ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

Written By:

ಸೂಪರ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕವಾಸಕಿ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಿಂಜಾ 125 ಮತ್ತು ಝೆಡ್125 ಬೈಕ್‌ಗಳನ್ನು ಪರಿಚಯಿಸಲು ಮುಂದಾಗಿದ್ದು, ಇದಕ್ಕೆ ಪೂರಕ ಎಂಬಂತೆ ಹೊಸ ಬೈಕ್‌ಗಳ ಟೀಸರ್ ಕೂಡಾ ಬಿಡುಗಡೆಗೊಳಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ 125 ಸಿಸಿ ಇಂದ 220 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್‌ಗಳಿಗೆ ಭಾರೀ ಬೇಡಿಕೆಯಿದ್ದು, ಇದೇ ಉದ್ದೇಶದಿಂದ ದೇಶಿಯ ಮಾರುಕಟ್ಟೆಯಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ತವಕದಲ್ಲಿರುವ ಕವಾಸಕಿ ಸಂಸ್ಥೆಯು ನಿಂಜಾ 125 ಮತ್ತು ಝಡ್125 ಅಭಿವೃದ್ಧಿಗೊಳಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ಇನ್ನು ಹೊಸ ಬೈಕ್‌ಗಳ ಕುರಿತಾಗಿ ಮಿಲಾನ್ ನಲ್ಲಿ ನಡೆಯುತ್ತಿರುವ 2017ರ ಇಐಸಿಎಂಎ ಆಟೋ ಮೇಳದಲ್ಲಿ ಟೀಸರ್ ಪ್ರದರ್ಶನ ಮಾಡಿದ್ದು, ಸದ್ಯದಲ್ಲೇ ಜಾಗತಿಕ ಮಾರುಕಟ್ಟೆಗೆ ನಿಂಜಾ 125 ಮತ್ತು ಝಡ್125 ಪರಿಚಯಿಸುವ ಬಗ್ಗೆ ಇರಾದೆ ವ್ಯಕ್ತಪಡಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕವಾಸಕಿ ನಿರ್ಮಾಣದ ಬೈಕ್‌ಗಳಲ್ಲಿ ಝಡ್250 ಮಾದರಿಯೇ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್ ಉತ್ಪನ್ನವಾಗಿದ್ದು, ಇದೇ ಉದ್ದೇಶದಿಂದ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ಯೋಜನೆಯಲ್ಲಿದೆ.

Recommended Video - Watch Now!
[Kannada] Triumph Street Triple RS Launched In India - DriveSpark
ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ನಿಂಜಾ 125 ಮತ್ತು ಝಡ್125 ವಿಶೇಷತೆ ಏನು?

ನಿರ್ಮಾಣ ಹಂತದಲ್ಲಿರು ನಿಂಜಾ 125 ಮತ್ತು ಝಡ್125 ಬೈಕ್ ಮಾದರಿಗಳು 125ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಸೂಪರ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಲಿವೆ. ಹೀಗಾಗಿ ಹೊಸ ಬೈಕ್‌ಗಳು ಯುವ ಸಮುದಾಯವನ್ನು ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ.

ತಪ್ಪದೇ ಓದಿ-ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ಜೊತೆಗೆ ಸೂಪರ್ ಬೈಕ್‌ಗಳ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನವನ್ನು ಕೂಡಾ ನಿಂಜಾ 125 ಮತ್ತು ಝಡ್125ನಲ್ಲಿ ಒದಗಿಸಲಾಗುತ್ತಿದ್ದು, ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಆರಂಭಿಕ ಹಂತದ ಉತ್ಪನ್ನಗಳಲ್ಲೇ ನೀಡಲು ಕವಾಸಕಿ ಸಂಸ್ಥೆಯು ಮುಂದಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ಕವಾಸಕಿ ನಿಂಜಾ 125 ಮತ್ತು ಝಡ್125?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಸೂಪರ್ ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ಕವಾಸಕಿಯು ಇದೀಗ ಆರಂಭಿಕ ಹಂತದ ನಿಂಜಾ 125 ಮತ್ತು ಝಡ್125 ಪರಿಚಯಿಸಲು ಮುಂದಾಗುತ್ತಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

English summary
Read in Kannada about Kawasaki Ninja 125 And Z125 In The Works.
Story first published: Saturday, November 11, 2017, 11:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark