ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

Written By:

ಸೂಪರ್ ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ ಸಂಸ್ಥೆಯು ಮುಂಬರುವ ದಿನಗಳಲ್ಲಿ 790 ಡ್ಯೂಕ್ ಬೈಕ್ ಮಾದರಿಯನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದ್ದು, ಅದಕ್ಕೂ ಮುನ್ನ ಪ್ರತಿಷ್ಠಿತ ಇಐಸಿಎಂಎ ಆಟೋ ಮೇಳದಲ್ಲಿ ಹೊಸ ಬೈಕ್ ಮಾದರಿಯನ್ನು ಪ್ರದರ್ಶನಗೊಳಿಸಿದೆ.

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಕಳೆದ ವರ್ಷವೇ 790 ಡ್ಯೂಕ್ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿದ್ದ ಕೆಟಿಎಂ ಸಂಸ್ಥೆಯು ಇದೀಗ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಸೂಪರ್ ಬೈಕ್ ಮಾದರಿಗಳಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಕೆಟಿಎಂ ನಿರ್ಮಾಣ ಮಾಡಿರುವ 790 ಡ್ಯೂಕ್ ಬೈಕ್ ಮಾದರಿಯು 799 ಸಿಸಿ ಪ್ಯಾರಾಲೆಲ್ ಎಂಜಿನ್ ಹೊಂದಿದ್ದು, 103.5-ಬಿಎಚ್‌ಪಿ ಮತ್ತು 86-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, 88 ಎಂಎಂ ಬೋರ್ ಮತ್ತು 65.7 ಮಿಮೀ ಸ್ಟ್ರೋಕ್, ಡಬಲ್ ಓವರ್‌ಹೆಡ್ ಕ್ಯಾಮ್‌ಕಾಫ್ಟ್‌ಗಳನ್ನು ಹೊಂದಿದೆ. ಈ ಮೂಲಕ ಹೊಸ ಬೈಕು 169 ಕೆಜಿ ತೂಕವನ್ನು ಪಡೆದುಕೊಂಡಿದ್ದು, 14 ಲೀಟರ್ ಇಂಧನ ಟ್ಯಾಂಕ್ ಜೋಡಣೆ ಹೊಂದಿದೆ.

Recommended Video - Watch Now!
Kawasaki Z900RS And Ninja 400 Unveiled In 2017 Tokyo Motor Show - DriveSpark
ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಇನ್ನು ಬೈಕ್ ವಿನ್ಯಾಸದಲ್ಲಿ ಮಹತ್ತರ ಬದಲಾಣೆ ತರಲಾಗಿದ್ದು, 790 ಡ್ಯೂಕ್ ಕ್ರೋಮಿಯಂ ಮೊಲಿಬ್ಡಿನಮ್-ಸ್ಟೀಲ್ ಮಿಶ್ರಲೋಹ ಟ್ರಸ್ ಫ್ರೇಮ್ ಅನ್ನು ಹೊಂದಿದೆ. ಹೀಗಾಗಿ ಸಸ್ಪೆನ್ಷನ್ ನಿರ್ವಹಿಸುವ ಮುಂಭಾಗದಲ್ಲಿ 43ಎಂಎಂ ಡಬ್ಲ್ಯು ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಈ ಹಿಂದಿನ ಡಬ್ಲ್ಯುಪಿ ಮೋನೊ ಶಾರ್ಕ್‌ಗಳನ್ನು ತಲೆಕೆಳಗಾಗಿ ವಿನ್ಯಾಸ ಮಾಡಲಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಇದರೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರಗಳಿಗೆ 4-ಪಿಸ್ಟನ್ ಕ್ಲಿಪರ್ ಮತ್ತು ಸಿಂಗಲ್ ಮಾದರಿಯ 240 ಎಂಎಂ ಡಿಸ್ಕ್ ಹಾಗಿಯೇ ಹಿಂಭಾಗದ ಚಕ್ರದಲ್ಲಿ ಟು ಪಿಸ್ಟನ್ ಕ್ಲಿಪರ್ ಅಳವಡಿಸಲಾಗಿದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಹಾಗೆಯೇ ಹೊಸ ಬೈಕ್‌ನಲ್ಲಿ ಬೋಷ್ ನಿರ್ಮಾಣದ ಎಬಿಎಸ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿದ್ದು, 17 ಇಂಚಿನ ಅಲಾಯ್ ವೀಲ್ಹ್ ಜೊತೆಗೆ ಟ್ರ್ಯಾಕ್ ಮೂಡ್ ಚಾಲನಾ ಆಯ್ಕೆಯನ್ನು ಒದಗಿಸಲಾಗಿದೆ.

ಬಿಡುಗಡೆಗೆ ಸಿದ್ಧಗೊಂಡ ಕೆಟಿಎಂ 790 ಡ್ಯೂಕ್ ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

390 ಡ್ಯೂಕ್ ನಂತರ 690 ಡ್ಯೂಕ್ ಪರಿಚಯಿಸುವ ಇರಾದೆಯಲ್ಲಿದ್ದ ಕೆಟಿಎಂ ಸಂಸ್ಥೆಯು 690 ಡ್ಯೂಕ್‌ಗೆ ಮುನ್ನವೇ 790 ಡ್ಯೂಕ್ ಪರಿಚಯಿಸುತ್ತಿದ್ದು, ಸೂಪರ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆಯನ್ನು ಹುಟ್ಟುಹಾಕಿದೆ.

Trending On DriveSpark Kannada:

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

English summary
EICMA 2017: KTM 790 Duke Revealed.
Story first published: Thursday, November 9, 2017, 14:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark