ಟಾಟಾ ಮೋಟರ್ಸ್ ಗೆ ಮತ್ತೆ ಶುಕ್ರದೆಸೆ

ಕಳೆದ ತಿಂಗಳಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಮಾರಾಟ 20,377 ಯೂನಿಟ್ ಗೆ ತಲುಪಿದ್ದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 25ರಷ್ಟು ಏರಿಕೆ ಕಂಡಿದೆ. ಆದರೆ ಐಷಾರಾಮಿ ಕಾರ್ ಜಾಗ್ವಾರ್ ಮಾರಾಟ 3,056ಕ್ಕೆ ತಲುಪಿದ್ದು ಕೇವಲ ಶೇ. 3ರಷ್ಟು ಏರಿಕೆ ದಾಖಲಿಸಿದೆ. ಜನವರಿಯಲ್ಲಿ ಪ್ರಯಾಣಿಕ ಕಾರ್ ಮಾರಾಟ 53,183 ಯೂನಿಟ್ ಗೆ ತಲುಪಿದ್ದು ಶೇ. 17ರಷ್ಟು ಏರಿಕೆ ಕಂಡಿದೆ.
ಕಳೆದ ಏಪ್ರಿಲ್ ನಿಂದ ಜನವರಿವರೆಗೆ ಕಂಪನಿಯ ವಾಹನ ಮಾರಾಟ 8,68,583 ಯೂನಿಟ್ ಗೆ ತಲುಪಿದ್ದು ಶೇ. 17ರಷ್ಟು ಹೆಚ್ಚಾಗಿದೆ. ಇದೇ ರೀತಿ ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ವಾಣಿಜ್ಯ ವಾಹನ ಮಾರಾಟ4,59,822 ಯೂನಿಟ್ ತಲುಪಿದ್ದು ಶೇ. 27ರಷ್ಟು ಏರಿಕೆ ದಾಖಲಿಸಿದೆ.


Click it and Unblock the Notifications








