ಪರವೂರಿನಲ್ಲಿ ಆಪತ್ಬಾಂದವ ವಿಎಕ್ಸ್ 140 ಜಿಪಿಎಸ್ ಸಿಸ್ಟಮ್

ಇಂತಹ ಮಾರ್ಗ ದರ್ಶಕ ಉತ್ಪನ್ನವೊಂದು ಇಲ್ಲಿದೆ. ಹೆಸರು ಜಿಪಿಎಸ್ ನ್ಯಾವಿಗೇಟರ್ ವಿಎಕ್ಸ್ 140. ವ್ಯಾರೆಂಟಿ ಒಂದು ವರ್ಷ. ದರ ಸುಮಾರು 15 ಸಾವಿರ ರೂ. ಆಸುಪಾಸು. ಇದರ ಕೆಲವು ಪ್ರಮುಖ ಫೀಚರ್ ಗಳು ಇಲ್ಲಿದೆ.
* ಇದು ಹೊಸ ಪವರ್ ಫುಲ್ ಮಾರ್ಗದರ್ಶಕ. ಸುಲಭವಾಗಿ ಇದನ್ನು ಆಪರೇಟ್ ಮಾಡಬಹುದಾಗಿದ್ದು, ಇದರಿಂದ ಸುರಕ್ಷಿತವಾಗಿ ನಿಮ್ಮ ಗಮ್ಯ ತಲುಪಬಹುದು.
* ಸ್ಯಾಟಲೈಟ್ ನೆರವಿನಿಂದ ಇದು ಕಾರ್ಯ ನಿರ್ವಹಿಸುತ್ತದೆ. ನಿಮಗೆ ಹೋಗಬೇಕಾದ ಸ್ಥಳ, ಅಲ್ಲಿರುವ ಪ್ರಮುಖ ತಾಣಗಳ ಬಗ್ಗೆಯೂ ಮಾಹಿತಿ ನೀಡುತ್ತದೆ.
* ಇದು ಭಾರತದ 401 ನಗರಗಳಲ್ಲಿ, 4,10,000 ಪಟ್ಟಣಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ ದಾರಿ ತೋರಿಸುತ್ತದೆ.
* ವಿಎಕ್ಸ್140 ಹಾರ್ಡ್ ವೇರ್ ಹೊಂದಿರುವ ಇದು ಸ್ಯಾಟಲೈಟ್ ನೆರವಿನಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
* 4.3 ಸೆಂಟಿಮೀಟರ್ನ ಟಚ್ ಸ್ಕ್ರೀನ್ ಹೊಂದಿದ್ದು, ಡ್ರೈವಿಂಗ್ ಮಾಡುತ್ತ ಸುಲಭವಾಗಿ ವೀಕ್ಷಿಸಬಹುದಾಗಿದೆ. ಇದರ ಸ್ಪೀಕರ್ ಸ್ಪಷ್ಟವಾಗಿ ಧ್ವನಿ ಕೇಳಿಸುತ್ತದೆ. ದೀರ್ಘಾವಧಿ ಬ್ಯಾಟರಿ ಬಾಳಿಕೆಯನ್ನೂ ಹೊಂದಿದೆ.
* ಬೇಕಾದಷ್ಟು ಮನರಂಜನೆ ಸಾಧನಗಳು ಇದರಲ್ಲಿವೆ. ಅಂದರೆ ಗೇಮ್ಸ್ ಆಡಬಹುದು, ವಿಡಿಯೋ ವೀಕ್ಷಿಸಬಹುದು, ಸಂಗೀತ ಆಲಿಸಬಹುದು, ಟೆಕ್ಸ್ಟ್ ದಾಖಲೆಗಳನ್ನು ಓದಬಹುದು, ಬ್ಲೂಟೂಥ್ ಮೂಲಕ ಕರೆ ಸ್ವೀಕರಿಸಬಹುದಾಗಿದೆ.
* ಇದಕ್ಕೆ ಮೊಬೈಲ್ ಫೋನ್ ಸಂಪರ್ಕ ಕಲ್ಪಿಸಬಹುದಾಗಿದ್ದು, ಈ ಸಾಧನದಲ್ಲಿಯೇ ಕರೆ ಮಾಡಬಹುದು, ಕರೆ ಸ್ವೀಕರಿಸಬಹುದು, ಅಡ್ರೆಸ್ ಬುಕ್ ವೀಕ್ಷಿಸಬಹುದಾಗಿದೆ.


Click it and Unblock the Notifications








