ಕ್ಷೆನನ್, ಸಫಾರಿ ಸವಾರಿ; ರೇಸಿಂಗ್ ಗೆ ಟಾಟಾ ರೆಡಿ

Tata Motors
ರೇಸಿಂಗ್ ಅಂದಾಗ ಫೆರಾರಿ, ಮೆಕ್ ಲಾರೆನ್ ಕಾರ್ ಗಳನನ್ನು ಮಾತ್ರ ನೆನಪುಮಾಡಿಕೊಳ್ಳುವುದೇಕೆ? ಕ್ಷೆನನ್, ಸಫಾರಿ ಕಾರ್ ಗಳನ್ನು ಕೂಡ ನೆನಪಿಸಿಕೊಳ್ಳಬಹುದು. ದೇಶದ ಟಾಟಾ ಮೋಟರ್ಸ್ ಕೂಡ ರೋಡ್ ರೇಸ್ ನಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ವ್ರೋಂ.. ವ್ರೋಂ... ಅಂತ ಸದ್ದು ಮಾಡುತ್ತ. ಧೂಳಿನ ತ್ಸುನಾಮಿ ನಡುವೆ ಸಾಗುವುದಕ್ಕೆ ಟಾಟಾದ ಬಳಿಯೂ ಎರಡು ಪ್ರಮುಖ ಕಾರ್ ಗಳಿವೆ. ಕ್ಷೆನನ್, ಸಫಾರಿ ಮೂಲಕ ಮುಂದಿನ ವಾರ ಅಹ್ಮದಾಬಾದ್ ನಲ್ಲಿ ನಡೆಯಲ್ಲಿರುವ ಮೋಟರ್ ಸ್ಪೋರ್ಟ್ ಪೈಪೋಟಿಯಲ್ಲಿ ಟಾಟಾ ಪೌರುಷ ಪ್ರದರ್ಶಿಸಲಿದೆ.

ಟಾಟಾ ಮೋಟರ್ಸ್ ತನ್ನೆರಡು ಕಿಲ್ಲರ್ ಕಾರ್ ಗಳಾದ ಟಾಟಾ ಸಫಾರಿ ಮತ್ತು ಕ್ಷೆನನ್ ಎಕ್ಸ್ ಟಿ ಮೂಲಕ ರೇಸಿಂಗ್ ಇವೆಂಟ್ ನಲ್ಲಿ ಭಾಗವಹಿಸಲಿದೆ. ಕಂಪನಿಯ ರೈಡ್ ದಿ ಹಿಮಾಲಯಸ್ ತಂಡ ರೇಸಿಂಗ್ ನಲ್ಲಿ ಕಂಪನಿಯನ್ನು ಪ್ರತಿನಿಧಿಸಲಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ಪನ್ನಗಳ ತಂತ್ರಜ್ಞಾನ ಸಾಮರ್ಥ್ಯವನ್ನು ಬಹಿರಂಗಪಡಿಸಲಿರುವುದಾಗಿ ಟಾಟಾ ಮೋಟರ್ಸ್ ಪ್ಯಾಸೆಂಜರ್ ಕಾರ್ ವಿಭಾಗದ ಉಪಾಧ್ಯಕ್ಷರು ಹೇಳಿದ್ದಾರೆ.

ಇಂತಹ ರೇಸಿಂಗ್ ಟಾಟಾ ಮೋಟರ್ಸ್ ಗೆ ಹೊಸತೇನಲ್ಲ. ಕಳೆದ 2007ರಿಂದಲೇ ಮೋಟರ್ ಸ್ಪೋರ್ಟ್ ನಲ್ಲಿ ಭಾಗವಹಿಸುತ್ತಿದೆ. 1998ರಲ್ಲಿ ಲಂಡನ್ ಕೇಪ್ ಟೌನ್ ರಾಲಿಯಲ್ಲಿ, 2005ರ ಏಷ್ಯಾ ರಾಲಿಯಲ್ಲಿ, 2007ರ ಸಾರ್ಕ್ ರಾಲಿಯಲ್ಲಿ ಟಾಟಾ ಮೋಟರ್ಸ್ ನ ಸಫಾರಿ ಕಾರ್ ಭಾಗವಹಿಸಿತ್ತು.

ಸಫಾರಿ ಮತ್ತು ಕ್ಷೆನನ್ ಪಿಕ್ ಅಪ್ ಗಳೆರಡರ ರೇಸಿಂಗ್ ಅನುಭವ ಅನನ್ಯ. ಈ ರೇಸಿಂಗ್ ಇವೆಂಟ್ ಏಪ್ರಿಲ್ ನಲ್ಲಿ ಕೋರಿಯಾ, ಇಂಡೋನೇಷ್ಯಾ, ಸಿಂಗಪುರ ಮತ್ತು ಭಾರತದಲ್ಲಿ ನಡೆಯಲಿದೆ. ಇಂತಹ ಕಾರ್ಯಕ್ರಮಗಳು ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಅವಕಾಶಗಳಾಗಿದ್ದು, ಇಲ್ಲಿ ತಂತ್ರಜ್ಞಾನದ ಪರೀಕ್ಷೆ ಮತ್ತು ಅಭಿವೃದ್ಧಿಯೂ ಈ ಇವೆಂಟ್ ನಲ್ಲಿ ಸೇರಿದೆ ಎಂದು ಕಂಪನಿ ಪ್ರಕಟಿಸಿದೆ.

More from DriveSpark

Article Published On: Wednesday, February 16, 2011, 11:26 [IST]
English summary
The Motorsport is nothing new for the Tata Motors which has already fixed the deputation of its two giant killers, Tata Safaris and two numbers of Xenon XT cars. These vehicles will sprint into the Desert Storm Rally slated for the next week in Ahmedabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+