ್ಸವ ನೋಡಲು ಹರಿದು ಬರುತ್ತಿದೆ. ಆದ್ರೆ ಈ ವೇಳೆ ಬೈಕ್ ವಿಕ್ಷಣೆಗೆ ಬಂದಿದ್ದ ಯುವಕನೊಬ್ಬ ಕವಸಾಕಿ ಬೈಕ್ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿ ಸೂಪರ್ ಬೈಕ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಕವಾಸಕಿ ಝೆಡ್800 ಬೈಕ್ ಬಗ್ಗೆ ತನ್ನ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಇದೊಂದು ಕೆಟ್ಟದಾದ ಬೈಕ್ ಆಗಿದ್ದು, ಬೈಕಿನ 'ಎಂಜಿನ್ ಮತ್ತು ಕ್ಲಚ್ ಪ್ಲೇಟ್‌ಗೆ ರಿಪ್' ಎಂದು ಪೊಸ್ಟ್ ಮಾಡಿದ್ದಾನೆ. ಬೈಕ್ ಬಗ್ಗೆ ಪೊಸ್ಟ್ ಮಾಡಿದ ಅರ್ಧಗಂಟೆಯಲ್ಲೇ ಬೈಕ್ ಮಾಲೀಕನ ಕೈ ಸಿಕ್ಕಿಬಿದ್ದಿದ್ದಾನೆ.

ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಕವಾಸಕಿ ಝೆಡ್800 ಸೂಪರ್ ಬೈಕ್ ಬಗ್ಗೆ ಕೆಟ್ಟ ಸಂದೇಹ ನೀಡುತ್ತಿದ್ದಾನೆ ಆರೋಪಿಸಿದ ಬೈಕ್ ಮಾಲೀಕ ಮತ್ತು ಆತನ ಸ್ನೇಹಿತರು ಪೋಸ್ಟ್ ಮಾಡಿದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಲ್ಲದೇ ಮಾಡಿದ ತಪ್ಪಿಗೆ ಎಲ್ಲರ ಮುಂದೆ ಕ್ಷಮೆ ಕೇಳುವಂತೆ ಮಾಡಿದ್ದಾರೆ.

Recommended Video - Watch Now!
Jeep Dealership Executives In Mumbai Beat Up Man Inside Showroom
ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಇನ್ನು ಹಲ್ಲೆಗೆ ಒಳಗಾದ ಯುವಕನನ್ನು ಮುಂಬೈ ಮೂಲದ ಸೌರಭ್ ಮಾಯೆಕರ್ ಎಂದು ಗುರುತಿಸಲಾಗಿದ್ದು, ಈತನ ಕೂಡಾ ಸೂಪರ್ ಬೈಕ್ ಪ್ರಿಯನಾಗಿದ್ದ. ಜೊತೆಗೆ ಬೈಕ್ ಬ್ಲಾಗರ್ ಕೂಡಾ ಆಗಿದ್ದಾ. ಇದೇ ಕಾರಣಕ್ಕೆ ಸೌರಭ್ ಐಬಿಡಬ್ಲ್ಯು ಉತ್ಸವ ನೋಡಲು ಗೋವಾಗೆ ಬಂದಿದ್ದ.

ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಆದ್ರೆ ಬಂದ ಕೆಲಸವನ್ನು ಮುಗಿಸಿಕೊಂಡು ಹೋಗುವುದನ್ನು ಬಿಟ್ಟು ಬೈಕ್ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿ ಒದೆ ತಿಂದಿದ್ದಾನೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸೌರಭ್ ಪರ ನಿಂತಿರುವ ಸೂಪರ್ ಬೈಕ್ ಪ್ರಿಯರು ಹಲ್ಲೆ ಮಾಡಿರುವ ಕ್ರಮ ಖಂಡಿಸಿದ್ದಾರೆ.

ತಪ್ಪದೇ ಓದಿ- ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಕವಾಸಕಿ ಬೈಕ್ ಬಗ್ಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಯುವಕನಿಗೆ ಹಿಗ್ಗಾಮಗ್ಗ ಥಳಿತ

ಘಟನೆ ನಂತರ ತನ್ನ ಬ್ಲಾಗ್‌ನಿಂದ ಕವಾಸಕಿ ಬೈಕ್ ವಿನ್ಯಾಸದ ಬಗ್ಗೆ ಹಾಕಲಾಗಿದ್ದ ಫೋಸ್ಟ್ ಅನ್ನು ಅಳಿಸಿ ಹಾಕಿರುವ ಸೌರಭ್, ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕಾಗಿ ಬೈಕ್ ಮಾಲೀಕನ ಬಳಿ ಕ್ಷಮೆ ಕೋರಿದ್ದಾನೆ ಎನ್ನಲಾಗಿದೆ.

ಇಷ್ಟೆಲ್ಲಾ ಆಗಿದ್ದರು ಈ ಬಗ್ಗೆ ಯಾವುದೇ ಪ್ರಕರಣ ಕೂಡಾ ದಾಖಲಾಗಿಲ್ಲ. ಬೈಕ್ ಉತ್ಸವದಲ್ಲಿ ನಡೆದ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ತಪ್ಪದೇ ಓದಿ-ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

English summary
Read in Kannada: Mumbai Vlogger bullied and manhandled at IBW for calling a superbike ugly – Video
Story first published: Wednesday, November 29, 2017, 17:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark